ರೋಟರಿ ಪುತ್ತೂರು ಸಿಟಿ ಪದಪ್ರದಾನ

0

ಭ್ರಾತ್ವತ್ವದ ಮನೋಭಾವದಿಂದ ಸೇವಾ ಮನೋಭಾವ ಸಾಧ್ಯ-ಪ್ರಕಾಶ್ ಕಾರಂತ್

ಪುತ್ತೂರು: ವಿದ್ಯೆಯಿಂದ ವಿನಯ, ವಿನಯದಿಂದ ಯೋಗ್ಯತೆ, ಯೋಗ್ಯತೆಯಿಂದ ಭ್ರಾತೃತ್ವ ಬರುತ್ತದೆ. ಯಾರು ಭ್ರಾತೃತ್ವದ ಮನೋಭಾವ ಹೊಂದುತ್ತಾರೆಯೋ ಅವರಿಗೆ ಸಮಾಜದಲ್ಲಿ ಸೇವೆಯ ಮನೋಭಾವ ಉಂಟು ಮಾಡಬಲ್ಲುದು ಎಂದು ನಿರ್ಗಮನ ಜಿಲ್ಲಾ ಗವರ್ನರ್ ಮೇಜರ್ ಡೋನರ್ ಪ್ರಕಾಶ್ ಕಾರಂತ್‌ರವರು ಹೇಳಿದರು.


ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ನಾಲ್ಕರ ರೋಟರಿ ಕ್ಲಬ್ ಪುತ್ತೂರು ಸಿಟಿ ಇದರ 2023-24ನೇ ಸಾಲಿನ ನೂತನ ಪದಾದಿಕಾರಿಗಳ ಪದಪ್ರದಾನ ಸಮಾರಂಭವು ಜು.4 ರಂದು ದರ್ಬೆ ಫಿಲೋಮಿನಾ ಕಾಲೇಜಿನ ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ಜರಗಿದ್ದು, ಈ ಸಮಾರಂಭದಲ್ಲಿ ಅವರು ನೂತನ ಪದಾಧಿಕಾರಿಗಳಿಗೆ ಪದಪ್ರದಾನವನ್ನು ನೆರವೇರಿಸುತ್ತಾ ಮಾತನಾಡಿದರು.

ಆಸ್ತಿ, ಸಂಪತ್ತು ಕೂಡಿ ಹಾಕಿದರೆ ಆತ್ಮತೃಪ್ತಿ ಸಿಗೋದಿಲ್ಲ. ಯಾರು ನ್ಯಾಯ, ನಿಷ್ಠೆಯಿಂದ ಸಮಾಜ ಸೇವೆ ಮಾಡುತ್ತಾರೋ ಅವರಿಗೆ ನಿಜವಾದ ಆತ್ಮತೃಪ್ತಿ ಸಿಗುತ್ತದೆ. ಸಾಧನೆ ಮಾಡಲು ಮಹಾಜ್ಞಾನಿಯೇ ಆಗಬೇಕಿಲ್ಲ, ಹಿಡಿದ ಕೆಲಸ ಮಾಡಿಯೇ ತೀರುತ್ತೇನೆ ಎನ್ನುವ ಛಲ ಇದ್ದರೆ ಸಾಕು ಎಂದರು.


ರೋಟರಿ ಅಸಿಸ್ಟೆಂಟ್ ಗವರ್ನರ್ ಲಾರೆನ್ಸ್ ಗೊನ್ಸಾಲ್ವಿಸ್‌ರವರು ಕ್ಲಬ್ ಬುಲೆಟಿನ್ ರೋಟ ವಿಕಾಸ’ ಅನಾವರಣಗೊಳಿಸಿ ಮಾತನಾಡಿ, ರೋಟರಿ ಧ್ಯೇಯದಂತೆ ನಮ್ಮಲ್ಲಿ ಭರವಸೆ ಇಲ್ಲದಿದ್ದರೆ ಏನನ್ನೂ ಮಾಡಲಾಗದು. ನಾವು ಮಾಡುತ್ತೇವೆ ಅನ್ನುವ ಭರವಸೆ ನಮ್ಮಲ್ಲಿ ಮೊದಲಾಗಿ ಬೇಕು. ಈ ವರ್ಷದ ಜಿಲ್ಲಾ ಪ್ರಾಜೆಕ್ಟ್‌ಗಳಾದ ಅಂಗನವಾಡಿಗಳ ಅಭಿವೃದ್ಧಿ ಜೊತೆಗೆ ಮಳೆ ನೀರು ಕೊಯ್ಲು ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ಕಳೆದ ವರ್ಷದ ಆರೋಗ್ಯ ಸಿರಿ, ವನಸಿರಿ, ವಿದ್ಯಾಸಿರಿ, ಜಲಸಿರಿಯನ್ನು ಮುಂದುವರೆಸೋಣ ಎಂದರು.

ರೋಟರಿ ವಲಯ ಸೇನಾನಿ ಅಣ್ಣಪ್ಪ ಸಾಲ್ಯಾನ್ ಮಾತನಾಡಿ, ಯಾವುದೇ ಹೊಸ ಸಂಸ್ಥೆ ಸಾಧನೆ ಮಾಡಬೇಕಾದರೆ ಅದರ ಹಿಂದೆ ಮಾತೃಸಂಸ್ಥೆಯ ನೆರವು ಇದ್ದೇ ಇದೆ. ಕಳೆದ ವರ್ಷ ಪ್ರಶಾಂತ್ ಶೆಣೈಯವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಹಲವಾರು ಪ್ರಶಸ್ತಿಗಳನ್ನು ಕ್ಲಬ್ ಬಾಚಿಕೊಂಡಿದೆ, ಮುಂದಿನ ವರ್ಷ ಗ್ರೇಸಿ ಗೊನ್ಸಾಲ್ವಿಸ್‌ರವರ ಮುಂದಾಳತ್ವದಲ್ಲಿ ಮತ್ತಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸುವಂತಾಗಲಿ ಎಂದರು.

ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಮಾತನಾಡಿ, ರೋಟರಿ ಈಸ್ಟ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಸ್ಥಾಪಿತವಾದ ರೋಟರಿ ಸಿಟಿ ಕ್ಲಬ್ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಸಮಾಜದ ಹೆಗ್ಗಳಿಕೆಗೆ ಪ್ರಾಪ್ತವಾಗಿದೆ. ಕಳೆದ ವರ್ಷ ಕ್ಲಬ್ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪ್ರಸಕ್ತ ವರ್ಷ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಶ್ಲಾಘನೆಗೆ ಪ್ರಾಪ್ತವಾಗಲಿ ಎಂದರು.

ಕ್ಲಬ್ ನಿರ್ಗಮನ ಅಧ್ಯಕ್ಷ ಪ್ರಶಾಂತ್ ಶೆಣೈಯವರು ಮಾತನಾಡಿ, ತನ್ನ ಅಧಿಕಾರಾವಧಿಯಲ್ಲಿ ಕ್ಲಬ್ ಸಾಧನೆಗೈಯಲು ಕ್ಲಬ್‌ನಲ್ಲಿನ ಸದಸ್ಯರ ಸಾಂಘಿಕ ಸಹಕಾರ ಮುಖ್ಯವಾಗಿದೆ. ಕೇವಲ ಒಬ್ಬನಿಂದ ಸಾಧನೆಗೈಯಲು ಸಾಧ್ಯವಾಗದು, ಎಲ್ಲರೂ ಒಟ್ಟಾಗಿ ಕೈಜೋಡಿಸಿದಾಗ ಸಾಧನೆ ಮೈಗೂಡುವುದು. ಮುಂದಿನ ವರ್ಷದ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಕ್ಲಬ್ ಅನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಉತ್ತಮ ಅವಕಾಶವಿದೆ ಎಂದರು.

ನೂತನ ಸದಸ್ಯರ ಸೇರ್ಪಡೆ:
ಕ್ಲಬ್ ಸರ್ವಿಸ್‌ನಡಿಯಲ್ಲಿ ಬನ್ನೂರು ನಿವಾಸಿ, ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ರಾಮಚಂದ್ರ, ಕಲ್ಲಿಮಾರು ಎಂಬಲ್ಲಿನ ಮನೋಜ್ ಫಾರ್ಮ್ಸ್ ಮಾಲಕ ಮನೋಜ್ ಮಸ್ಕರೇನ್ಹಸ್, ಕೃಷ್ಣನಗರ ನಿವಾಸಿ ಕರ್ನಾಟಕ ಬ್ಯಾಂಕ್ ಲಿಮಿಟೆಡ್‌ನ ಶಾಖಾ ಪ್ರಬಂಧಕ ಶ್ರೀಶ ಕೆ, ಕೃಷ್ಣನಗರ ನಿವಾಸಿ, ಬ್ಯಾಂಕ್ ಉದ್ಯೋಗಿಯಾಗಿರುವ ಸುರೇಶ್ ನಾಯ್ಕ್ ಬಿ, ಎಪಿಎಂಸಿ ರಸ್ತೆ ನಿವಾಸಿ, ಕನ್ಸ್ಟ್ರಕ್ಷನ್, ರಿಯಲ್ ಎಸ್ಟೇಟ್, ಬ್ಯಾಂಕ್ ವ್ಯಾಲ್ವುವರ್, ಇಂಟೀರಿಯರ್ ಡಿಸೈನರ್ ಅನಿಲ್ ಎಂ.ಎ, ಎಪಿಎಂಸಿ ರಸ್ತೆ ನಿವಾಸಿ, ಉದ್ಯಮಿ ದೀಪಕ್ ಕುಮಾರ್, ಸೊರಕೆ ನಿವಾಸಿ, ಉದ್ಯಮಿ ಪ್ರಜ್ವಲ್ ರೈ ಸೊರಕೆ, ದರ್ಬೆ ನಿವಾಸಿ, ಟರ್ಮಿನಲ್ ಮ್ಯಾನೇಜರ್ ಮೈಕಲ್ ಕ್ರಾಸ್ತಾ, ನಿರ್ಗಮನ ಅಧ್ಯಕ್ಷ ಪ್ರಶಾಂತ್ ಶೆಣೈರವರ ಪತ್ನಿ ಪಡೀಲು ಪ್ರಶಾಂತ್ ಎಂಟರ್‌ಪ್ರೈಸಸ್ ಪಾಲುದಾರೆ ಅಕ್ಷತಾ ಪಿ.ಶೆಣೈ, ಉದ್ಯಮಿ, ಏಳ್ಮುಡಿ ಹಿಮ ರೆಫ್ರಿಜರೇಶನ್‌ನ ಯು.ಪಿ ರಾಜೇಶ್‌ರವರ ಪತ್ನಿ ಸಂಧ್ಯಾ ರಾಜೇಶ್, ಕ್ಲಬ್ ಸದಸ್ಯ, ನಿವೃತ್ತ ಸೇನಾಧಿಕಾರಿ ದಯಾನಂದ ಕೆ.ಎಸ್‌ರವರ ಪತ್ನಿ ಉಷಾಮಣಿ ದಯಾನಂದ್, ಕೊಂಬೆಟ್ಟು ನಿವಾಸಿ, ಹೋಮ್‌ಮೇಕರ್ ವೇದ ಲಕ್ಷ್ಮೀಕಾಂತ್ ರವರುಗಳಿಗೆ ಪದಪ್ರದಾನ ಅಧಿಕಾರಿ ಪ್ರಕಾಶ್ ಕಾರಂತ್‌ರವರು ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಅಧಿಕೃತವಾಗಿ ಬರಮಾಡಿಕೊಂಡರು. ಕ್ಲಬ್ ಸರ್ವಿಸ್ ನಿರ್ದೇಶಕಿ ಸ್ವಾತಿ ಮಲ್ಲಾರರವರು ಹೊಸ ಸದಸ್ಯರ ಪರಿಚಯ ಸಭೆಗೆ ನೀಡಿದರು.

