ಬಡಗನ್ನೂರು: ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘ ಪುತ್ತೂರು, ಬಿಲ್ಲವ ಗ್ರಾಮ ಸಮಿತಿ ಪಡುವನ್ನೂರು- ಬಿಲ್ಲವ ಮಹಿಳಾ ವೇದಿಕೆ ಪಡುವನ್ನೂರು- ಸುಳ್ಯಪದವು ಇದರ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಬ್ಯಾಗ್ ವಿತರಣೆ, ಪ್ರತಿಭಾ ಪುರಸ್ಕಾರ, ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜು.29 ರಂದು ಸುಳ್ಯಪದವು ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಸಿ ನಾರಾಯಣ ರೆಂಜ ಉದ್ಘಾಟಿಸಿ ಮಾತನಾಡಿ ನಾನು ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಆರಾಧಿಸಿಕೊಂಡು ಬಂದವ, ಹಾಗೂ ಅವರ ತತ್ವ ಆದರ್ಶಗಳನ್ನು ಅನುಸರಿಸಿಕೊಂಡು ಬಂದುದರಿಂದ ಸಮಾಜದಲ್ಲಿ ಇಷ್ಟು ಎತ್ತರಕ್ಕೆ ಬೆಳೆದು ನಿಲ್ಲುದಕ್ಕೆ ಸಾಧ್ಯವಾಗಿದೆ.ಅದರಿಂದ ತಾವುಗಳು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಹಾಗೂ ಆದರ್ಶ ತಮ್ಮ ಜೀವನದಲ್ಲಿ ಅಳವಡಿಸಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳುವಂತೆ ಹೇಳಿ ಶುಭ ಹಾರೈಸಿದರು.
ಪಡುವನ್ನೂರು ಗ್ರಾಮ ಸಮಿತಿ ಅಧ್ಯಕ್ಷ ಜನಾರ್ದನ ಪೂಜಾರಿ ಪದಡ್ಕ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಿತಿ ಸದಸ್ಯ ಲೋಕೇಶ್ ಪೂಜಾರಿ ಶಬರಿನಗರ ಕೂಲಿ ಕೆಲಸ ಮಾಡುವ ಸಂದರ್ಭದಲ್ಲಿ ಯಂತ್ರ ಅವಘಡದಲ್ಲಿ ಕಾಲುಮೂರಿತಕ್ಕೊಳಪಟ್ಟು ಅನಾರೋಗ್ಯದಲ್ಲಿದ್ದಾರೆ. ಅವರ ಆರೋಗ್ಯ ಸುಧಾರಿಸುವ ತನಕ ಅವರ ಮನೆಗೆ ಅಧ್ಯಕ್ಷ ನೆಲೆಯಲ್ಲಿ ವೈಯಕ್ತಿಕವಾಗಿ ದಿನಸಿ ಸಾಮಾಗ್ರಿಗಳನ್ನು ಒದಗಿಸುವುದಾಗಿ ಹೇಳಿದರು.
ವೇದಿಕೆಯಲ್ಲಿ ವಲಯ ಸಂಚಾಲಕ ಮೋನಪ್ಪ ಪೂಜಾರಿ ಕೆರೆಮಾರು, ಪುತ್ತೂರು, ಬಿಲ್ಲವ ಸಂಘದ ಕೋಶಾಧಿಕಾರಿ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ಪಡುವನ್ನೂರು ಗ್ರಾಮ ಸಮಿತಿ ಗೌರವಾಧ್ಯಕ್ಚ ಗಿರೀಶ್ ಕುಮಾರ್ ಪಿ ಎಸ್, ಉಪಾಧ್ಯಕ್ಷ ವಿಠ್ಠಲ ಸುವರ್ಣ, ಪಡುವನ್ನೂರು ಮಹಿಳಾ ಸಮಿತಿ ಅಧ್ಯಕ್ಷೆ ಸವಿತಾ ರಘುನಾಥ್ ಸಜಂಕಾಡಿ, ಉಪಸ್ಥಿತರಿದ್ದರು.
ಬ್ಯಾಗ್ ವಿತರಣೆ
ಅಂಗನವಾಡಿಯಿಂದ ಹಿಡಿದು ಉನ್ನತ ವ್ಯಾಸಂಗದ ವರೆಗಿನ ಬಿಲ್ಲವ ಸಮಾಜದ ವಿದ್ಯಾರ್ಥಿಗಳಿಗೆ ಸಮಿತಿ ವತಿಯಿಂದ ಬ್ಯಾಗ್ ವಿತರಣೆ ಮಾಡಲಾಯಿತು. ಪ್ರತಿಭಾ ಪುರಸ್ಕಾರ:-
ದ್ವಿತಿಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 88% ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಕುಮಾರಿ ಶ್ರಾವ್ಯ ಇವರನ್ನು ಶಾಲು, ಫಲಪುಷ್ಪ, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಸನ್ಮಾನ:-
ಸುಮಾರು 40 ವರ್ಷಗಳಿಂದ ಮೂರ್ತೆದಾರರಾಗಿ ಕೆಲಸ ಮಾಡುತ್ತ ಬಂದಿರುವ ಅಂತಪ್ಪ ಪೂಜಾರಿ ಕೆಲಂದೂರು, ಬಟ್ಯಪ್ಪ ಪೂಜಾರಿ ಮಡತನಮೂಲೆ, ಮತ್ತು ಪೂವಪ್ಪ ಪೂಜಾರಿ ಕೋಡಿಜಾಲು ಇವರನ್ನು ಶಾಲು, ಹಾರ, ಫಲಪುಷ್ಪ ಸ್ಮರಣಿಕೆ, ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ವಿನಾಯ ಕುಮಾರಿ, ಹಾಗೂ ಸುಮಿತ್ರಾ ರಾಜೇಶ್ ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬಿಲ್ಲವ ಸಮಿತಿ ಪದಾಧಿಕಾರಿಗಳು ಸದಸ್ಯರು ಹಾಗೂ ಸಮಾಜ ಭಾಂಧವರು ಮತ್ತು ಶಾಲಾ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಉಪಾಧ್ಯಕ್ಷ ವಿಠ್ಠಲ ಸುವರ್ಣ ಸ್ವಾಗತಿಸಿ, ಗೌರವಧ್ಯಕ್ಷ ಗಿರೀಶ್ ಕುಮಾರ್ ವಂದಿಸಿದರು. ರಾಜೇಶ್ ಎಂ ಕಾರ್ಯಕ್ರಮ ನಿರೂಪಿಸಿ, ಕು.ವಿನಿಷಾ ಹಾಗೂ ನೀಕ್ಷಾ ಪ್ರಾರ್ಥಿಸಿದರು.