ಪುತ್ತೂರು: ಪುತ್ತೂರಿನ ಹಿರಿಯ ಕ್ಲಬ್ ಎನಿಸಿದ ರೋಟರಿ ಕ್ಲಬ್ ಪುತ್ತೂರು ಇದರ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ನೊಣಾಲು ಜೈರಾಜ್ ಭಂಡಾರಿ, ಕಾರ್ಯದರ್ಶಿಯಾಗಿ ಸುಜಿತ್ ಡಿ.ರೈ, ಕೋಶಾಧಿಕಾರಿಯಾಗಿ ಎಂ.ಸಂಕಪ್ಪ ರೈ ಆಯ್ಕೆಯಾಗಿರುತ್ತಾರೆ.
ಉಪಾಧ್ಯಕ್ಷರಾಗಿ ಹಾಗೂ ನಿಯೋಜಿತ ಅಧ್ಯಕ್ಷರಾಗಿ ಡಾ.ಶ್ರೀಪತಿ ರಾವ್ ಯು, ನಿಕಟಪೂರ್ವ ಅಧ್ಯಕ್ಷರಾಗಿ ಉಮಾನಾಥ್ ಪಿ.ಬಿ, ಜೊತೆ ಕಾರ್ಯದರ್ಶಿಯಾಗಿ ದೀಪಕ್ ಕೆ.ಪಿ, ಬುಲೆಟಿನ್ ಎಡಿಟರ್ ಆಗಿ ಕೆ.ಬಾಲಕೃಷ್ಣ ಆಚಾರ್ಯ, ಸಾರ್ಜಂಟ್ ಎಟ್ ಆಮ್ಸ್೯ ಅಶೋಕ್ ಕುಮಾರ್ ಬಲ್ನಾಡು, ಎಕ್ಸಿಕ್ಯೂಟಿವ್ ಕಾರ್ಯದರ್ಶಿ ಶ್ರೀಕಾಂತ್ ಕೊಳತ್ತಾಯ, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಡಾ.ಶ್ರೀಪ್ರಕಾಶ್ ಬಿ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಸೋಮಶೇಖರ್ ರೈ ಇ, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಝೇವಿಯರ್ ಡಿ’ಸೋಜ, ಇಂಟರ್ ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ವಿ.ಜೆ ಫೆರ್ನಾಂಡೀಸ್, ಯೂತ್ ಸರ್ವಿಸ್ ನಿರ್ದೇಶಕರಾಗಿ ಪರಮೇಶ್ವರ ಗೌಡ, ಚೇರ್ ಮ್ಯಾನ್ ಗಳಾಗಿ ಪಲ್ಸ್ ಪೋಲಿಯೋ ಡಾ.ಸೀತಾರಾಮ್ ಭಟ್, ಟಿ.ಆರ್.ಎಫ್ ಡಾ.ಶ್ಯಾಮ್ ಬಿ, ಮೆಂಬರ್ ಶಿಪ್ ಡೆವಲಪ್ಮೆಂಟ್ ಎಂ.ಜಿ ಅಬ್ದುಲ್ ರಫೀಕ್, ಟೀಚ್ ಸುರೇಶ್ ಶೆಟ್ಟಿ, ವಿನ್ಸ್ ಕಿಶನ್ ಬಿ.ವಿ, ವೆಬ್ ಗುರುರಾಜ್ ಕೊಳತ್ತಾಯ, ಸಿ.ಎಲ್.ಸಿ.