ಅಮರನಾಥ ಯಾತ್ರೆ ಕೈಗೊಂಡಿರುವ ಪುತ್ತೂರು, ಕರಾಯದವರ ಸಹಿತ ದ.ಕ.ಜಿಲ್ಲೆಯ 20 ಯಾತ್ರಾರ್ಥಿಗಳೂ ಸೇನಾ ಕ್ಯಾಂಪ್‌ನಲ್ಲಿ ಸುರಕ್ಷಿತ

0

ಬಂಟ್ವಾಳ:ಅಮರನಾಥ ಯಾತ್ರೆ ಕೈಗೊಂಡಿರುವ ಬಂಟ್ವಾಳ ತಾಲೂಕಿನ ಐವರು, ಪುತ್ತೂರು,ಉಪ್ಪಿನಂಗಡಿಯ ಇಬ್ಬರ ಸಹಿತ ದ.ಕ.ಹಾಗೂ ಉಡುಪಿಯ ಒಟ್ಟು 20 ಮಂದಿ ಯಾತ್ರಾರ್ಥಿಗಳು ಸೇನಾ ಕ್ಯಾಂಪ್‌ನಲ್ಲಿ ಸುರಕ್ಷಿತರಾಗಿರುವ ಬಗ್ಗೆ ಸಂದೇಶ ಕಳುಹಿಸಿದ್ದಾರೆ.‌

ಅಮರನಾಥದ ರಂಭಾನ್ ಎಂಬ ಸ್ಥಳದಲ್ಲಿ ಭೂಕುಸಿತ ಉಂಟಾದ ಬಗ್ಗೆ ವರದಿ ಬಂದ ಬೆನ್ನಲ್ಲೇ ಯಾತ್ರಿಗಳಿಗೆ ಸಮಸ್ಯೆಯಾಗಿರುವ ಬಗ್ಗೆ ಆತಂಕ ಉಂಟಾಗಿತ್ತು.ಬಂಟ್ವಾಳದ ನರಿಕೊಂಬುವಿನಿಂದ ಸಂತೋಷ್ ಮಾರುತಿ ನಗರ ಎಂಬವರ ನೇತೃತ್ವದಲ್ಲಿ ಐವರು,ಅಡ್ಯಾರುವಿನಿಂದ 8, ಪುತ್ತೂರು, ಉಪ್ಪಿನಂಗಡಿ ಕರಾಯದಿಂದ ತಲಾ ಓರ್ವರು, ಉಡುಪಿಯಿಂದ 1, ಮೂಡಬಿದಿರೆಯಿಂದ 1, ಸಜಿಪದಿಂದ 3 ಮಂದಿ ಸೇರಿ 20 ಯತ್ರಾರ್ಥಿಗಳು ಅಮರನಾಥ ಯಾತ್ರೆ ಕೈಗೊಂಡಿದ್ದರು.ಜು.9ರ ಮಧ್ಯಾಹ್ನ ಸೇನಾ ಕ್ಯಾಂಪ್‌ನಲ್ಲಿದ್ದ ನಾವು ಸೇನಾಽಕಾರಿಗಳ ನಿರ್ದೇಶನದಂತೆ ಪಲ್ಗಾಮ್ ಬೇಸ್ ಕ್ಯಾಂಪ್‌ಗೆ ಬಂದಿದ್ದೇವೆ, ನಾಳೆ ನಮ್ಮ ಯಾತ್ರೆ ಪುನರ್ ಆರಂಭಗೊಳ್ಳಲಿದೆ ಎಂದು ನರಿಕೊಂಬು ಗ್ರಾಮದ ಸಂತೋಷ್ ಪತ್ರಿಕೆಗೆ ತಿಳಿಸಿದ್ದಾರೆ.

ರಂಭಾನ್ ಎಂಬ ಸ್ಥಳದಲ್ಲಿ ಗುಡ್ಡ ಕುಸಿತ ಕಂಡ ಹಿನ್ನೆಲೆಯಲ್ಲಿ ಅಮರನಾಥ ದೇವಾಲಯಕ್ಕೆ ತೆರಳುವ ದಾರಿ ಸಂಪೂರ್ಣ ಸ್ಥಗಿತಗೊಂಡಿತ್ತು,ಅತಿಯಾದ ಮಳೆಗೆ ಭೂಕುಸಿತ ಕಂಡು ಬಂದಿದ್ದು ಯಾತ್ರಾರ್ಥಿಗಳು ಜಾಗರೂಕತೆಯಿಂದ ಇರುವಂತೆ ತಿಳಿಸಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು.