ವೊಕೇಶನಲ್ ಸರ್ವಿಸ್:
ವೊಕೇಶನಲ್ ಸರ್ವಿಸ್ ವತಿಯಿಂದ 1995ರಿಂದ ಚರ್ಮರೋಗಕ್ಕೆ ಸಂಬಂಧಪಟ್ಟು ಸರ್ಪಸುತ್ತು, ತುರಿಕಜ್ಜಿ, ಬಿಸುರ್ಪು, ಕಾಮಲೆ ಮುಂತಾದ ಕಾಯಿಲೆಗಳಿಗೆ ನಾಟಿ ಮದ್ದು ನೀಡುವ ಕಾಯಕದೊಂದಿಗೆ ತೆಂಗಿನಮರ ಏರುವುದನ್ನು ಜೀವನಾಧಾರ ಮಾಡಿಕೊಂಡು ತಿಂಗಳಿಗೆ ರೂ.30-40 ಸಾವಿರದವರೆಗೆ ದುಡಿದು ಸ್ವಾವಲಂಭಿ ಜೀವನ ನಡೆಸುತ್ತಿರುವುದು ಮಾತ್ರವಲ್ಲ ತನ್ನ ಸಾಧನೆಯ ಮೂಲಕ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಸುಳ್ಯ ತಾಲೂಕು ಮುರುಳ್ಯ ಗ್ರಾಮದ ಕಡೀರದ ರಾಮಣ್ಣ ಗೌಡ ಮತ್ತು ರುಕ್ಮಿಣಿ ದಂಪತಿ ಪುತ್ರನಾಗಿರುವ ವಿಠಲ ಗೌಡ, ರಿಕ್ಷಾ ಚಾಲಕರಾಗಿ ದುಡಿಯುವಾಗಲೇ ತೆಂಗಿನಕಾಯಿ ಸುಲಿಯುವ ಕಾಯಕವನ್ನು ಮಾಡಿಕೊಂಡು ಬಂದಿದ್ದು 100-200ರಷ್ಟು ಕಾಯಿ ಸುಲಿಯುವ ಕಾರ್ಯ ಕ್ರಮೇಣ ಸಾವಿರ ದಾಟುತ್ತಾ ಪ್ರಸ್ತುತ ತಿಂಗಳಿಗೆ ರೂ.25-30ಸಾವಿರದಷ್ಟು ಸಂಪಾದನೆ ಮಾಡುತ್ತಿರುವ ಬಂಟ್ವಾಳ ತಾಲೂಕಿನ ಪೆರ್ನೆಯ ಹಸನಬ್ಬ ಹಾಗೂ ಜೈನಾಬಿ ದಂಪತಿ ಪುತ್ರ ಇಲ್ಯಾಸ್ ಮತ್ತು 2022-23ನೇ ಸಾಲಿನ ಮಂಗಳೂರು ವಿ.ವಿ ಎಂಕಾಂ ಪರೀಕ್ಷೆಯಲ್ಲಿ ಮೂರನೇ ರ್‍ಯಾಂಕ್ ಗಳಿಸಿದ ಫಿಲೋಮಿನಾ ಸ್ನಾತಕೋತ್ತರ ಕಾಲೇಜಿನ ವಿದ್ಯಾರ್ಥಿನಿ ವಿನೋಲಿಯಾ ಜಾಸ್ಲಿನ್ ಮಿನೇಜಸ್‌ರವರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ವೊಕೇಶನಲ್ ಸರ್ವಿಸ್ ನಿರ್ದೇಶಕ ಡೆನ್ನಿಸ್ ಮಸ್ಕರೇನ್ಹಸ್‌ರವರು ಕಾರ್ಯಕ್ರಮ ನಿರ್ವಹಿಸಿದರು.