ಸಿ ಹೆರಾಲ್ಡ್ ಮಾಡ್ತಾ, ಎಥಿಕ್ಸ್ ಸತೀಶ್ ನಾಯಕ್ ಎಂ, ಪಬ್ಲಿಕ್ ಇಮೇಜ್ ದಿನೇಶ್ ಭಟ್, ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಲೋವಲ್ ಮೇವಡ, ಪ್ರೋಗ್ರಾಂ ಕಮಿಟಿ ಸುಬ್ಬಪ್ಪ ಕೈಕಂಬ, ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಪ್ರೇಮಾನಂದ, ರೋಟರ್ಯಾಕ್ಟ್ ಕ್ಲಬ್ ಪ್ರಗತಿ ಪ್ಯಾರಾಮೆಡಿಕಲ್ ಪ್ರೀತಾ ಹೆಗ್ಡೆ, ರೋಟರ್ಯಾಕ್ಟ್ ಕ್ಲಬ್ ಸ್ವರ್ಣ ರಾಜ್ ಗೋಪಾಲ್ ರವರು ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರ ಪರಿಚಯ:
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನೋಣಾಲು ಜೈರಾಜ್ ಭಂಡಾರಿರವರು ಕಲ್ಲಾಜೆ ಪೂರ್ಣಯ್ಯ ಭಂಡಾರಿ ಹಾಗೂ ಶ್ರೀಮತಿ ನೋಣಾಲು ನಾಗಿ ಪಿ.ಭಂಡಾರಿರವರ ಪುತ್ರನಾಗಿ ಜನಿಸಿದ್ದು, ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರೈಸಿ, ಬಳಿಕ ಪಿಯುಸಿ ಶಿಕ್ಷಣವನ್ನು ಕೊಂಬೆಟ್ಡು ಜ್ಯೂನಿಯರ್ ಕಾಲೇಜು, ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿಎಸ್ಸಿ ಪದವಿಯನ್ನು ಪಡೆದಿರುತ್ತಾರೆ. ಪದವಿ ವಿದ್ಯಾಭ್ಯಾಸದ ಬಳಿಕ 1975ರಲ್ಲಿ ದಿ.ಮೂಲ್ಕಿ ಸುಂದರಾಂ ಶೆಟ್ಟಿಯವರ ಧೀಮಂತ ನಾಯಕತ್ವದಲ್ಲಿ ಪ್ರೇರಿತರಾಗಿ ವಿಜಯಾ ಬ್ಯಾಂಕಿನಲ್ಲಿ ಜೈರಾಜ್ ಭಂಡಾರಿರವರು ಸೇವೆಯನ್ನು ಆರಂಭಿಸಿದ್ದು, ಜಬಲ್ಪುರ್, ಬರೋಡ, ಬೆಂಗಳೂರು, ಮಂಗಳೂರು ಹಾಗೂ ಪುತ್ತೂರಿನ ಕಾಣಿಯೂರು, ವಿಟ್ಲ ಹೀಗೆ ವಿವಿಧ ಶಾಖೆಗಳಲ್ಲಿ 27 ವರ್ಷಗಳ ಸೇವೆ ಸಲ್ಲಿಸಿ ತನ್ನ 47ರ ವಯಸ್ಸಿನಲ್ಲಿ ಸ್ವಯಂ ನಿವೃತ್ತಿ ಹೊಂದಿದ್ದರು. ಸ್ವಯಂ ನಿವೃತ್ತಿ ಬಳಿಕ ಜೈರಾಜ್ ಭಂಡಾರಿರವರು ಕೃಷಿ ಹಾಗೂ ಕೋಳಿ ಸಾಕಾಣಿಕೆ ಉದ್ಯಮದಲ್ಲಿ ತೊಡಗಿಸಿಕೊಂಡಿರುವರು. ಅಪ್ಪಟ ಕಲಾಪ್ರೇಮಿಯಾಗಿರುವ ಜೈರಾಜ್ ಭಂಡಾರಿಯವರು ಯಕ್ಷಗಾನ, ನಾಟಕ, ಹಾಡುಗಾರಿಕೆ ಹಾಗೂ ನೃತ್ಯವನ್ನು ಹವ್ಯಾಸವಾಗಿಸಿಕೊಂಡಿರುತ್ತಾರೆ.
