ಪುತ್ತೂರು:ಪುತ್ತೂರು ಲಯನ್ಸ್ ಕ್ಲಬ್ ಕಾವು ವತಿಯಿಂದ ಸುಳ್ಯ ಕೆ ವಿ ಜಿ ಡೆಂಟಲ್ ಕಾಲೇಜು ಇದರ ಸಂಯುಕ್ತ ಆಶ್ರಯದಲ್ಲಿ ಕಾವು ಸರಕಾರಿ ಉನ್ನತಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವು ನಡೆಯಿತು.
ಪುತ್ತೂರು ಕಾವು ಲಯನ್ಸ್ ಕ್ಲಬ್ ನ ಸ್ಥಾಪಕಾಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ದೀಪ ಬೆಳಗಿಸಿ ಮಕ್ಕಳನ್ನು ಮತ್ತು ದಂತ ಚಿಕಿತ್ಸಾ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.
ಲಯನ್ಸ್ ಕ್ಲಬ್ ನ ನೂತನ ಅಧ್ಯಕ್ಷ ಕಾವು ದಿವ್ಯಾನಾಥ್ ಶೆಟ್ಟಿ ಅಧ್ಯಕ್ಷ ಅಧಿಕಾರವನ್ನು ಸ್ವೀಕರಿಸಿದ ಐದನೇ ದಿನದಲ್ಲಿ ಪ್ರಥಮ ಕಾರ್ಯಕ್ರಮ ಮತ್ತು ಮುಂದೆ ನಿರಂತರವಾಗಿ ಕಾರ್ಯಕ್ರಮವನ್ನು ನಡೆಸುವುದಾಗಿ ತಿಳಿಸಿದರು.ಜಿಲ್ಲಾ ಲಿಯೋ ನೂತನ ಅಧ್ಯಕ್ಷೆ ಕಾವು ಡಾ. ರಂಜಿತಾ ಶೆಟ್ಟಿ ದಂತ ಚಿಕಿತ್ಸಾ ನೇತೃತ ವಹಿಸಿದರು.ಕೆ ವಿ ಜಿ ದಂತ ಮಹಾ ವಿದ್ಯಾಲಯದ ಪ್ರೋಫೇಸರ್ ಡಾ. ಅರವಿಂದ್,ಮಾಜಿ ಜಿಲ್ಲಾ ಶಿಕ್ಷಣ ಮತ್ತು ಆರೋಗ್ಯ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ್ ಶೆಟ್ಟಿ ಮತ್ತು ಲಯನ್ಸ್ ನ ಕಾರ್ಯದರ್ಶಿ ದೇವಣ್ಣ ರೈ ಮುದರ ಪಳ್ಳ, ಖಜಾ0ಚಿ ಕೆ ಕೆ ಇಬ್ರಾಹಿಂ ಹಾಜಿ, ಸದಸ್ಯರಾದ ದೇವೀಶ್ ರೈ, ಅಬ್ದುಲ್ ರಹಿಮಾನ್, ಶ್ರೀಮತಿ ಸುರೇಖಾ ಡಿ ಶೆಟ್ಟಿ, ಶಾಲಾ ಮುಖ್ಯಪಾಧ್ಯಾಯಿನಿ ಮತ್ತು ಶಿಕ್ಷಕ ವೃಂದ ಉಪಸ್ಥಿತರಿದ್ದರು.