ಕಡಬ: ಶಾಲಾ ಬಾಲಕಿ ಎಂಟು ತಿಂಗಳ ಗರ್ಭಿಣಿ ಪೋಕ್ಸೋ ಪ್ರಕರಣ-ಆರೋಪಿಯ ಬಂಧನ

0

ಕಡಬ: ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಲು ಕಾರಣನಾದ ಆರೋಪಿ ಯುವಕನ ವಿರುದ್ಧ ಕಡಬ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿ ಬಂಧಿಸಿದ ಘಟನೆ ಕೋಡಿಂಬಾಳದಿಂದ ವರದಿಯಾಗಿದೆ. ಕೋಡಿಂಬಾಳ ಗ್ರಾಮದ ನಿಶಾಂತ್ (20 ವ) ಬಂಧಿತ ಆರೋಪಿ. ಈತ ತನ್ನ ಸಂಬಂಧಿ 14ರ ಹರೆಯದ ಬಾಲಕಿಯನ್ನು ಅತ್ಯಾಚಾರವೆಸಗಿ ಎಂಟು ತಿಂಗಳ ಗರ್ಭಕ್ಕೆ ಕಾರಣಾಗಿದ್ದ ಎಂದು ಅರೋಪಿಸಲಾಗಿದೆ.


ತಾಯಿ ಜೊತೆ ಬಾಲಕಿ ಕಡಬ ಸಮುದಾಯ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಬಾಲಕಿ ಎಂಟು ತಿಂಗಳ ಗರ್ಭಿಣಿಯಾಗಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಆರೋಪಿತ ಯುವಕನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

LEAVE A REPLY

Please enter your comment!
Please enter your name here