ಸರ್ವೆ ಷಣ್ಮುಖ ಯುವಕ ಮಂಡಲದಿಂದ ಭಕ್ತಕೋಡಿ ಶಾಲೆಗೆ ಕ್ರೀಡಾ ಸಾಮಾಗ್ರಿಗಳ ಕೊಡುಗೆ

0

ಪುತ್ತೂರು: ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆ ಇದರ ವತಿಯಿಂದ ಭಕ್ತಕೋಡಿ ಸ.ಹಿ.ಪ್ರಾ ಶಾಲಾ ಮಕ್ಕಳಿಗೆ ಅಗತ್ಯವಿದ್ದ ಕ್ರೀಡಾ ಸಾಮಾಗ್ರಿಗಳನ್ನು ಕೊಡುಗೆಯಾಗಿ ನೀಡಲಾಯಿತು.

ಯುವಕ ಮಂಡಲದ ಅಧ್ಯಕ್ಷ ಗೌತಮ್‌ರಾಜ್ ಕರುಂಬಾರು ಕ್ರೀಡಾ ಸಾಮಾಗ್ರಿಗಳನ್ನು ಶಾಲಾ ಮುಖ್ಯ ಗುರು ಗೀತಾರವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಯುವಕ ಮಂಡಲದ ಉಪಾಧ್ಯಕ್ಷ ಅಶೋಕ್ ಎಸ್.ಡಿ, ಸದಸ್ಯರಾದ ವಸಂತ ಪೂಜಾರಿ ಕೈಪಂಗಳ, ಮುಂಡೂರು ಗ್ರಾ.ಪಂ ಸದಸ್ಯ ಕಮಲೇಶ್ ಎಸ್.ವಿ, ಶಾಲಾ ಮೇಲುಸ್ತುವಾರಿ ಸಮಿತಿ ಸದಸ್ಯ ಲಕ್ಷ್ಮಣ ಆಚಾರ್ಯ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here