ಕಮ್ಯೂನಿಟಿ ಸರ್ವಿಸ್:
ಕಮ್ಯೂನಿಟಿ ಸರ್ವಿಸ್ ವತಿಯಿಂದ ಪಾರ್ಶ್ವವಾಯುವಿನಿಂದ ಬಳಲುತ್ತಿರುವ ಕರುಣಾಕರ್ ಎಂಬವರಿಗೆ ಕ್ಲಬ್ ಮಾಜಿ ಅಧ್ಯಕ್ಷ ಜಯಕುಮಾರ್ ರೈ ಎಂ.ಆರ್‌ರವರ ಪ್ರಾಯೋಜಕತ್ವದಲ್ಲಿ ವೀಲ್‌ಚೆಯರ್, ಕರ್ನೂರು ನೆಟ್ಟಣಿಗೆ-ಮುಡ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎರಡು ಕಂಪ್ಯೂಟರ್‌ಗಳನ್ನು ಹಸ್ತಾಂತರಿಸಲಾಯಿತು. ಕ್ಲಬ್ ಸರ್ವಿಸ್ ಪ್ರಾಜೆಕ್ಟ್‌ಗೆ ಬೆನ್ನೆಲುಬಾಗಿರುವ ರೋಟರಿ ಭೀಷ್ಮ ಕೆ.ಆರ್ ಶೆಣೈಯವರು ರೂ.ಹತ್ತು ಸಾವಿರ ನೀಡಿರುವುದಕ್ಕೆ ಕೆ.ಆರ್ ಶೆಣೈಯವರನ್ನು ಅಭಿನಂದಿಸಲಾಯಿತು. ಜಿಲ್ಲಾ ಪ್ರಾಜೆಕ್ಟ್ ಎನಿಸಿದ ಅಂಗನವಾಡಿಗಳ ಅಭಿವೃದ್ಧಿ ಇದರ ಅಂಗವಾಗಿ ರೋಟರಿ ಸಿಟಿ ಹಾಗೂ ರೋಟರಿ ಎಲೈಟ್ ಜೊತೆಗೂಡಿನಗು-ಮಗು’ ಯೋಜನೆಯಡಿಯಲ್ಲಿ ಪ್ರತಿ ಅಂಗನವಾಡಿಗಳಲ್ಲಿ ವರ್ಷವಿಡೀ ಮಕ್ಕಳಿಗೆ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ನಿಟ್ಟಿನಲ್ಲಿ ನಿರ್ಗಮನ ಡಿಜಿ ಪ್ರಕಾಶ್ ಕಾರಂತ್‌ರವರು ಚಾಲನೆ ನೀಡಿದರು. ರೋಟರಿ ಎಲೈಟ್ ಅಧ್ಯಕ್ಷ ಅಬ್ದುಲ್ ರಝಾಕ್ ಕಬಕಕಾರ್ಸ್, ಸಿಡಿಪಿಒ ಶ್ರೀಲತಾ ಉಪಸ್ಥಿತರಿದ್ದರು. ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಡಾ.ಶಶಿಧರ್ ಕಜೆ ಕಾರ್ಯಕ್ರಮ ನಿರೂಪಿಸಿದರು.


ಪಿ.ಎಚ್.ಎಫ್ ಗೌರವ:
ಇಂಟರ್‌ನ್ಯಾಷನಲ್ ಸರ್ವಿಸ್ ವತಿಯಿಂದ ರೋಟರಿ ಫೌಂಡೇಶನ್‌ಗೆ ದೇಣಿಗೆ ನೀಡಿದ ಕ್ಲಬ್ ಸದಸ್ಯರಾದ ಡಾ.ಅಜಿತ್ ಹೆಗ್ಡೆ, ಮಹೇಶ್ ಕಜೆ, ಜಿಗ್ನೇಶ್ ಸಾವ್ಜಾನಿ, ಕೃಷ್ಣವೇಣಿ ಮುಳಿಯ, ಭವಿನ್ ಸಾವ್ಜಾನಿ(ಫ್ಲಸ್ 2)ರವರಿಗೆ ನಿರ್ಗಮನ ಡಿಜಿ ಪ್ರಕಾಶ್ ಕಾರಂತ್‌ರವರು ಪಿ.ಎಚ್.ಎಫ್ ಪ್ರಮಾಣಪತ್ರ ನೀಡಿ ಗೌರವಿಸಿದರು. ಅಲ್ಲದೆ ನಿರ್ಗಮನ ಕಾರ್ಯದರ್ಶಿ ಜಯಗುರು ಆಚಾರ್‌ರವರು ಅಂತರ್ರಾಷ್ಟ್ರೀಯ ಸಮ್ಮೇಳನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಿವಿಧ ದೇಶಗಳ ೨೫ ರೋಟರಿ ಕ್ಲಬ್‌ಗಳೊಂದಿಗೆ ಧ್ವಜ ವಿನಿಮಯ ಮಾಡಿಕೊಂಡಿದ್ದು ವಿವಿಧ ಕ್ಲಬ್‌ಗಳ ಧ್ವಜಗಳನ್ನು ನಿರ್ಗಮನ ಡಿಜಿ ಪ್ರಕಾಶ್ ಕಾರಂತ್‌ರವರಿಗೆ ಹಸ್ತಾಂತರಿಸಿದರು.


ವೈದ್ಯರ/ಸಿಎ ದಿನಾಚರಣೆ:
ಜುಲೈ ಒಂದರಂದು ವೈದ್ಯರ ಹಾಗೂ ಚಾರ್ಟರ್ಡ್ ಎಕೌಂಟೆಂಟ್(ಸಿಎ) ದಿನಾಚರಣೆಯ ಸಂದರ್ಭ ಕ್ಲಬ್‌ನಲ್ಲಿ ಸೇವೆ ಸಲ್ಲಿಸುವ ವೈದ್ಯರುಗಳಾದ ಡಾ.ಅಜಿತ್ ಹೆಗ್ಡೆ, ಡಾ.ಹರಿಕೃಷ್ಷ ಪಾಣಾಜೆ, ಡಾ.ಶಶಿಧರ್ ಕಜೆ ಹಾಗೂ ಸಿಎ ಅರವಿಂದ ಕೃಷ್ಣರವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.


