ಆರ್ಯಾಪು ಸೇವಾ ಸಹಕಾರಿ ಸಂಘದಲ್ಲಿ ಇಂದಿರಾ ಸೇವಾ ಕೇಂದ್ರ ಆರಂಭ

0

ಸರಕಾರದ ಯೋಜನೆಗಳು ಕಟ್ಟಕಡೇಯ ವ್ಯಕ್ತಿಗೂ ದೊರೆಯುವಂತಾಗಬೇಕು: ಶಾಸಕ ಅಶೋಕ್ ರೈ


ಪುತ್ತೂರು: ರಾಜ್ಯದ ಜನತೆಗಾಗಿ ಕಾಂಗ್ರೆಸ್ ಚುನಾವಣಾ ಸಂದರ್ಬದಲ್ಲಿ ನೀಡಿದ ಐದು ಗ್ಯಾರಂಟಿ ಯೋಜನೆಗಳನ್ನು ಪ್ರತೀಯೊಬ್ಬರಿಗೂ ಸಿಗಬೇಕು ಮತ್ತು ಗ್ರಾಮದ ಕಟ್ಟಕಡೇಯ ವ್ಯಕ್ತಿಯೂ ಸೌಲಭ್ಯದಿಂದ ವಂಚಿತರಾಗಬಾರದು ಅದಕ್ಕಾಗಿ ಪ್ರತೀಯೊಬ್ಬರೂ ಶ್ರಮವಹಿಸಬೇಕಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.


ಅವರು ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಪ್ರಾರಂಭಗೊಂಡ ಇಂದಿರಾ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರದ ಐದು ಗ್ಯಾರಂಟಿ ಯೋಜನೆಗಳ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಮೊದಲಿಗೆ ಗೃಹಜ್ಯೋತಿ ಯೋಜನೆಗೆ ನೋಂದಣಿ ಆರಂಭಗೊಂಡಿದೆ. ಎಲ್ಲಾ ಸೇವಾ ಕೇಂದ್ರಗಳಲ್ಲಿ ಇದನ್ನು ಮಾಡಿಸಿಕೊಳ್ಳಬಹುದಾಗಿದ್ದು ಮುಂದಿನ ಕೆಲವೇ ದಿನಗಳಲ್ಲಿ ಉಳಿದ ಯೋಜನೆಗಳು ಒಂದೊಂದಾಗಿ ಕಾರ್ಯರೂಪಕ್ಕೆ ಬರಲಿದ್ದು ಇದಕ್ಕಾಗಿ ಸರಕಾರ ಬಜೆಟ್‌ನಲ್ಲಿ 58 ಸಾವಿರ ಕೋಟಿಯನ್ನು ಮೀಸಲಿಟ್ಟಿದೆ ಎಂದು ಹೇಳಿದರು.


ಆರ್ಯಾಪು ಸೇವಾ ಸಹಕಾರಿ ಸಂಘದಲ್ಲಿ ಉಚಿತ ಯೋಜನೆಯ ನೋಂದಣಿಗಾಗಿ ಸೇವಾ ಕೇಂದ್ರವನ್ನು ಆರಂಭಿಸಿರುವುದು ಉತ್ತಮ ಕೆಲಸವಾಗಿದೆ. ಸಹಕಾರಿ ಸಂಘದ ಮೂಲಕ ಸರಕಾರದ ಯೋಜನೆಗಳು ಮನೆ , ಮನಗಳನ್ನು ತಲುಪಬೇಕಿದೆ. ಗ್ರಾಮದ ಕೃಷಿಕರು ಹೆಚ್ಚಾಗಿ ಸೇವಾ ಸಂಘಗಳ ಕಚೇರಿಯಲ್ಲಿ ವ್ಯವಹಾರವನ್ನು ಇಟ್ಟುಕೊಳ್ಳುವುದರಿಂದ ಈ ನೋಂದಣಿ ಕಾರ್ಯದಿಂದ ಹೆಚ್ಚಿನವರಿಗೆ ಪ್ರಯೋಜನವಾಗಲಿದೆ ಎಂದು ಹೇಳಿದರು.


