ಕುಂಬ್ರ: ರಸ್ತೆಯಲ್ಲೇ ಹರಿದ ನೀರು-ಚರಂಡಿ ದುರಸ್ತಿಗೊಳಿಸಿ ಮೆಚ್ಚುಗೆಗೆ ಪಾತ್ರವಾದ ಸಾರೆಪುಣಿಯ ವಿಖಾಯ ತಂಡ

0

ಪುತ್ತೂರು: ಭಾರೀ ಮಳೆಗೆ ಕುಂಬ್ರ, ಸಾರೆಪುಣಿ ಪರಿಸರದ ರಸ್ತೆಯಲ್ಲಿ ನೀರು ಹರಿದು, ರಸ್ತೆಯಲ್ಲೇ ನೀರು ಶೇಖರಣೆಗೊಂಡು ವಾಹನ ಸವಾರರಿಗೆ, ಪಾದಾಚಾರಿಗಳಿಗೆ ತೊಂದರೆ ಆಗಿರುವುದನ್ನು ಮನಗಂಡ ಎಸ್ಕೆಎಸ್ಸೆಸ್ಸೆಫ್ ಸಾರೆಪುಣಿ ವಿಖಾಯ ತಂಡದ ಸದಸ್ಯರು ಶ್ರಮದಾನದ ಮೂಲಕ ಚರಂಡಿ ದುರಸ್ತಿಗೊಳಿಸಿದ್ದಾರೆ.


ಕುಂಬ್ರ ಸಮೀಪದ ಸಾರೆಪುಣಿ ಪರಿಸರ ಹಾಗೂ ಕುಂಬ್ರ ಕೆಇಬಿ ಬಳಿಯ ರಸ್ತೆಯಲ್ಲಿ ನೀರು ನಿಂತಿರುವುದನ್ನು ಮನಗಂಡ ವಿಖಾಯ ಸದಸ್ಯರು ಶ್ರಮದಾನ ಮೂಲಕ ನೀರು ಹರಿದು ಹೋಗುವಂತೆ ಮಾಡಿದ್ದಾರೆ. ವಿಖಾಯ ಸದಸ್ಯರ ಸೇವೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ಶ್ರಮದಾನದ ನೇತೃತ್ವ ವಹಿಸಿದ್ದ ಕುಂಬ್ರ ವಲಯ ವಿಖಾಯ ಜನರಲ್ ಕನ್ವೀನರ್ ಅಶ್ರಫ್ ಸಾರೆಪುಣಿ ಮಾತನಾಡಿ ನಾವು ಹಲವು ವರ್ಷಗಳಿಂದ ವಿಖಾಯ ಮೂಲಕ ತುರ್ತು ಸಂದರ್ಭಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು ಯಾವುದೇ ತುರ್ತು ಸಂದರ್ಭಗಳಲ್ಲಿ ಕಾರ್ಯಾಚರಿಸಲೂ ನಮ್ಮ ತಂಡ ಸರ್ವ ಸನ್ನದ್ದವಾಗಿದೆ ಎಂದು ತಿಳಿಸಿದ್ದಾರೆ.ಶ್ರಮದಾನದಲ್ಲಿ ವಿಖಾಯ ಸದಸ್ಯರಾದ, ಸಾರೆಪುಣಿ ನಿವಾಸಿಗಳಾದ ಉಸ್ಮಾನ್, ಝಕರಿಯಾ, ಮುಝಮ್ಮಿಲ್, ಶರಫುದ್ದೀನ್, ಉನೈಸ್, ನವಾಝ್ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here