ಮಣ್ಣು ತೆರವು ಕಾರ್ಯ ನಡೆಯುತ್ತಿದೆಯಾದರೂ ಮತ್ತೆ ಭೂಕುಸಿತ ಕಂಡು ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ದಿನದ ಮಟ್ಟಿಗೆ ಯಾತ್ರೆಯನ್ನು ಸ್ಥಗಿತಗೊಳಿಸಿದ್ದರು.ಆರಂಭದಲ್ಲಿ ಸಂತೋಷ್ ನರಿಕೊಂಬು ಅವರನ್ನೊಳಗೊಂಡ 20 ಜನ ಯಾತ್ರಾರ್ಥಿಗಳ ತಂಡ ಭೂಕುಸಿತ ಕಂಡ ಕಾರಣ ಮೇಲೆ ಅಮರನಾಥ ದೇವಾಲಯಕ್ಕೂ ಹೋಗಲು ಸಾಧ್ಯವಾಗದೆ, ಅತ್ತ ಕೆಳಗೆ ಜಮ್ಮು ಕಾಶ್ಮೀರಕ್ಕೂ ಹೋಗಲು ಸಾಧ್ಯವಾಗದೆ ಸಿ.ಆರ್.ಪಿ.ಎಫ್ ಕ್ಯಾಂಪ್‌ನಲ್ಲಿ ವಿಶ್ರಾಂತಿ ಪಡೆದಿದ್ದರು.ಇದೀಗ ಜು.10ರ ಸೋಮವಾರ ಯಾತ್ರೆ ಆರಂಭ ಎಂದು ಸೇನಾಧಿಕಾರಿಗಳು ತಿಳಿಸಿರುವುದು ಸಂತಸ ತಂದಿದೆ ಎಂದು ಸಂತೋಷ್ ತಿಳಿಸಿದ್ದಾರೆ.ಜು.4ರಂದು ಟ್ರೈನ್ ಮೂಲಕ ಇವರು ಯಾತ್ರೆ ಕೈಗೊಂಡಿದ್ದು, ಅಮರನಾಥ ಯಾತ್ರೆ ಬಳಿಕ ವೈಷ್ಣೋದೇವಿ ಯಾತ್ರೆ ಮಾಡಲಿದ್ದಾರೆ.

ಕನ್ನಡಿಗರ ರಕ್ಷಣೆಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ನೇಮಕ: ಅಮರನಾಥ ಯಾತ್ರೆಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರವು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಅವರನ್ನು ನೇಮಿಸಿದೆ.
ಅಮರನಾಥ ಯಾತ್ರೆಗೆ ತೆರಳಿದ್ದವರು ಸಂಕಷ್ಟಕ್ಕೆ ಸಿಲುಕಿದ ವಿಚಾರವಾಗಿ ಕರ್ನಾಟಕದ ಯಾತ್ರಾರ್ಥಿಗಳ ಬಗ್ಗೆ ಸಿಎಂ ಸಿದ್ಧರಾಮಯ್ಯ ಮಾಹಿತಿ ಪಡೆದುಕೊಂಡಿದ್ದಾರೆ.ಸಂಪರ್ಕಕ್ಕೆ ಸಿಕ್ಕ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಸಂತ್ರಸ್ತರ ರಕ್ಷಣೆ ಹಾಗೂ ರಾಜ್ಯಕ್ಕೆ ಕರೆತರುವ ಬಗ್ಗೆ ಸಿಎಂ ಸೂಚನೆ ನೀಡಿದ್ದಾರೆ.ಅದರ ಅನ್ವಯ ಯಾತ್ರೆಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಅವರನ್ನು ಸರ್ಕಾರ ನೇಮಕ ಮಾಡಿದೆ.

