ಪುತ್ತೂರು:ಟ್ರೂ ಕ್ಯಾಶುವಲ್ ಬ್ರಾಂಡ್‌ನ ಕಸ್ಟಮೈಸ್‌ಡ್ ಟೀಶರ್ಟ್‌ಗಳ ಮಳಿಗೆ ತನ್ಮಯಿ ಬೊಳುವಾರು ಗಣೇಶ್ ಪ್ರಸಾದ್ ಬಿಲ್ಡಿಂಗ್‌ನ ಟಿವಿಎಸ್ ಶೋ.ರೂಂ ಬಳಿ ಶುಭಾರಂಭಗೊಂಡಿತು.
ನೂತನ ಮಳಿಗೆಯನ್ನು ಮ್ಹಾಲಕರ ತಂದೆ ಕೃಷ್ಣ ಕುಮಾರ್ ಬೈಪಾಡಿತ್ತಾಯ ನೆಕ್ಕರೆಕಾಡು ಹಾಗೂ ತಾಯಿ ಸುಮಾ ದೀಪ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು. ರಾಜ್‌ಮನೋಹರ್ ಪ್ರಥಮ ಖರೀದಿ ಮಾಡಿದರು. ಮ್ಹಾಲಕರ ಪತ್ನಿ ಹರ್ಷಿತಾ ಪುತ್ರಿ ತನ್ಮಯೀ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ನಮ್ಮಲ್ಲಿ ತುಳುನಾಡಿನ ವೈಶಿಷ್ಟ್ಯತೆ, ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ತುಳುನಾಡಿನ ವಿಶೇಷತೆಗಳನ್ನು ಡಿಸೈನ್ ಹಾಗೂ ಬರಹಗಳ ಮೂಲಕ ಟೀಶರ್ಟ್‌ಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪ್ರಿಂಟ್ ಮಾಡಿಕೊಡಲಾಗುವುದು. ಟೀಶರ್ಟ್‌ಗಳು ಶೇ.100ರಷ್ಟು ಕಾಟನ್ ಬಟ್ಟೆಗಳಾಗಿದೆ. ಡಿಸೈನ್ ಹಾಗೂ ಬರಹಳನ್ನು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಮಾಡಿಕೊಡಲಾಗುವುದು. ಕಳೆದ ಒಂದು ವರ್ಷಗಳಿಂದ ಆನ್‌ಲೈನ್ ಮೂಲಕ ವ್ಯವಹಾರ ನಡೆಸುತ್ತಿದ್ದು ಇದೀಗ ಪ್ರಥಮ ಬಾರಿಗೆ ಮಳಿಗೆಯ ಮೂಲಕ ಗ್ರಾಹಕರಿಗೆ ಸೇವೆ ನೀಡಲಾಗುತ್ತಿದೆ. ಸಂಸ್ಥೆಯು www.trucasuais.com ವೆಬ್‌ಸೈಟ್ ಹೊಂದಿದ್ದು ಅದರ ಮೂಲಕ ಬುಕ್ಕಿಂಗ್ ಮಾಡಬಹುದಾಗಿದೆ. ಜೊತೆಗೆ ಮಳಿಗೆಯಲ್ಲಿ ಡ್ರಾಪ್ ಶೋಲ್ಡರ್ ಟಿ ಶರ್ಟ್, ಯುನಿಸೆಕ್ಸ್ ರೌಂಡ್ ನೆಕ್, ಪೊಲೊ ಟಿಶರ್ಟ್, ಕಾರ್ಪೋರೇಟ್ ಟಿಶರ್ಟ್, ಓವರೈಸ್‌ಡ್ ಟಿಶರ್ಟ್, ಕಪಲ್ ಟಿಶರ್ಟ್, ಕಿಡ್ಸ್ ಟಿಶರ್ಟ್ ಹಾಗೂ ಕ್ಯಾಪ್ ಪ್ರಿಂಟಿಂಗ್ ಸೇವೆಗಳು ಲಭ್ಯವಿದೆ ಎಂದು ಮ್ಹಾಲಕ ಶ್ರೀನಿಧಿ ತಿಳಿಸಿದ್ದಾರೆ.