ಸನ್ಮಾನ:
ಕಳೆದ ವರ್ಷ ಸುಮಾರು ರೂ.1 ಕೋಟಿಗೂ ಮಿಕ್ಕಿ ಸಮಾಜಮುಖಿ ಕಾರ್ಯಕ್ರಮಗಳನ್ನು ಸಮಾಜಕ್ಕೆ ಪರಿಚಯಿಸಿದ ಕ್ಲಬ್ ನಿರ್ಗಮನ ಅಧ್ಯಕ್ಷ ಪ್ರಶಾಂತ್ ಶೆಣೈ ಹಾಗೂ ನಿರ್ಗಮನ ಕಾರ್ಯದರ್ಶಿ ಜಯಗುರು ಆಚಾರ್ ಮತ್ತು ಕ್ಲಬ್ಬಿನ ಮಾಜಿ ಅಧ್ಯಕ್ಷ, ಕಳೆದ ಸಾಲಿನಲ್ಲಿ ವಲಯ ಸೇನಾನಿಯಾಗಿ ಕರ್ತವ್ಯ ನಿರ್ವಹಿಸಿದ ಪ್ರಮೋದ್ ಮಲ್ಲಾರರವರುಗಳನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.


ಪ್ರತಿಭಾವಂತರಿಗೆ ಗೌರವ:
ಯೂತ್ ಸರ್ವಿಸ್‌ನಡಿಯಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 595 ಅಂಕಗಳನ್ನು ಗಳಿಸಿದ ಬನ್ನೂರಿನ ಶಂಕರ್ ಭಟ್ ಹಾಗೂ ದೇವಕಿ ದಂಪತಿ ಪುತ್ರ ಆದಿತ್ಯನಾರಾಯಣ ಪಿ.ಎಸ್, ವಿಜ್ಞಾನ ವಿಭಾಗದಲ್ಲಿ 592 ಅಂಕಗಳನ್ನು ಗಳಿಸಿದ ಉರ್ಲಾಂಡಿ ಅಶೋಕ್ ಕುಂಬ್ಲೆ ಹಾಗೂ ಶೋಭರವರ ಪುತ್ರಿ ಆಶ್ರಯ ಪಿ, ವಿಜ್ಞಾನ ವಿಭಾಗದಲ್ಲಿ 592 ಅಂಕಗಳನ್ನು ಗಳಿಸಿದ ಬುಳೇರಿಕಟ್ಟೆಯ ಶಂಕರಪ್ರಸಾದ್ ಹಾಗೂ ಉಷಾ ದಂಪತಿ ಪುತ್ರಿ ದೀಪ್ತಿಲಕ್ಷ್ಮೀ, ಕಲಾ ವಿಭಾಗದಲ್ಲಿ 591 ಅಂಕಗಳನ್ನು ಗಳಿಸಿದ ಸುಳ್ಯ ಉಬರಡ್ಕ ತೀರ್ಥರಾಮ ಹಾಗೂ ಸಂಧ್ಯಾ ದಂಪತಿ ಪುತ್ರಿ ಮಂಜುಶ್ರೀ, ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಟಾಪರ್ಸ್ ಎನಿಸಿದ ತೇಜಸ್ ಎಸ್.ಆರ್, ಹಿಮಾನಿ(ಈರ್ವರಿಗೂ 623 ಅಂಕ), ರವಿ, ರಾಕೇಶ್(ಈರ್ವರಿಗೂ 623 ಅಂಕ), ಸ್ಪಂದನ, ಶ್ರೀಶ ನಿಡ್ವಣ್ಣಾಯ(ಈರ್ವರಿಗೂ 623 ಅಂಕ)ರವರಿಗೆ, ಪ್ರತಿಭಾವಂತರಾಗಿದ್ದು ಕ್ಲಬ್‌ನ ಸದಸ್ಯರ ಮಕ್ಕಳಾದ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಡೆನ್ನಿಸ್ ಮಸ್ಕರೇನ್ಹಸ್ ಹಾಗೂ ತೆಲ್ಮಾರವರ ಪುತ್ರ ಡೆನೋಲ್ ಮಸ್ಕರೇನ್ಹಸ್, ಭವಿನ್ ಸವಜಾನಿ ಹಾಗೂ ಸಹನಾರವರ ಪುತ್ರಿ ಆಶ್ಮಿ, ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಮೋಹನ್ ಮುತ್ಲಾಜೆ ಹಾಗೂ ಆಶಾರವರ ಪುತ್ರ ಪ್ರಾರ್ಥನ್, ಕೃಷ್ಣಮೋಹನ್ ಪಿ.ಎಸ್ ಹಾಗೂ ಮಾಲಿನಿರವರ ಪುತ್ರ ಮನಿತ್ ಕೃಷ್ಣ, ವಿಕ್ಟರ್ ಮಾರ್ಟಿಸ್ ಹಾಗೂ ಸಜನಿ ಮಾರ್ಟಿಸ್‌ರವರ ಪುತ್ರ ಲಸ್ಟನ್ ಮಾರ್ಟಿಸ್, ಹಿರಿಯ ಸದಸ್ಯ ಜೋನ್ ಕುಟಿನ್ಹಾರವರ ಮೊಮ್ಮಗ ಜೀತನ್ ಕುಟಿನ್ಹಾರವರುಗಳನ್ನು ಗೌರವಿಸಲಾಯಿತು.


