ಉಪ್ಪಿನಂಗಡಿ: ಭತ್ತದ ಬೆಳೆಯಲ್ಲಿ ತಾಲೂಕು ಮಟ್ಟದಲ್ಲಿ ಎರಡನೇ ಬಹುಮಾನ ಪಡೆದಿದ್ದ ಉಪ್ಪಿನಂಗಡಿಯ ಬೊಳ್ಳಾವಿನ ಪ್ರಗತಿಪರ ಕೃಷಿಕ ಮೋನಪ್ಪ ನಾಯ್ಕ (82)ರವರು ಅಲ್ಪಕಾಲದ ಅಸೌಖ್ಯದಿಂದ ಜು.5ರಂದು ತನ್ನ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಚಂದ್ರಾವತಿ, ಪುತ್ತೂರು ಲ್ಯಾಂಪ್ಸ್ ಸಹಕಾರಿ ಸಂಘದ ಉಪಾಧ್ಯಕ್ಷರಾಗಿರುವ ಪುತ್ರ ಧರ್ನಪ್ಪ ನಾಯ್ಕ ಸೇರಿದಂತೆ ಪುತ್ರರಾದ ಜತ್ತಪ್ಪ ನಾಯ್ಕ, ವಸಂತ ನಾಯ್ಕ, ಪುತ್ರಿಯರಾದ ಸೇಸಮ್ಮ, ಕುಸುಮಾವತಿ ಅವರನ್ನು ಅಗಲಿದ್ದಾರೆ.