1996ರಲ್ಲಿ ಮಂಗಳೂರಿನ ರೋಟರಿ ಕ್ಲಬ್ ಗೆ ಸದಸ್ಯರಾಗಿ ಸೇರುವ ಮೂಲಕ ಸಮಾಜಮುಖಿ ಚಟುವಟಿಕೆಗಳಿಗೆ ತನ್ನನ್ನು ತಾನು ತೊಡಗಿಸಿಕೊಂಡಿದ್ದು 2002ರಲ್ಲಿ ರೋಟರಿ ಕ್ಲಬ್ ಪುತ್ತೂರು ಇದರಲ್ಲಿ ಸೇರ್ಪಡೆಗೊಂಡು ಹಲವಾರು ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುತ್ತಾರೆ. ಪ್ರಸ್ತುತ ರೋಟರಿ ಕ್ಲಬ್ ಪುತ್ತೂರು ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿದ್ದು, ಜೈರಾಜ್ ಭಂಡಾರಿರವರು ಪತ್ನಿ ಡಿಂಬ್ರಿಗುತ್ತು ತಾರಾ ಜೆ.ಭಂಡಾರಿ, ಕೆನಡದಲ್ಲಿ ನೆಲೆಸಿರುವ ಈರ್ವರು ಪುತ್ರಿಯರಾದ ಜೈಹಿತ ಹಾಗೂ ಏಕ್ತಾರವರನ್ನು ಹೊಂದಿದ್ದು ನೆಮ್ಮದಿಯ ಬದುಕಲ್ಲಿ ಸಾಗುತ್ತಿದ್ದಾರೆ.
ನೂತನ ಕಾರ್ಯದರ್ಶಿ ಪರಿಚಯ:
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಡಿ. ಸುಜಿತ್ ರೈರವರು ನುಳಿಯಾಲು ದಿ.ದೇವಣ್ಣ ರೈ ಹಾಗೂ ಬೋಳಿಯಾರುಗುತ್ತು ಚಂದ್ರಾವತಿ ರೈ ಅವರ ಪುತ್ರರಾಗಿದ್ದು ಮಂಗಳೂರಿನಲ್ಲಿ ವಿದ್ಯಾಭ್ಯಾಸ ಪಡೆದು, ಆಟೋಮೊಬೈಲ್’ನಲ್ಲಿ ಪದವಿ ಪಡೆದರು. ನಂತರ ಉದ್ಯೋಗದ ನಿಮಿತ್ತ ಬೆಂಗಳೂರಿಗೆ ತೆರಳಿದರು. 2001ರಲ್ಲಿ ದರ್ಬೆ ಬೈಪಾಸ್ ಜಂಕ್ಷನ್ ಬಳಿ ಪ್ರಿಸಿಷನ್ ಕಾರ್ ಕೇರ್ ಸೆಂಟರ್ ಎಂಬ ಮಾರುತಿ ವರ್ಕ್ ಶಾಪ್ ಅನ್ನು ಪಾಲುದಾರಿಕೆಯಲ್ಲಿ ತೆರೆದು, ವ್ಯವಹಾರ ಮಾಡುತ್ತಾ ಬರುತ್ತಿದ್ದಾರೆ. ಮಾರುತಿ ಉದ್ಯೋಗ್ ಲಿಮಿಟೆಡ್ ನಲ್ಲಿ ಕೊಡಲ್ಪಡುವ ‘ಅನ್ ಮೋಲ್ ರತನ್ಎಂಬ ಬಿರುದನ್ನು ಇವರು ದುಬೈನಲ್ಲಿ ಪಡೆದಿದ್ದು ವ್ಯವಹಾರ ಕ್ಷೇತ್ರದಲ್ಲಿ ಹಲವಾರು ಪುರಸ್ಕಾರಗಳನ್ನು ಪಡೆದಿದ್ದು, 2017, 2018, 2019ರಲ್ಲಿ ‘ಬೆಸ್ಟ್ ಫರ್ಫಾಮೆನ್ಸ್ ಅವಾರ್ಡ್ ಪಡೆದಿರುತ್ತಾರೆ. ಇವರು ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ರೋಟರಿಯಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದು ಇವರು ಪತ್ನಿ ಪ್ರತಿಭಾ ಎಸ್. ರೈ, ಮಕ್ಕಳಾದ ಸ್ವಯಂ ಎಸ್. ರೈ, ಸ್ವಾಧಿ ಎಸ್. ರೈರವರೊಂದಿಗೆ ಮುಕ್ರಂಪಾಡಿಯಲ್ಲಿ ನೆಲೆಸಿರುತ್ತಾರೆ.
