ಬೆಂಗಳೂರು: ಮುಂದಿನ ವರ್ಷದಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗಳ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಪ್ರಸ್ತಾಪಿಸಿದ ಪಂಚಾಯಿತಿ ಸಬಲೀಕರಣದ ವಿಷಯ ಕುರಿತ ಚರ್ಚೆಗೆ ಉತ್ತರಿಸಿದ ಪ್ರಿಯಾಂಗ್ ಖರ್ಗೆ ಅವರು, ರಾಜ್ಯದಲ್ಲಿ 5,341 ಪಿಡಿಒಗಳು ಇದ್ದಾರೆ. 150 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ.ಪ್ರಸ್ತುತ ಸ್ಥಳೀಯ ಶಿಫಾರಸು, ಆಡಳಿತಾತ್ಮಕ ಕಾರಣಗಳಿಗಾಗಿ ಪ್ರತಿ ವರ್ಷ ನಿಗದಿತ ಪ್ರಮಾಣದಲ್ಲಿ ವರ್ಗಾವಣೆ ನಡೆಯುತ್ತಿದೆ. ಮುಂದಿನ ವರ್ಷದಿಂದ ಕೌನ್ಸೆಲಿಂಗ್‌ನಲ್ಲೇ ಪಿಡಿಒಗಳು ಸ್ಥಳ ಆಯ್ಕೆ ಮಾಡಿಕೊಳ್ಳಬಹುದು ಎಂದರು.
ಗ್ರಾಮ ಪಂಚಾಯಿತಿಗಳಲ್ಲಿ ನಿರೀಕ್ಷೆಯಂತೆ ತೆರಿಗೆ ಸಂಗ್ರಹ ನಡೆಯುತ್ತಿಲ್ಲ.ಸುಮಾರು ರೂ.8 ಸಾವಿರ ಕೋಟಿ ವಸೂಲಾಗಬೇಕಿದೆ. ನೆಟ್‌ವರ್ಕ್ ಟವರ್‌ಗಳ ಬಾಕಿ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ.ಪಂಚತಂತ್ರ-2 ತಂತ್ರಾಂಶದ ಮೂಲಕ ತೆರಿಗೆ ಸಂಗ್ರಹ, ಸಿಬ್ಬಂದಿ ವೇತನ ಪ್ರಕ್ರಿಯೆ ನಡೆಯುತ್ತಿದೆ. ಗ್ರಾಮ ಸಭೆಗಳು, ಕೆಡಿಪಿಯ 11 ಸಾವಿರ ಸಭೆಗಳನ್ನು ಟ್ರ್ಯಾಕ್ ಮಾಡಲಾಗಿದೆ.ಶೇ.70ರಷ್ಟು ಸಭೆಗಳು ಕೋರಂ ಕಾರಣಕ್ಕೆ ರದ್ದಾಗಿವೆ ಎಂದು ಸಚಿವ ಖರ್ಗೆ ಹೇಳಿದರು.