ಉಪ್ಪಳಿಗೆ ಸರಕಾರಿ ಪ್ರೌಢ ನಿವೃತ್ತ ಮುಖ್ಯಗುರು ನಾರಾಯಣ ಕೆ ಸಾಧನಾಭಿವಂದನಾ ಕಾರ್ಯಕ್ರಮದ ಕೃತಜ್ಞತಾ ಸಭೆ

0

ಪುತ್ತೂರು:ಇರ್ದೆ-ಉಪ್ಪಳಿಗೆ ಸರಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯು ಗುರು ನಾರಾಯಣ ಕೆಯವರ ಸಾಧನಾಭಿವಂದನಾ ಕಾರ್ಯಕ್ರಮ ಕೃತಜ್ಞತಾ ಸಭೆಯು ಜು.8ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ ಮಾತನಾಡಿ, ಕೇವಳ ಏಳು ದಿನದಲ್ಲಿ ಆಯೋಜನೆಗೊಂಡಿರುವ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮವು ಪ್ರತಿಯೊಬ್ಬರ ಸಂಘಟಿತ ಪ್ರಯತ್ನದ ಫಲವಾಗಿ ಕಾರ್ಯಕ್ರಮ ಯಶಸ್ವಿಯಾಗಿದೆ. ಯಾವುದೇ ರಾಜಕೀಯವಿಲ್ಲದೆ ಕಾರ್ಯಕ್ರಮ ನೆರವೇರಿದ್ದು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದ ಅವರು ಶಾಲೆಯಲ್ಲಿ ಮುಂದೆ ನಡೆಯುವ ಎಲ್ಲಾ ಕಾರ್ಯಗಳಿಗೆ ಸ್ಪಂದನೆ ನೀಡಲಾಗುವುದು. ಶಾಲೆಗೆ ಕ್ರೀಡಾಂಗಣ ನಿರ್ಮಿಸುವ ಮುಖ್ಯಗುರು ನಾರಾಯಣರವರ ಕನಸನ್ನು ನಾವೆಲ್ಲಾ ನನಸು ಮಾಡಬೇಕಾಗಿದೆ ಎಂದರು.


ಸಮಿತಿ ಸಂಚಾಲಕ ಚಿದಾನಂದ ಬೈಲಾಡಿ ಮಾತನಾಡಿ, ಅಭಿನಂದನಾ ಕಾರ್ಯಕ್ರಮವು ಅಚ್ಚುಕಟ್ಟಾಗಿ, ಯಶಸ್ವಿಯಾಗಿ ನಡೆಯುವ ಮೂಲಕ ನಾರಾಯಣರವರ ಪ್ರಾಮಾಣಿಕತೆಗೆ ಗೌರವ ಸಂದಿದೆ. ಸಾರ್ವಜನಿಕವಾಗಿ ಅಭಿನಂದನೆ ನಡೆದಿರುವುದು ವಿಶೇಷ. ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಶೈಲಿಯ ನಡೆದು ಮಾದರಿ ಕಾರ್ಯಕ್ರಮ ಮೂಡಿಬಂದಿದೆ. ಉಪ್ಪಳಿಗೆ ಪ್ರೌಢಶಾಲೆ ಉತ್ತಮ ಹೆಸರಿದ್ದು ನಾರಾಯಣರವರ ನಿವೃತ್ತಿಯಿಂದ ಶಾಲೆಯಲ್ಲಿ ಅವರ ಕೊರತೆ ಕಾಣಬಾರದು. ಫಲಿತಾಂಶ, ಮೂಲಭೂತ ಸೌಲಭ್ಯಗಳೊಂದಿಗೆ ಶಾಲೆಯ ಹೆಸರು ನಿರಂತರವಾಗಿ ಉಳಿಸಿಕೊಳ್ಳಬೇಕು ಎಂದರು.


ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ ರೈ ಬೈಲಾಡಿ ಹಾಗೂ ಸಮಿತಿ ಉಪಾಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿ, ಕಾರ್ಯಕ್ರಮದ ಯಶಸ್ವಿ ಸಹಕರಿಸಿದವರಿಗೆ ಕೃತಜ್ಷತೆ ಸಲ್ಲಿಸಿದರು. ಬೆಟ್ಟಂಪಾಡಿ ಗ್ರಾ.ಪಂ ಸದಸ್ಯೆ ಉಮಾವತಿ ಎಸ್.ಮಣಿಯಾಣಿ, ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಸದಾಶಿವ ರೈ ಗುಮ್ಮಟೆಗದ್ದೆ, ಪೋಷಕರಾದ ಸತೀಶ್ ಹಾಗೂ ಶ್ರೀಧರ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.


ಉಳಿಕೆ ಮೊತ್ತ ಶಾಲೆಗೆ:
ಮುಖ್ಯಗುರು ನಾರಾಯಣರವರ ಅಭಿನಂದನಾ ಕಾರ್ಯಕ್ರಮಗಳಿಗೆ ವಿವಿಧ ಮೂಲಗಳಿಂದ ಒಟ್ಟು ರೂ.1,82,000 ಸಂಗ್ರಹವಾಗಿದೆ. ಇದರಲ್ಲಿ ರೂ.1,68,630 ಅಭಿನಂದನಾ ಕಾರ್ಯಕ್ರಮಗಳಿಗೆ ವೆಚ್ಚವಾಗಿದೆ. ಉಳಿಕೆಯಾದ ರೂ.18,770ನ್ನು ಶಿಕ್ಷಕರ ಬೇಡಿಕೆಯಂತೆ ಶಾಲೆಯಆವಶ್ಯಕತೆಗಳಿಗೆ ಬಳಸಿಕೊಳ್ಳುವುದಾಗಿ ತೀರ್ಮಾನಿಸಲಾಯಿತು.
ಪ್ರಭಾರ ಮುಖ್ಯಗುರು ರಾಮಚಂದ್ರ ಲೆಕ್ಕಪತ್ರ ಮಂಡಿಸಿದರು. ಶಿಕ್ಷಕ ರಾಮಕೃಷ್ಣ ಪಡುಮಲೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವಿದ್ಯಾ ವಂದಿಸಿದರು.

LEAVE A REPLY

Please enter your comment!
Please enter your name here