ನೂತನ ಕೋಶಾಧಿಕಾರಿ ಪರಿಚಯ:
ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ವಿಜಯಾ ಬ್ಯಾಂಕ್ ನ ನಿವೃತ್ತ ಸೀನಿಯರ್ ಮ್ಯಾನೇಜರ್ಎಂ .ಸಂಕಪ್ಪ ರೈಯವರು ಪೂವನಡ್ಕ ದಿ. ಕೊರಗಪ್ಪ ರೈ ಮತ್ತು ಕಂರ್ಬೈಲುಗುತ್ತು ದೇವಕಿ ರೈ ಯವರ ಪುತ್ರನಾಗಿದ್ದು, ತನ್ನ ಪ್ರಾಥಮಿಕ,ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಮೇನಾಲ, ಈಶ್ವರಮಂಗಲ, ಪೆರ್ನಾಜೆ, ಉಜಿರೆ ಹಾಗೂ ಪುತ್ತೂರಲ್ಲಿ ಮುಗಿಸಿ,1974-75ನೇ ವರ್ಷದಲ್ಲಿ ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲೆ ಈಶ್ವರಮಂಗಲದಲ್ಲಿ ಅಧ್ಯಾಪಕರಾಗಿ ಸೇವೆಯನ್ನು ಆರಂಭಿಸಿದರು.1976ರಲ್ಲಿ ವಿಜಯಾ ಬ್ಯಾಂಕ್ ಗೆ ಸೇರ್ಪಡೆಗೊಂಡು ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಸಿಎಐಐಬಿ ವಿದ್ಯಾರ್ಹತೆಯನ್ನು ಗಳಿಸಿರುತ್ತಾರೆ. ತನ್ನ 37 ವರ್ಷಗಳ ಸೇವಾವಧಿಯಲ್ಲಿ ದೇಶದ ನಾನಾ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದು ಬ್ಯಾಂಕ್ ನ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಹಲವು ಪುರಸ್ಕಾರಗಳನ್ನು ಗಳಿಸಿರುತ್ತಾರೆ. ನಾಟಕಗಳಲ್ಲಿ ಅಭಿನಯ ಹಾಗೂ ಕ್ರೀಡೆಗಳಾದ ಬ್ಯಾಡ್ಮಿಂಟನ್,ಟೆನ್ನಿಸ್ ಇವರ ಹವ್ಯಾಸವಾಗಿದ್ದು ನಿವೃತ್ತರಾದ ಬಳಿಕ ಧಾರ್ಮಿಕ,ಸಾಮಾಜಿಕ ಸೇವೆ ಗಳೊಂದಿಗೆ ಕೃಷಿ ಕ್ಷೇತ್ರದಲ್ಲಿ ತೊಡಗಿಸುತ್ತಾ ಪತ್ನಿ ನಿವೃತ್ತ ಬ್ಯಾಂಕ್ ಉದ್ಯೋಗಿ ರತ್ನಾ ರೈ, ಪುತ್ರಿಯರಾದ ಡಾ.ಶ್ವೇತಾ, ಉಪನ್ಯಾಸಕಿ ಸ್ಮಿತಾರವರೊಂದಿಗೆ ಪುತ್ತೂರಲ್ಲಿ ವಾತ್ಸವ್ಯ ಹೊಂದಿದ್ದಾರೆ.
ಜು.7 ರಂದು ಪದಪ್ರದಾನ…
ರೋಟರಿ ಕ್ಲಬ್ ಪುತ್ತೂರು ಇದರ 2023-24ನೇ ಸಾಲಿನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮವು ಜು.7 ರಂದು ಸಂಜೆ ಪ್ರಶಾಂತ್ ಮಹಲ್ ನ ಸಭಾಂಗಣದಲ್ಲಿ ನೆರವೇರಲಿದೆ. ಪದ ಪ್ರದಾನ ಅಧಿಕಾರಿಯಾಗಿ ರೋಟರಿ ಕ್ಲಬ್ ಮಂಗಳೂರು ಇದರ ಅಧ್ಯಕ್ಷ ಕಿಶನ್ ಕುಮಾರ್ ರವರು ಪದ ಪ್ರದಾನವನ್ನು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮೂಡಬಿದ್ರೆ ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ಚೇರ್ ಮ್ಯಾನ್ ಡಾ|ಎಂ.ಮೋಹನ್ ಆಳ್ವ, ಉಪಸ್ಥಿತಿಯಾಗಿ ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪೈ, ವಲಯ ಸೇನಾನಿ ಝೇವಿಯರ್ ಡಿ’ಸೋಜರವರು ಭಾಗವಹಿಸಲಿದ್ದಾರೆ ಎಂದು ಕ್ಲಬ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.