ರಾಮಕುಂಜ: ’ಪ್ರಣವ್ ಪೌಂಡೇಶನ್ ವತಿಯಿಂದ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಡಿಜಿಟಲ್ ಉಪಕರಣಗಳನ್ನು ಕೊಡುಗೆಯಾಗಿ ನೀಡಿದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ದೊರಕುವಂತಹ ಡಿಜಿಟಲ್ ತರಗತಿಗೆ ಅಗತ್ಯವಿರುವ ಸುಮಾರು ರೂ.3 ಲಕ್ಷದಷ್ಟು ವೆಚ್ಚವಿರುವ ಟಿ.ವಿ. ಹಾಗೂ ಲ್ಯಾಪ್ಟಾಪ್ಗಳನ್ನು ಬೆಂಗಳೂರಿನ ’ಪ್ರಣವ ಪೌಂಡೇಶನ್’ ಶಾಲೆಗೆ ಕೊಡುಗೆ ರೂಪದಲ್ಲಿ ನೀಡಿದರು. ಪ್ರಣವ್ ಪೌಂಡೇಶನ್ನ ಟ್ರಸ್ಟಿಯಾದ ಮಂಜುನಾಥ ಉಡುಪರವರು ಕಾರ್ಯಕ್ರಮ ಉದ್ಘಾಟಿಸಿದರು. ಪ್ರಣವ್ ಪೌಂಡೇಶನ್ನ ಟ್ರಸ್ಟಿಗಳಾದ ಜನಾರ್ದನ್ ಎಸ್ ಪುತ್ತೂರು, ದೀಪಕ್ ನಾಗರಾಜ್, ವಿಷ್ಣು ಕಟ್ಟಿ ಹಾಗೂ ಪ್ರಣವ್ ಪೌಂಡೇಶನ್ನ ರಾಕೇಶ್, ಅಮಿತ್ ಹೆಬ್ಬಾರ್ ಹಾಗೂ ಎನ್ಐಐಟಿಯ ಕಿಶೋರ್ರವರು ಉಪಸ್ಥಿತರಿದ್ದರು. ಅತಿಥಿಗಳಿಗೆ ಶಾಲಾ ಸಂಸ್ಥೆಯ ವತಿಯಿಂದ ಹಾಗೂ ಪ್ರಣವ್ ಪೌಂಡೇಶನ್ನ ವತಿಯಿಂದ ಗೌರವಿಸಲಾಯಿತು. ವಿದ್ಯಾರ್ಥಿಯಾದ ಶ್ರವಣ್ ಕುಮಾರ್ ಪ್ರಾರ್ಥಿಸಿದರು. ಮುಖ್ಯಗುರು ಸತೀಶ್ ಭಟ್ ಸ್ವಾಗತಿದರು. ಶಿಕ್ಷಕ ವಿಘ್ನೇಶ್ ವಿ.ನಿರೂಪಿಸಿದರು. ಪ್ರವೀಣ್ ಜೈನ್ ವಂದಿಸಿದರು.