ಪುತ್ತೂರು: 2023ನೇ ಸಾಲಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ವಸತಿ ಶಾಲೆಗಳಲ್ಲಿ ಪ್ರವೇಶಕ್ಕೆ ನಡೆದ ಪ್ರವೇಶ ಪರೀಕ್ಷೆಯ ಮೂರನೇ ಹಂತದ ಆಯ್ಕೆ ಪಟ್ಟಿ ಪ್ರಕಟಗೊಂಡಿದ್ದು, ಬೆಳ್ಳಾರೆ ಮತ್ತು ಸುಳ್ಯದ ಜ್ಞಾನದೀಪ ತರಬೇತಿ ಸಂಸ್ಥೆಯಿಂದ ತರಬೇತಿ ಪಡೆದ 15 ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ಸಂಸ್ಥೆಯ ಒಟ್ಟು 41 ವಿದ್ಯಾರ್ಥಿಗಳು ಮೊರಾರ್ಜಿ ಶಾಲೆಗೆ ಆಯ್ಕೆಯಾಗಿದ್ದಾರೆ.
ಮುರುಳ್ಯದ ಚಿನ್ನಪ್ಪ ಮತ್ತು ವಿಮಲಾಕ್ಷಿ ದಂಪತಿಯ ಪುತ್ರ ಸಿ.ವಿ ಸಾಗರ್ ಮುಂಡಾಜೆ ಮೊರಾರ್ಜಿ ಶಾಲೆಗೆ, ಮರ್ಕಂಜದ ಸಂತೋಷ್ ಎಂ ಮತ್ತು ರೇಷ್ಮ ಎಂ ದಂಪತಿಯ ಪುತ್ರ ಮನ್ವಿತ್ ಎಂ ಮುಂಡಾಜೆ ಮೊರಾರ್ಜಿ ಶಾಲೆಗೆ, ಕಲ್ಮಡ್ಕದ ಬೆಳಿಯಪ್ಪ ಕೆ ಮತ್ತು ಪವಿತ್ರ ಕೆ .ಬಿ ದಂಪತಿಯ ಪುತ್ರಿ ಹಿತ ಕೆ.ಬಿ ಮತ್ತು ಮಡಪ್ಪಾಡಿ ಬಳ್ಕಾಜೆಯ ಚಂದ್ರಶೇಖರ ಬಿ ಮತ್ತು ಉಮಾವತಿ ಬಿ ದಂಪತಿಯ ಪುತ್ರಿ ಸೋನಿಕ ಬಿ.ಸಿ ಮತ್ತು ಮುರುಳ್ಯ ಪಲ್ಲತಡ್ಕದ ಯತೀಶ್ ಪಿ.ಎಸ್ ಮತ್ತು ಮಧು ಪಿ.ಆರ್ ದಂಪತಿಯ ಪುತ್ರ ಆರ್ಯನ್ ಮೌರ್ಯರವರು ಕಮ್ಮಾಜೆ ಮೊರಾರ್ಜಿ ಶಾಲೆಗೆ, ಚಾರ್ವಕದ ದಯಾನಂದ ಮತ್ತು ಕೀರ್ತಿ ದಂಪತಿಯ ಪುತ್ರಿ ಕುಶ್ಯ ಡಿ ಗೌಡ ಹಾಗೂ ಎಡಮಂಗಲ ಗ್ರಾಮದ ಕರೀಂಬಿಲ ವೀಣಾ ಮತ್ತು ತಾರಾನಾಥ ದಂಪತಿಯ ಪುತ್ರಿ ಪ್ರಣೀತ ಕೆ ಕಲ್ಲುಬೆಟ್ಟು ಮೊರಾರ್ಜಿ ಶಾಲೆಗೆ, ಬೆಳಂದೂರಿನ ಲೋಕೇಶ್ ಕೆ ಮತ್ತು ಪ್ರಮೀಳಾ ಪಿ.ಯು ದಂಪತಿಯ ಪುತ್ರ ಉದೀಪ್ತ್ ಗೌಡ ಕೆ .ಎಲ್ ಮಚ್ಚಿನ ಮೊರಾರ್ಜಿ ಶಾಲೆಗೆ, ಮುರುಳ್ಯದ ನವೀನ್ ಕುಮಾರ್ ಮತ್ತು ವಿದ್ಯಾ ದಂಪತಿಯ ಪುತ್ರಿ ನಿರೀಕ್ಷಾ ಪಿ, ಕೂತ್ಕುಂಜದ ಚೆನ್ನಕೇಶವ ಮತ್ತು ರೋಹಿಣಿ ದಂಪತಿಯ ಪುತ್ರ ಎ.ಕೆ ಮೇಘನ್ ಹಾಗೂ ಕೊಳ್ತಿಗೆ ಗ್ರಾಮದ ನವೀನ್ ಗೌಡ ಮತ್ತು ಗೀತಾ ದಂಪತಿಯ ಪುತ್ರ ಪೂರ್ಣೇಶ್‌ರವರು ವಗ್ಗ ಮೊರಾರ್ಜಿ ಶಾಲೆಗೆ, ಬಾಳುಗೋಡು ಗ್ರಾಮದ ಪರಮೇಶ್ವರ ಮತ್ತು ಪವಿತ್ರ ದಂಪತಿಯ ಪುತ್ರಿ ನಿಧಿ ಕೆ, ಉಬರಡ್ಕ ಮಿತ್ತೂರಿನ ಪದ್ಮನಾಭ ಎ ಮತ್ತು ಪುಷ್ಪಲತಾ ದಂಪತಿಯ ಪುತ್ರ ಕೃಷ್ಣಪ್ರಸಾದ್ ಎ ಪಿ ಕೊಂಪದವು ಮೊರಾರ್ಜಿ ಶಾಲೆಗೆ, ಐವರ್ನಾಡು ಗ್ರಾಮದ ನಾಗೇಶ್ ಬಿ ಮತ್ತು ಅಶ್ವಿತ ದಂಪತಿಯ ಪುತ್ರಿ ಸಾನಿಧ್ಯ ಬಿ ಹಾಗೂ ಪಾಲ್ತಾಡಿ ಗ್ರಾಮದ ರಘುನಾಥ ಮತ್ತು ಜಯಲಕ್ಷ್ಮಿ ದಂಪತಿಯ ಪುತ್ರಿ ತನುಶ್ರೀ ಮಂಗಳೂರಿನ ಗುರುಪುರ ಮೊರಾರ್ಜಿ ಶಾಲೆಗೆ ಮೂರನೇ ಸುತ್ತಿನಲ್ಲಿ ಆಯ್ಕೆಯಾಗಿದ್ದಾರೆ.
ಜ್ಞಾನದೀಪ ತರಬೇತಿ ಸಂಸ್ಥೆಯು 2023-24ನೇ ಸಾಲಿನಿಂದ ಬೆಳ್ಳಾರೆ, ಸುಳ್ಯ ಮತ್ತು ಉಪ್ಪಿನಂಗಡಿಯಲ್ಲಿ ನವೋದಯ ಮತ್ತು ಮೊರಾರ್ಜಿ ಶಾಲೆಯ ಪ್ರವೇಶಕ್ಕೆ ತರಗತಿಗಳನ್ನು ನಡೆಸಲಿದ್ದು ಜುಲೈ ಮೊದಲ ವಾರದಲ್ಲಿ ತರಗತಿ ಆರಂಭಗೊಳ್ಳಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.