ದ.ಕ.ಜಿಲ್ಲೆಯ 20 ಮಂದಿ ಸೇರಿದಂತೆ ರಾಜ್ಯದಿಂದ ಒಟ್ಟು 80 ಮಂದಿ ಜು.4ರಂದು ಅಮರನಾಥ ದರ್ಶನಕ್ಕೆ ತೆರಳಿದ್ದರು.ದರ್ಶನ ಪಡೆದು ಶುಕ್ರವಾರ ವಾಪಸ್ ತೆರಳುವ ವೇಳೆ ಭಾರೀ ಮಳೆಯಿಂದಾಗಿ ಮಾರ್ಗಮಧ್ಯೆ ಗುಡ್ಡ ಕುಸಿತವಾಗಿದೆ.ಬೇಸ್ ಕ್ಯಾಂಪ್‌ನಲ್ಲಿ ಆಶ್ರಯ ಪಡೆದು ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ. ಸದ್ಯ 6 ಯಾತ್ರಾರ್ಥಿಗಳನ್ನು ಹೆಲಿಕಾಪ್ಟರ್ ಮೂಲಕ ಏರ್ ಲಿಫ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ನಾನು ಸೇಫ್ ಅಭಿಲಾಷ್ ಸಂದೇಶ
ಜಮ್ಮುಕಾಶ್ಮೀರದಲ್ಲಿ ಮಳೆಯ ಕಾರಣ ಅಲ್ಲಲ್ಲಿ ಭೂಕುಸಿತಗಳು ಕಾಣುತ್ತಿದ್ದು, ಅಮರನಾಥ ಯಾತ್ರೆಗೆ ತೆರಳಿದ್ದ ದ.ಕ.ಜಿಲ್ಲೆಯ 20 ಮಂದಿ ಸೇಫ್ ಆಗಿರುವ ಸುದ್ದಿ ಬರುತ್ತಲೇ, ವ್ಯಕ್ತಿಯೋರ್ವರು ವಿಡಿಯೋ ಕಳುಹಿಸಿ ನಾನು ಸೇಫ್, ನಾನು ಒಬ್ಬನೇ ಯಾತ್ರೆ ಮಾಡಿದ್ದು, ಯಾವುದೇ ಸಮಸ್ಯೆ ಆಗಿಲ್ಲ ಎಂದು ವಿಡಿಯೋ ಸಂದೇಶ ಕಳುಹಿಸಿದ್ದಾರೆ.
ಬೋಳಂತೂರು ನಿವಾಸಿ ಅಭಿಲಾಷ್ ಎಂಬವರು ವಿಡಿಯೋ ಒಂದನ್ನು ಕಳುಹಿಸಿದ್ದಾರೆ.‌

ಪುರಾಣಿ ಮಂಡಿ ಆಶ್ರಮದಲ್ಲಿ ಸೇಫ್ ಆಗಿದ್ದೇನೆ ಎಂದು ವಿಡಿಯೋ ಮಾಡಿ ಕಳುಹಿಸಿದ್ದಾರೆ.ಅವರು ತಂಗಿರುವ ಆಶ್ರಮದಿಂದ 280 ಕಿಮೀ ಇದ್ದು, ಮಿಲಿಟರಿ ಅವರು ಹೋಗಲು ಅನುವು ಮಾಡಿದ ಕೂಡಲೇ ಅಮರನಾಥ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ವಾಪಸು ಬರುವುದಾಗಿ ಸಂದೇಶದಲ್ಲಿ ತಿಳಿಸಿದ್ದಾರೆ. ತಾನು ತಂಗಿರುವ ಕ್ಯಾಂಪ್‌ನಲ್ಲಿ ಊಟ ವಸತಿ ಸಹಿತ ಎಲ್ಲವನ್ನು ಉಚಿತವಾಗಿ ನೀಡುತ್ತಿದ್ದಾರೆ ,ಯಾವುದೇ ಸಮಸ್ಯೆ ಇಲ್ಲ.ನನ್ನ ಜೊತೆ ಬೇರೆ ಬೇರೆ ಕಡೆಗಳಿಂದ ಬಂದಿರುವ ಅನೇಕ ಯಾತ್ರಾರ್ಥಿಗಳು ಸೇಫ್ ಅಗಿ ಇದ್ದಾರೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here