12 ಮಂದಿಗೆ ಬ್ಲ್ಯಾಕ್ ಬೆಲ್ಟ್ ಪ್ರದಾನ

0

ಪುತ್ತೂರು:ಇಂಪ್ಯಾಕ್ಟ್ ಆರ್ಟ್ ಆಂಡ್ ಸ್ಪೋರ್ಟ್ಸ್ ಕರಾಟೆ ಕ್ಲಬ್ ಮತ್ತು ಬುಡೋ ಅಕಾಡೆಮಿ ವತಿಯಿಂದ ಇಲ್ಲಿನ ದಿನೇಶ್ ಭವನ ಹಾಲ್‌ನಲ್ಲಿ ನಡೆದ ಕರಾಟೆ ಶಿಬಿರ ಹಾಗು ಬ್ಲ್ಯಾಕ್ ಬೆಲ್ಟ್ ಗ್ರೇಡಿಂಗ್‌ನಲ್ಲಿ 12 ಮಂದಿಗೆ ಕರಾಟೆ ಬ್ಲ್ಯಾಕ್ ಬೆಲ್ಟ್ ವಿತರಿಸಲಾಯಿತು.


ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಹರ್ಷನ್, ಇಶಿಕಾ ಕೆ., ವಿವೇಕಾನಂದ ಪ್ರೌಢಶಾಲಾ ಮನೀಶ್ ಎಚ್.ಎಸ್., ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಅಶ್ಮೀ ರೈ, ಪವನ್, ದಿಶಾಂತ್ ಎನ್., ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲಾ ಭವಿಶ್, ಖುಷಿ ಕೆ.ಎಂ., ಸುದಾನ ಶಾಲಾ ಮೋನಿಕಾ ಬಿ.ವಿ., ಅಂಬಿಕಾ ಪದವಿಪೂರ್ವ ಕಾಲೇಜಿನ ರಿಶಬ್ ಆರ್ ರೈ., ಸಾನ್ವೀ ಪಿ. ರೈ ಹಾಗೂ ಸರಸ್ವತಿ ವಿದ್ಯಾಲಯದ ವಿಸ್ಮಯ ಎನ್ ನಾಯಕ್‌ರವರಿಗೆ ಕರಾಟೆ ಬ್ಲ್ಯಾಕ್ ಬೆಲ್ಟ್ ವಿತರಿಸಲಾಯಿತು. ಬುಡೋ ಅಕಾಡೆಮಿಯ ರಾಷ್ಟ್ರೀಯ ಮುಖ್ಯ ತಾಂತ್ರಿಕ ನಿರ್ದೇಶಕರಾಗಿರುವ ಚೆನ್ನೈಯ ಕ್ಯೋಶಿ ಕರಾಟೆ ಎನ್. ಮೋಹನ್ ಶಿಬಿರ ನಡೆಸಿ ಬ್ಲ್ಯಾಕ್ ಬೆಲ್ಟ್ ಗ್ರೇಡಿಂಗ್ ಮಾಡಿದರು. ಈ ಸಂದರ್ಭದಲ್ಲಿ ಇಂಪ್ಯಾಕ್ಟ್ ಆರ್ಟ್ ಆಂಡ್ ಸ್ಪೋರ್ಟ್ಸ್ ಕರಾಟೆ ಕ್ಲಬ್‌ನ ಮುಖ್ಯ ಶಿಕ್ಷಕ ಶಿಹಾನ್ ಟಿ.ಡಿ.ಥೋಮಸ್, ಶಿಕ್ಷಕರುಗಳಾದ ದಿನೇಶ್ ಎಂ.ಬಿ., ತಾರನಾಥ ಹೊಸೋಳಿಕೆ, ಜಗದೀಶ ಆಚಾರ್ಯ, ಕೆವಿನ್ ತೋಮಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here