ಪುತ್ತೂರು: ಸಂತ ಫಿಲೋಮಿನ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಸಂಘ ರೋವರ್‍ಸ್ ಮತ್ತು ರೇಂಜರ್‍ಸ್ ಆಶ್ರಯದಲ್ಲಿ ಇತ್ತೀಚೆಗೆ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಚಾರಣವನ್ನು ಕೈಗೊಂಡಿತ್ತು. ಇದೇ ಸಂದರ್ಭದಲ್ಲಿ ಪಾಣಾಜೆ ಕಿಲಂಪಾಡಿ ಕೊರಗ ನಲಿಕೆಯವರನ್ನು ಸಂದರ್ಶನ ನಡೆಸಲಾಯಿತು. ನಲಿಕೆ ಜನಾಂಗದವರ ಕುಲಕಸುಬು, ನೇಮ ಕಟ್ಟುವ ಕುರಿತಾಗಿ ಮಾಹಿತಿಯನ್ನು ಪಡೆದುಕೊಂಡರು. ಆರ್ಲಪದವಿನ ಜಾಂಬ್ರಿ ಬೆಟ್ಟ ಪ್ರದೇಶಕ್ಕೆ ವಿದ್ಯಾರ್ಥಿಗಳು ಚಾರಣವನ್ನು ನಡೆಸಿದರು. ಸುಮಾರು 35 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಕಾಲೇಜಿನ ಉಪನ್ಯಾಸಕ ಸುರೇಶ್ ಕುಮಾರ್, ಸಂದೇಶ್ ಲೋಬೊ, ಶರತ್ ಆಳ್ವ ಸಹಕರಿಸಿದರು.