ಬೆಳೆ ಆಧಾರಿತ ವಿಮಾ ಯೋಜನೆಯಿಂದ ಅಡಿಕೆ ಮತ್ತು ಕಾಳುಮೆಣಸನ್ನು ಹಿಂದಿನ ಬಿಜೆಪಿ ಸರಕಾರ ಕೈ ಬಿಟ್ಟಿತ್ತು ಅದನ್ನು ಮತ್ತೆ ವಿಮೆಗೆ ಸೇರಿಸುವ ಕೆಲಸವನ್ನು ಮಾಡಿದ್ದೇನೆ. ಕರಾವಳಿಯಲ್ಲಿ ಅಡಿಕೆಯೇ ಪ್ರಮುಖ ಬೆಳೆಯಾಗಿರುವ ಕಾರಣ ಇಲ್ಲಿ ಅಡಿಕೆಯನ್ನು ನಂಬಿ ಜೀವನ ಮಾಡುವ ಅನೇಕ ಕುಟುಂಬಗಳಿವೆ ಅವರಿಗೆ ತೊಂದರೆಯಾಗದಂತೆ ನಾನು ವಿಮಾ ಯೋಜನೆಯಲ್ಲಿ ಅಡಿಕೆ ಮತ್ತು ಕಾಳುಮೆಣಸನ್ನು ಸೇರಿಸುವ ಕೆಲಸವನ್ನು ಮಾಡಿದ್ದೇನೆ ಎಂದು ಶಾಸಕರು ಸಭೆಯಲ್ಲಿ ತಿಳಿಸಿದರು.

13 ಸಹಕಾರಿ ಸಂಘದಲ್ಲಿ ಸದಸ್ಯತ್ವ ಕೊಡುವುದಿಲ್ವಂತೆ?
ಕ್ಷೇತ್ರ ವ್ಯಾಪ್ತಿಯ 13 ಸಹಕಾರಿ ಸಂಘಗಳಲ್ಲಿ ಕೃಷಿಕರಿಗೆ ಸದಸ್ಯತ್ವ ಕೊಡುವುದಿಲ್ಲ ಮತ್ತು ಲೋನ್ ಕೊಡುವುದನ್ನು ಕಡಿಮೆ ಮಾಡಿದ್ದಾರೆ ಎಂಬ ದೂರುಗಳು ಬಂದಿದೆ.ಯಾವ ಕಾರಣಕ್ಕೆ ಆ ರೀತಿ ಮಾಡುತ್ತಿದ್ದಾರೆ ಎಂಬುದನ್ನು ನಾನು ಸಂಬಂಧಿಸಿದವರನ್ನು ಕರೆಸಿ ಮಾಹಿತಿ ಪಡೆದುಕೊಂಡು ಆ ಬಳಿಕ ಅದಕ್ಕೆ ಏನು ಬೇಕೋ ಆ ರೀತಿಯ ಕ್ರಮಗಳನ್ನು ಕೈಗೊಳ್ಳಲಿದ್ದೇನೆ. ಸರಕಾರದ ಸೌಲಭ್ಯ ಎಲ್ಲರಿಗೂ ದೊರೆಯಬೇಕು ಅದನ್ನು ತಡೆಯುವ ಕೆಲಸವನ್ನು ಯಾರೂ ಮಾಡಬಾರದು. ಪಕ್ಷ ಬೇದವಿಲ್ಲದೆ ಸಹಕಾರಿ ಸಂಘವನ್ನು ಕಟ್ಟಿದರೆ ಸಂಘ ಬೆಳೆಯವುದರ ಜೊತೆಗೆ ಊರಿನ ಅಭಿವೃದ್ದಿಗೂ ಸಹಕಾರಿಯಾಗುತ್ತದೆ. ಯಾವುದೇ ಸಂಸ್ಥೆ ಬೆಳೆಯಬೇಕಾದರೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಸಹಕಾರಿ ಸಂಸ್ಥೆಗಳು ಜನರಿಗೆ ಹತ್ತಿರವಾದ ಸಂಸ್ಥೆಯೂ ಆಗಿದೆ ಎಂದು ಶಾಸಕರು ತಿಳಿಸಿದರು.

