ನರೇಂದ್ರ ಪ.ಪೂ.ಕಾಲೇಜಿನಲ್ಲಿ ಗುರು ಪೂರ್ಣಿಮೆ ಆಚರಣೆ

0

ಪುತ್ತೂರು: ಯಾವುದೇ ಓರ್ವ ವ್ಯಕ್ತಿ ಯಶಸ್ಸನ್ನು ಸಾಧಿಸಬೇಕೆಂದರೆ ಅವನ ಮುಂದೆ ಗುರಿ ಇರಬೇಕು, ಹಿಂದೆ ಗುರುವಿರಬೇಕು ಎನ್ನುವ ನಂಬಿಕೆಯಿದೆ. ಗುರುವಿಲ್ಲದೆ ಜೀವನಕ್ಕೆ ಅಥವಾ ಜ್ಞಾನಕ್ಕೆ ಯಾವುದೇ ರೀತಿಯ ಅರ್ಥವಿರುವುದಿಲ್ಲ. ನಮ್ಮ ಮೊದಲ ಗುರು ತಾಯಿ ನಮಗೆ ಜೀವನದ ಅರ್ಥವನ್ನು ನೀಡುತ್ತಾಳೆ. ಅದೇ ರೀತಿ ಜೀವನಕ್ಕೆ ಅಗತ್ಯವಾದ ಜ್ಞಾನವನ್ನು ಗುರು ನೀಡುತ್ತಾನೆ. ಅಂದರೆ, ಗುರುವಿಲ್ಲದೆ ಏನೂ ಸಾಧ್ಯವಿಲ್ಲ.ಎಂದು ವಿದ್ಯಾಭಾರತಿ ಜಿಲ್ಲಾ ಯೋಗ ಶಿಕ್ಷಣ ಸಂಯೋಜಕ ಚಂದ್ರಶೇಖರ ದೇಲಂಪಾಡಿ ಹೇಳಿದರು.


ನರೇಂದ್ರ ಪ.ಪೂ.ಕಾಲೇಜಿನಲ್ಲಿ ಗುರು ಪೂರ್ಣಿಮೆಯ ಆಚರಣೆಯ ಕಾರ್‍ಯಕ್ರಮದಲ್ಲಿ ಅವರು ಜು.3ರಂದು ಮಾತನಾಡಿದರು.ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು. ಕಾರ್‍ಯಕ್ರಮದಲ್ಲಿ ದ್ವಿತೀಯ ವಾಣಿಜ್ಯ ವಿದ್ಯಾರ್ಥಿನಿಯಾದ ಕು. ಸುಮಾ ಭಟ್ ಇವರು ಸ್ವಾಗತಿಸಿ,ವಂದಿಸಿದರು.


ವಿಶೇಷವಾಗಿ ಭಾರತದಲ್ಲಿ, ಗುರುವು ಶಿಕ್ಷಣವನ್ನು ನೀಡುವುದು ಮಾತ್ರವಲ್ಲದೆ ತನ್ನ ಶಿಷ್ಯರಲ್ಲಿ ಮೌಲ್ಯಗಳನ್ನು ಕಲಿಸುವ ಮತ್ತು ಜೀವನದ ಪ್ರಮುಖ ಪಾಠಗಳನ್ನು ಕಲಿಸುವ ವ್ಯಕ್ತಿ ಎಂದು ಗೌರವಿಸಲಾಗುತ್ತದೆ. ಆದ್ದರಿಂದ, ಜ್ಞಾನ, ಶಿಕ್ಷಣ ಅಥವಾ ಕೌಶಲ್ಯದ ರೂಪದಲ್ಲಿ ನಾವು ಯಾರ ಆಶೀರ್ವಾದವನ್ನು ಪಡೆಯುತ್ತೇವೆಯೋ ಅವರನ್ನು ಗೌರವಿಸಲು ಮೀಸಲಾದ ದಿನ ಈ ಗುರು ಪೂರ್ಣಿಮಾವಾಗಿದೆ.

LEAVE A REPLY

Please enter your comment!
Please enter your name here