ಜಿಲ್ಲಾ ಸಮಿತಿಗೆ ಆಯ್ಕೆಯಾದವರಿಗೆ ಗೌರವ:
ಕ್ಲಬ್ ಸದಸ್ಯರಾಗಿದ್ದು ಜಿಲ್ಲಾ ಸಮಿತಿಗೆ ಆಯ್ಕೆಯಾದ ಲಾರೆನ್ಸ್ ಗೊನ್ಸಾಲ್ವಿಸ್(ಅಸಿಸ್ಟೆಂಟ್ ಗವರ್ನರ್), ಸುರೇಂದ್ರ ಕಿಣಿ(ಚೇರ್‌ಮ್ಯಾನ್, ಪಾವ್ಲ್ ಹ್ಯಾರಿಸ್ ಸೊಸೈಟಿ), ಅಬ್ರಹಾಂ ವರ್ಗೀಸ್(ವೈಸ್ ಚೇರ್‌ಮ್ಯಾನ್, ರೋಟರಿ ಡೇ ಆಂಡ್ ರಿಮೆಂಬರಿಂಗ್ ಪಾವ್ಲ್ ಹ್ಯಾರಿಸ್), ಜಯಕುಮಾರ್ ರೈ ಎಂ.ಆರ್(ವೈಸ್ ಚೇರ್‌ಮ್ಯಾನ್, ಆನಿಮಲ್ ಕೇರ್), ಮನೋಹರ್ ಕೊಳಕ್ಕಿಮಾರ್(ವೈಸ್ ಚೇರ್‌ಮ್ಯಾನ್, ಯೂತ್ ಎಂಪ್ಲಾಯೇಬಿಲಿಟಿ), ಸ್ವಾತಿ ಮಲ್ಲಾರ(ವೈಸ್ ಚೇರ್‌ಮ್ಯಾನ್, ಚೈಲ್ಡ್ ಡೆವಲಪ್ಮೆಂಟ್), ಪ್ರಶಾಂತ್ ಶೆಣೈ(ವಲಯ ಸಂಯೋಜಕ, ಮೆಂಬರ್‌ಶಿಪ್ ಡೆವಲಪ್ಮೆಂಟ್)ರವರನ್ನು ಗೌರವಿಸಲಾಯಿತು.


ಪ್ರತಿಭಾ ಪುರಸ್ಕಾರ:
ಕ್ಲಬ್ ಯೂತ್ ಸರ್ವಿಸ್ ನಿರ್ದೇಶಕ, ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ಉಪನ್ಯಾಸಕರಾಗಿರುವ ಪ್ರಕಾಶ್ ವಿ.ಕೆ.ರವರ ಪ್ರಾಯೋಜಕತ್ವದಲ್ಲಿ ಸಂಸ್ಕೃತ ವಿಷಯದಲ್ಲಿ ಕೊಂಬೆಟ್ಟು ಸರಕಾರಿ ಪ.ಪೂರ್ವ ಕಾಲೇಜಿನ ಶೇ.90ಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಸುಮಾರು ರೂ.೫೦ ಸಾವಿರ ವೆಚ್ಚದಲ್ಲಿ ಸಹಾಯಧನದೊಂದಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ವಿದ್ಯಾರ್ಥಿಗಳಾದ ಲಿಖಿತಾ ಆರ್, ನಿಶ್ಮಿತಾ, ಪೂರ್ವಿ ವಿ.ಪಿ, ಸ್ವಾತಿ, ಅರ್ಚನಾ, ಅರ್ಪಿತಾ ಭಾರದ್ವಾಜ್, ಪ್ರಥ್ವಿ, ಚೈತ್ರಾ ಬಿ.ಎಚ್, ಮನ್ವಿತಾ, ರಚನಾ ಎಂ.ಸಿ, ಸುಚಿತಾ ಕೆ.ಎಸ್, ಪೂರ್ಣಿಮಾ, ವಿನ್ಯಾಶ್ರೀ, ಯಶ್ವಿತಾ, ಅನನ್ಯ ಇವರುಗಳಿಗೆ ಸಹಾಯಧನವನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.


ಸದಸ್ಯೆ ಲೀನಾ ಪಾಯಿಸ್ ಪ್ರಾರ್ಥಿಸಿದರು. ನಿರ್ಗಮನ ಅಧ್ಯಕ್ಷ ಪ್ರಶಾಂತ್ ಶೆಣೈ ಸ್ವಾಗತಿಸಿ, ನೂತನ ಕಾರ್ಯದರ್ಶಿ ಶ್ಯಾಮಲ ಪಿ.ಶೆಟ್ಟಿ ವಂದಿಸಿದರು. ನಿರ್ಗಮನ ಕಾರ್ಯದರ್ಶಿ ಜಯಗುರು ಆಚಾರ್ ವರದಿ ಮಂಡಿಸಿದರು.ಮುಖ್ಯ ಅತಿಥಿಗಳ ಪರಿಚಯವನ್ನು ನ್ಯಾಯವಾದಿ ಮಹೇಶ್ ಕಜೆ, ಮಾಜಿ ಅಧ್ಯಕ್ಷರಾದ ಜಿ.ಸುರೇಂದ್ರ ಕಿಣಿ, ಪ್ರಮೋದ್ ಮಲ್ಲಾರರವರು ನೀಡಿದರು. ಮಾಜಿ ಅಧ್ಯಕ್ಷರಾದ ಡಾ.ಶಶಿಧರ್ ಕಜೆ ಹಾಗೂ ಕೃಷ್ಣಮೋಹನ್ ಪಿ.ಎಸ್ ಕಾರ್ಯಕ್ರಮ ನಿರೂಪಿಸಿದರು.