ಮೋದಿಯವರ ಲೊನ್ ಯಾರಿಗೆ ಸಿಕ್ಕಿದೆ?
ನಿರುದ್ಯೋಗಿಗಳಿಗೆ ಕೇಂದ್ರದ ಮೋದಿ ಸರಕಾರ ಸ್ವ ಉದ್ಯೋಗಕ್ಕೆ ಲೋನ್ ಕೊಡುವುದಾಗಿ ಹೇಳಿತ್ತು. ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲಪಡೆದು ಸ್ವ ಉದ್ಯೋಗವನ್ನು ಮಾಡಿಕೊಳ್ಳಿ ಎಂದು ಕೇಂದ್ರ ಸರಕಾರ ಆದೇಶವನ್ನು ನೀಡಿತ್ತು. ಆದರೆ ಈ ಸಾಲ ಯಾರಿಗೆ ಸಿಕ್ಕಿದೆ? ದಾಖಲೆಗಳು ಸರಿಯಿಲ್ಲ, ಅದು ಇಲ್ಲ ಇದು ಇಲ್ಲ ಎಂದು ಹೇಳಿ ಸತಾಯಿಸಿದ್ದನ್ನು ಬಿಟ್ಟರೆ ಯಾರಿಗೂ ಸಾಲ ಸೌಲಭ್ಯವನ್ನು ನೀಡಿಲ್ಲ ಎಂದು ಸಸಕರು ಸಭೆಯಲ್ಲಿ ಆರೋಪ ಮಾಡಿದರು.

ಗ್ರಾಮಸ್ಥರು ನೋಂದಣಿಮಾಡಿಸಿಕೊಳ್ಳಬಹುದು: ಮಹಮ್ಮದ್‌ ಆಲಿ
ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಗದ ಅಧ್ಯಕ್ಷರಾದ ಎಚ್ ಮಹಮ್ಮದ್‌ ಆಲಿ ಮಾತನಾಡಿ ಸಂಘದ ಕಚೇರಿಯಲ್ಲಿ ನೂತನವಾಗಿ ಆರಂಭಗೊಂಡ ಇಂದಿರಾ ಸೇವಾ ಕೇಂದ್ರದಲ್ಲಿ ಸರಕಾರದ ಐದು ಗ್ಯಾರಂಟಿಗಳ ಉಚಿತ ನೋಂದಣಿಯನ್ನು ಗ್ರಾಮಸ್ಥರು ಮಾಡಿಸಿಕೊಳ್ಳಬಹುದು.ಬೆಳೆ ವಿಮಾ ಯೋಜನೆಯಲ್ಲಿ ಅಡಿಕೆ ಮತ್ತು ಕಾಳುಮೆನಸನ್ನು ಬಿಜೆಪಿ ಸರಕಾರ ಕೈ ಬಿಟ್ಟಿದ್ದು ಅದನ್ನು ಮತ್ತೆ ಅದೇ ಯೋಜನೆಗೆ ಸೇರಿಸುವಲ್ಲಿ ಶಾಸಕರಾದ ಅಶೋಕ್ ರೈ ಯಶಸ್ವಿಯಾಗಿದ್ದಾರೆ ಇದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಆಲಿ ಹೇಳಿದರು.

