ಅಹಿಂಸೆಯನ್ನು ಪ್ರತಿಪಾದಿಸುವ ಜೈನ ಮುನಿಗಳ ಹತ್ಯೆ ಆರೋಪಿಗಳಿಗೆ ಮರಣ ದಂಡನೆಯಾಗಬೇಕು-ರಾಜ್ಯ ದಾರಿಮಿ ಉಲಮಾ ಒಕ್ಕೂಟ ಆಗ್ರಹ

0

ಮಂಗಳೂರು; ಅಹಿಂಸಾ ತತ್ವದ ಜೈನ ಮುನಿ ಧಾರ್ಮಿಕ ಆಚಾರ್ಯ ಕಾಮಕುಮಾರ ನಂದಿ ಮಹಾರಾಜ ಸ್ವಾಮೀಜಿಗಳ ಹತ್ಯೆಯು ಇಡೀ ಮಾನವ ಕುಲಕ್ಕೆ ಕಪ್ಪು ಚುಕ್ಕೆಯಾಗಿದೆ.ಅಮಾನವೀಯವೂ ರಾಕ್ಷಸೀಯವೂ ಆದ ಈ ಕ್ರೂರ ಕೃತ್ಯವೆಸಗಿದ ರಾಕ್ಷಸರನ್ನು ಜಾತಿ ಧರ್ಮದ ಹಂಗಿಗೆ ಒಳಗಾಗದೇ ಮರಣ ದಂಡನೆಯಂತಹ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕೆಂದು ರಾಜ್ಯ ದಾರಿಮಿ ಉಲಮಾ ಒಕ್ಕೂಟ ಸರಕಾರವನ್ನು ಒತ್ತಾಯಿಸಿದೆ.


ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೇ ಇದರ ಹಿಂದಿರುವ ಎಲ್ಲಾ ಷಡ್ಯಂತ್ರವನ್ನು ಬಯಲಿಗೆಳೆದು ನ್ಯಾಯಯುತವಾದ ತನಿಖೆ ನಡೆಸಿ ಜನರ ಗೊಂದಲವನ್ನು ನಿವಾರಿಸಬೇಕಾಗಿದೆ.


ಇಂತಹ ಕ್ರೂರ ಕೃತ್ಯಗಳಿಂದಾಗಿ ಇಡೀ ದೇಶದ ಮಾನ ಹರಾಜಾಗುತ್ತಿದ್ದು ಇದನ್ನು ಸ್ವಾರ್ಥ ರಾಜಕೀಯಕ್ಕೆ ಬಳಸಿಕೊಳ್ಳದೇ ಮುಂದೆ ಇಂತಹ ಕೃತ್ಯಗಳು ಮರುಕಳಿಸದಂತೆ ನೋಡಿ ಕೊಳ್ಳಲು ಬೇಕಾದ ಕಾನೂನು ಕ್ರಮಗಳನ್ನು ತೆಗೆದು ಕೊಳ್ಳಲು ಪಕ್ಷ ಭೇದ ಮೆರೆತು ಒತ್ತಾಯಿಸ ಬೇಕಿದೆ ಎಂದು ದಾರಿಮಿ ಒಕ್ಕೂಟ ಅಭಿಪ್ರಾಯ ಪಟ್ಟಿದೆ ಎಂದು ಸಮಿತಿಯ ಅಧ್ಯಕ್ಷ ಎಸ್ ಬಿ ದಾರಿಮಿ,ಕಾರ್ಯದರ್ಶಿ ಯುಕೆ ದಾರಿಮಿ,ಕೋಶಾಧಿಕಾರಿ ಹುಸೈನ್ ದಾರಿಮಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here