ಜೀವನದ ಅವಿಸ್ಮರಣೀಯ ದಿನ..
ರೋಟರಿ ಸಿಟಿಯ ಪ್ರಥಮ ಮಹಿಳಾ ಅಧ್ಯಕ್ಷನಾಗಿರುವುದು ನನ್ನ ಜೀವನದ ಅವಿಸ್ಮರಣೀಯ ದಿನ. ಕ್ಲಬ್‌ನಲ್ಲಿನ ಹಿರಿಯ-ಕಿರಿಯ ಸದಸ್ಯರುಗಳ ಪ್ರೋತ್ಸಾಹ ಹಾಗೂ ಪ್ರೀತಿಯಿಂದ ತಾನಿಂದು ಮಹಿಳಾ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಕಳೆದ ವರ್ಷ ಅಧ್ಯಕ್ಷ ಪ್ರಶಾಂತ್ ಶೆಣೈಯವರ ಸಾಧನೆ ನಮಗೆ ಮುಂದಿನ ದಿನಗಳಲ್ಲಿ ಮುನ್ನುಡಿಯಾಗಬಲ್ಲುದು. ಅಧ್ಯಕ್ಷೆ ಹಾಗೂ ಕಾರ್ಯದರ್ಶಿ ಈರ್ವರೂ ಮಹಿಳೆಯಾಗಿರುವುದು ಈ ವರ್ಷದ ವಿಶೇಷತೆಯಾಗಿದ್ದು, ಕ್ಲಬ್ ಸದಸ್ಯರು ಮುಂದಿನ ದಿನಗಳಲ್ಲಿ ನೆರವೇರುವ ಸಮಾಜಮುಖಿ ಕಾರ್ಯಗಳಿಗೆ ಸಹಾಯಹಸ್ತ ನೀಡಬೇಕು ಎಂಬ ಆಶಯ ನನ್ನದು.
-ಗ್ರೇಸಿ ಗೊನ್ಸಾಲ್ವಿಸ್, ನೂತನ ಅಧ್ಯಕ್ಷೆ, ರೋಟರಿ ಪುತ್ತೂರು ಸಿಟಿ

ಪದಪ್ರದಾನ..
ನೂತನ ಪದಾಧಿಕಾರಿಗಳಾದ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್, ಕಾರ್ಯದರ್ಶಿ ಶ್ಯಾಮಲ ಪಿ.ಶೆಟ್ಟಿ, ಕೋಶಾಧಿಕಾರಿ ಮೋಹನ್ ಮುತ್ಲಾಜೆ, ನಿಕಟಪೂರ್ವ ಅಧ್ಯಕ್ಷ ಪ್ರಶಾಂತ್ ಶೆಣೈ, ಉಪಾಧ್ಯಕ್ಷ ಜಬ್ಬಾರ್ ಕೆ.ಎಂ, ಜೊತೆ ಕಾರ್ಯದರ್ಶಿ ದಯಾನಂದ ಕೆ.ಎಸ್, ಸಾರ್ಜಂಟ್ ಎಟ್ ಆಮ್ಸ್೯ ಕೃಷ್ಣವೇಣಿ ರೈ, ಕ್ಲಬ್ ಸರ್ವಿಸ್ ನಿರ್ದೇಶಕಿ ಸ್ವಾತಿ ಮಲ್ಲಾರ, ವೊಕೇಶನಲ್ ಸರ್ವಿಸ್ ನಿರ್ದೇಶಕ ಡೆನ್ನಿಸ್ ಮಸ್ಕರೇನ್ಹಸ್, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಡಾ.ಶಶಿಧರ್ ಕಜೆ, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕ ಮೊಹಮದ್ ಸಾಹೇಬ್, ಯೂತ್ ಸರ್ವಿಸ್ ನಿರ್ದೇಶಕ ಪ್ರಕಾಶ್ ವಿ.ಕೆ, ಚೇರ್‌ಮ್ಯಾನ್‌ಗಳಾಗಿ ಸುರೇಂದ್ರ ಕಿಣಿ(ದಿ ರೋಟರಿ ಫೌಂಡೇಶನ್), ಕೃಷ್ಣಮೋಹನ್ ಪಿ.ಎಸ್(ಸಿ.ಎಲ್.ಸಿ.ಸಿ), ಡಾ.ಹರಿಕೃಷ್ಣ ಪಾಣಾಜೆ(ಪಲ್ಸ್ ಪೋಲಿಯೋ), ಪೊಡಿಯ ಡಿಆರ್(ಟೀಚ್), ಪದ್ಮನಾಭ ಶೆಟ್ಟಿ(ಮೆಂಬರ್ ಶಿಪ್ ಡೆವಲ್ಮೆಂಟ್), ಪ್ರೆಸ್ಸಿ ಪಾಯಿಸ್(ವಿನ್ಸ್), ಜೋನ್ ಕುಟಿನ್ಹಾ(ಎಥಿಕ್ಸ್), ಉಮೇಶ್ಚಂದ್ರ(ವಾಟರ್ ಆಂಡ್ ಸ್ಯಾನಿಟೇಶನ್), ಜಯಕುಮಾರ್ ರೈ(ಜಿಲ್ಲಾ ಪ್ರಾಜೆಕ್ಟ್), ಲೋಕೇಶ್ ಆಂಡ್ ಮಹಾಲಕ್ಷ್ಮೀ ಕೆ(ಕ್ರೀಡೆ), ವಿಕ್ಟರ್ ಮಾರ್ಟಿಸ್(ಫೆಲೋಶಿಪ್), ಜಯಗುರು ಆಚಾರ್(ಪಬ್ಲಿಕ್ ಇಮೇಜ್), ಸುಧಾಕರ್ ಶೆಟ್ಟಿ(ಪಿಕ್ನಿಕ್), ಲೀನಾ ಪಾಯಿಸ್(ಸಾಂಸ್ಕೃತಿಕ), ಕಿರಣ್ ಬಿ.ವಿ(ಹಾಜರಿ), ನಟೇಶ್ ಉಡುಪ(ಕೆರಿಯರ್ ಗೈಡೆನ್ಸ್), ಪ್ರಮೋದ್ ಮಲ್ಲಾರ(ವೆಬ್‌ಸೈಟ್), ಧರ್ಣಪ್ಪ ಗೌಡ(ರೋಟರ್‍ಯಾಕ್ಟ್), ಜೆರೋಮಿಯಸ್ ಪಾಯಿಸ್(ಇಂಟರ್‍ಯಾಕ್ಟ್), ಮನೋಹರ್ ಕೊಳಕಿಮಾರ್(ಬುಲೆಟಿನ್ ಎಡಿಟರ್), ಗುರುರಾಜ್(ಸಹ ಬುಲೆಟಿನ್ ಎಡಿಟರ್)ರವರಿಗೆ ನಿರ್ಗಮನ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರು ಪದಪ್ರದಾನ ಮಾಡಿದರು.


