ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಇದರ ಪ್ರಾಯೋಜಕತ್ವದ ಪುತ್ತೂರು ರೋಟರ್‍ಯಾಕ್ಟ್ ಕ್ಲಬ್ಬಿನ ಪದಸ್ವೀಕಾರ ಹಾಗೂ ಜಿಲ್ಲಾ ರೋಟರ್‍ಯಾಕ್ಟ್ ಪ್ರತಿನಿಧಿ ಪದಸ್ವೀಕಾರ ಸಮಾರಂಭ ಜು. 9ರಂದು ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಹಾಲ್‌ನಲ್ಲಿ ನಡೆಯುತ್ತಿದೆ. ರೋಟರ್‍ಯಾಕ್ಟ್ ಜಿಲ್ಲಾ ಪ್ರತಿನಿಧಿಯಾಗಿ ರಾಹುಲ್ ಆಚಾರ್ಯ ನೇಮಕಗೊಂಡಿದ್ದು, ಕಾರ್ಯದರ್ಶಿಯಾಗಿ ಶ್ರೇಯಸ್, ಖಜಾಂಚಿಯಾಗಿ ಮಹೇಶ್ಚಂದ್ರ ಮತ್ತು ಅವರ ತಂಡ ಪದಸ್ವೀಕಾರ ಮಾಡಲಿದ್ದಾರೆ.
ರೋಟರ್‍ಯಾಕ್ಟ್ ಕ್ಲಬ್ ಪದಸ್ವೀಕಾರ: ಪುತ್ತೂರು ರೋಟರ್‍ಯಾಕ್ಟ್ ಕ್ಲಬ್ಬಿನ ಅಧ್ಯಕ್ಷರಾಗಿ ಜ್ಯೋತಿಕಾ, ಕಾರ್ಯದರ್ಶಿಯಾಗಿ ಧನುಷಾ, ಐಪಿಪಿಯಾಗಿ ಗಣೇಶ್ ಎನ್. ಕಲ್ಲರ್ಪೆ ನೇಮಕಗೊಂಡಿದ್ದಾರೆ. ಸಭಾಪತಿಯಾಗಿ ಪ್ರೇಮಾನಂದ್ ಕಾರ್ಯನಿರ್ವಹಿಸಲಿದ್ದಾರೆ.
ಉಪಾಧ್ಯಕ್ಷರಾಗಿ ವಿಶಾಲ್, ಜತೆ ಕಾರ್ಯದರ್ಶಿಯಾಗಿ ನವೀನ್ ಚಂದ್ರ, ಕೋಶಾಧಿಕಾರಿಯಾಗಿ ಸುಕನ್ಯಾ, ಸಮುದಾಯ ಸೇವಾ ನಿರ್ದೇಶಕರಾಗಿ ವಿಜಯ್, ವೃತ್ತಿ ಸೇವಾ ನಿರ್ದೇಶಕರಾಗಿ ಪುರುಷೋತ್ತಮ್, ಅಂತರ್ರಾಷ್ಟ್ರೀಯ ಸೇವಾ ನಿರ್ದೇಶಕರಾಗಿ ಮಹೇಶ್ಚಂದ್ರ, ಸಂಘ ಸೇವಾ ನಿರ್ದೇಶಕರಾಗಿ ಶಶಿಧರ್ ಕೆ. ಮಾವಿನಕಟ್ಟೆ, ಬುಲೆಟಿನ್ ಎಡಿಟರ್ ಆಗಿ ಶ್ರೀಕಾಂತ್ ಬಿರಾವು, ಕ್ರೀಡಾ ನಿರ್ದೇಶಕರಾಗಿ ಹಿಮಾಂಶು ಕುಮಾರ್, ಸಾಂಸ್ಕೃತಿಕ ಸೇವಾ ನಿರ್ದೇಶಕರಾಗಿ ಪಿ.ವಿ. ಸುಬ್ರಹ್ಮಣಿ, ಪಿ.ಆರ್.ಓ. ಆಗಿ ನವೀನ್ ಬನ್ನೂರು, ಸಾರ್ಜಂಟ್ ಆಗಿ ಮುರಳಿ ನೇಮಕಗೊಂಡಿದ್ದಾರೆ.
ಇಂದು ಪದಪ್ರದಾನ: ರೋಟರ್‍ಯಾಕ್ಟ್ ಜಿಲ್ಲೆ 3181 ಇದರ 8ನೇ ಜಿಲ್ಲಾ ಅಧಿವೇಶನ ಹಾಗೂ 8ನೇ ಜಿಲ್ಲಾ ಪ್ರತಿನಿಧಿಯ ಪದಪ್ರದಾನ ಸಮಾರಂಭ ಸುದಾನ ವಸತಿ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ನಡೆಯುತ್ತಿದೆ.