ಪುತ್ತೂರಿನ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ವಿಶೇಷ ಕಾಳಜಿ ವಹಿಸುತ್ತಿರುವ ಶಾಸಕರ ಕಾರ್ಯ ಶ್ಲಾಘನೀಯವಾಗಿದೆ ಭ್ರಷ್ಟಾಚಾರಿಗಳಿಗೆ ಕಡಿವಾಣ ಹಾಕಿರುವ ಕಾರಣ ಪುತ್ತೂರು ಸರಕಾರಿ ಕಚೇರಿಗಳಲ್ಲಿ ಹೊಸ ಬದಲಾವಣೆಯ ಸೃಷ್ಟಿಯಾಗಿದೆ ಎಂದು ಆಲಿ ಹೇಳಿದರು.

ಮುಂದಿನ ದಿನಗಳಲ್ಲಿ ಪುತ್ತೂರಿಗೆ ಬೃಹತ್ ಯೋಜನೆಗಳು ಬರಲಿದ್ದು ಆ ಮೂಲಕ ಇಲ್ಲಿನ ಸಾವಿರಾರು ಮಂದಿಗೆ ಉದ್ಯೋಗವೂ ಲಭಿಸುತ್ತಿರುವುದು ಆಶಾದಾಯಕ ಬೆಳವನಿಗೆಯಾಗಿದೆ ಎಂದು ಆಲಿಯವರು ಹೇಳಿದರು.ಮುಂದಿನ ದಿನಗಳಲ್ಲಿ ಆರ್ಯಾಪು , ಕುರಿಯ ಮತ್ತು ಕೆಮ್ಮಿಂಜೆಯಲ್ಲಿ ಉಚಿತ ನೋಂದಣಿ ಕೇಂದ್ರವನ್ನು ಆರಂಭಿಸಲಾಗುವುದು ಗ್ರಾಮಸ್ಥರ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.


ಉಪಾಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ಸಿಇಒ ಜಯಂತಿ ಭಾಸ್ಕರ್ ,ಶಿವರಾಮ ಆಳ್ವ ಬಳ್ಳಮಜಲು, ನಿರ್ದೇಶಕರಾದ ಸುರೇಂದ್ರ ರೈ ಬಳ್ಳಮಜಲು, ಗಣೇಶ್ ರೈ ಮೂಲೆ, ಗಣೇಶ್ ರೈ ಕಲ್ಲಾಪು ಕುರಿಯ, ಶೀನಪ್ಪ ಮರಿಕೆ, ತಿಮ್ಮಪ್ಪ ನಾಯ್ಕ ಜಂಗಮುಗೇರು, ಇಸ್ಮಾಯಿಲ್ ಮಲಾರ್, ಸಂಶುದ್ದೀನ್ ನೀರ್ಕಜೆ, ಮಾಜಿ ನಿರ್ದೇಶಕರಾದ ಜಯಪ್ರಕಾಶ್ ರೈ ಕುರಿಯ, ಹಾರಿಸ್ ಸಂಟ್ಯಾರ್, ಸಲಾಂ ಸಂಪ್ಯ , ನವೀನ್ ಕುಮಾರ್ ರೈ ಕುರಿಯ, ಮಾಜಿ ಅಧ್ಯಕ್ಷ ಮಹಾಬಲ ರೈ, ಗ್ರಾಪಂ ಸದಸ್ಯೆ ಪವಿತ್ರಾ ರೈ, ಸೂಪಿ ಕುರಿಯ, ಮತ್ತಿತರರು ಉಪಸ್ತಿತರಿದ್ದರು.ನಿರ್ದೇಶಕಿ ಚಂಧ್ರಕಲಾ ಓಟೆತ್ತಿಮಾರು ವಂದಿಸಿದರು.ಸಿಬಂದಿಗಳಾದ ಅಜಿತ್ ರೈ, ಉಮೇಶ್ , ರಾಜೇಶ್, ಅರ್ಜುನ್, ಪ್ರಶಾಂತಿನಿ, ವಿನಯಕುಮಾರ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here