ಅಭಿವೃದ್ಧಿ ಯೋಜನೆಗಳು..
-ವಿದ್ಯಾಸಿರಿ, ಆರೋಗ್ಯಸಿರಿ, ಜಲಸಿರಿ, ವನಸಿರಿ ಜಿಲ್ಲಾ ಯೋಜನೆಗಳನ್ನು ಉತ್ತಮ ಮಟ್ಟದಲ್ಲಿ ಅಳವಡಿಸುವುದು.
-ವನಸಿರಿ ಯೋಜನೆಯಡಿಯಲ್ಲಿ ಸರಕಾರಿ ಶಾಲೆಗಳಲ್ಲಿ ಹಣ್ಣು-ಹಂಪಲು-ತರಕಾರಿ ಬೆಳೆಸಲು ಮಾರ್ಗದರ್ಶನ ನೀಡುವುದು.
-ವಿದ್ಯಾಸಿರಿ ಯೋಜನೆಯಲ್ಲಿ ಕ್ಲಬ್‌ನ ಚಾರಿಟೇಬಲ್ ಟ್ರಸ್ಟ್‌ನಡಿಯಲ್ಲಿ ನಡೆಸಲ್ಪಡುವ ಎಲ್.ಕೆ.ಜಿ/ಯುಕೆಜಿ ಶಾಲೆಯನ್ನು ದತ್ತು ಪಡೆದು ಮಾದರಿ ಶಾಲೆಯ ರೀತಿ ಮಕ್ಕಳಿಗೆ ಸಮವಸ್ತ್ರ, ಕೊಡೆ, ಪುಸ್ತಕದೊಂದಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಿಸಿಕೊಡುವುದು.
-ಜಲಸಿರಿ ಯೋಜನೆಯಡಿ ಆದ್ಯತೆ ಮೇರೆಗೆ ಕೊಡಿಪ್ಪಾಡಿ ಗ್ರಾಮದ ಕಲ್ಪನಾ ಪ್ರದೇಶದಲ್ಲಿ ಮತ್ತು ಅವಶ್ಯವಿರುವ ಕೆಲವೊಂದು ಕಡೆ ನೀರಿಂಗಿಸಲು ಯೋಜನೆ ಹಾಕಲಾಗುವುದು.
-ಮಗು-ನಗು ಎಂಬ ಯೋಜನೆಯೊಂದಿಗೆ ಎಲ್ಲಾ ಅಂಗನವಾಡಿ ಮಕ್ಕಳ ದಂತ ತಪಾಸಣೆಗಾಗಿ ಪ್ರತಿ ಶುಕ್ರವಾರ ಡೆಂಟಲ್ ಹೆಲ್ತ್ ಚೆಕ್‌ಅಪ್ ನಡೆಸುವುದು ಹಾಗೂ ಡೆಂಟಲ್
ಕೇರ್ ಬಗ್ಗೆ ಅರಿವು ಮೂಡಿಸುವುದು.
-ಅಪೌಷ್ಠಿಕ ಮಕ್ಕಳನ್ನು ಗುರುತಿಸಿ, ಅವರಿಗೆ ಹೆಚ್ಚಿನ ಪೌಷ್ಠಿಕಾಹಾರ ಹಾಗೂ ಔಷಧೋಪಚಾರ ಹಾಗೂ ವಯಸ್ಸಿಗನುಗುಣವಾಗಿ ಎತ್ತರ-ತೂಕದ ಬಗ್ಗೆ ಗಮನಹರಿಸಿ ಅವಶ್ಯಕತೆಯನ್ನು ಪರಿಗಣಿಸುವುದು.
-10 ಅಂಗನವಾಡಿ ಕೇಂದ್ರಗಳನ್ನು ದತ್ತು ಪಡೆದು ಇವುಗಳ ಮೂಲಭೂತ ಸೌಕರ್ಯಗಳಿಗೆ ಇರುವ ಕೊರತೆಯನ್ನು ನೀಗಿಸಿ, ಮಾದರಿ ಅಂಗನವಾಡಿಗಳನ್ನಾಗಿ ಮಾಡುವ ಉದ್ದೇಶವನ್ನು ಹೊಂದಲಾಗಿದೆ.

LEAVE A REPLY

Please enter your comment!
Please enter your name here