ಪುತ್ತೂರು:ಕೇರಳ ಕೊಟ್ಟಾಯಂ ನಿವಾಸಿ, ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ನಿವೃತ್ತ ಪ್ರೊ|ಟಿ.ಓ ಜೋನ್(80ವ.) ರವರು ಅಸೌಖ್ಯದಿಂದ ಜು.3 ರಂದು ಕೇರಳದಲ್ಲಿ ನಿಧನ ಹೊಂದಿದ್ದಾರೆ.
ಮೃತ ಪ್ರೊ|ಟಿ.ಓ ಜೋನ್ ರವರು ಮೃದು ಸ್ವಭಾವದವರಾಗಿದ್ದು ಫಿಲೋಮಿನಾ ಕಾಲೇಜಿನಲ್ಲಿ 1969-70ರಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ಸೇವೆಗೆ ಸೇರಿದ್ದು, ಸುಮಾರು 33 ವರ್ಷಗಳ ಕಾಲ ಕಾಲೇಜಿನಲ್ಲಿ ಸೇವೆ ಸಲ್ಲಿಸಿ 2002 ರಲ್ಲಿ ನಿವೃತ್ತಿ ಹೊಂದಿದ್ದರು. ಮೃತರು ಪತ್ನಿ ಲಿಝಿ ಜೋನ್, ಪುತ್ರ ಜಿಮ್ಮಿ ಜೋನ್, ಪುತ್ರಿ ಜ್ಯೋತಿ ಜೋನ್ ರವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಜು.5 ರಂದು ಕೇರಳದಲ್ಲಿ ಅಪರಾಹ್ನ ನೆರವೇರಲಿದೆ ಎಂದು ಮೃತರ ಪುತ್ರ ಜಿಮ್ಮಿ ಜೋನ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.