ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಕ್ಷೇತ್ರ ಸಮಿತಿ ಪುತ್ತೂರು ಇದರ ಮಹಾಸಭೆಯ ಪೂರ್ವಭಾವಿ ಸಭೆ, ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಕ್ಷೇತ್ರ ಸಮಿತಿ ಪುತ್ತೂರು ಇದರ ಮಹಾಸಭೆಯ ಬಗ್ಗೆ ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜು.16ರಂದು ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಡೆಯಿತು.

ಕ್ಷೇತ್ರ ಸಮಿತಿಯ ಅಧ್ಯಕ್ಷ ಜಯರಾಮ್ ಬಿ ಎನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಆಮಂತ್ರಣ ಪತ್ರಿಕೆ ಬಿಡುಗಡೆಗೆ ಮೊದಲು ಶ್ರೀ ಶಾರದ ಭಜನಾ ಮಂದಿರದಲ್ಲಿ ಪ್ರಾರ್ಥಿಸಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಈ ಸಭೆಯಲ್ಲಿ ಜು.30 ರಂದು ನಡೆಯಲಿರುವ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಕ್ಷೇತ್ರ ಸಮಿತಿ ಪುತ್ತೂರು ಇದರ ಮಹಾಸಭೆಯ ಬಗ್ಗೆ ಚರ್ಚಿಸಲಾಯಿತು. ಮಹಾಸಭೆಯ ಸಂದರ್ಭದಲ್ಲಿ ಇಬ್ಬರು ಹಿರಿಯ ವೃತ್ತಿಬಾಂಧವರನ್ನು ಸನ್ಮಾನಿಸುವುದು ಹಾಗೂ ನಮ್ಮ ವೃತ್ತಿ ಬಾಂಧವರ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ 2022-23ನೇ ಸಾಲಿನಲ್ಲಿ 90%ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗವನ್ನು ಪಡೆಯುವ ವೃತ್ತಿಬಾಂಧವರು 2022ನೇ ಸಾಲಿನ ಸದಸ್ಯತ್ವ ನವೀಕರಣ ಆಗಿರಬೇಕು ಎಂದು ಅಧ್ಯಕ್ಷರು ತಿಳಿಸಿರುತ್ತಾರೆ.

ಅದೇ ದಿನ ಹೊಸ ಸದಸ್ಯತ್ವ ಹಾಗೂ ನವೀಕರಣ ಮಾಡಲು ಅವಕಾಶವಿದೆ ಎಂದು ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಉಪ್ಪಿನಂಗಡಿ ವಲಯದ ಜನಾರ್ಧನ ಟೈಲರ್ ಹಾಗೂ ಸವಣೂರು ವಲಯದ ರಾಮಚಂದ್ರ ಬನಾರಿ ಇವರಿಗೆ ಕ್ಷೇತ್ರ ಸಮಿತಿ ವತಿಯಿಂದ ಮೌನ ಪ್ರಾರ್ಥನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಹಾಸಭೆಗೆ ಪುತ್ತೂರು ಕ್ಷೇತ್ರ ಶಾಸಕರಾದ ಅಶೋಕ್ ಕುಮಾರ್ ರೈ ಇವರನ್ನು ಆಮಂತ್ರಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಅಧ್ಯಕ್ಷರಾದ ಜಯರಾಮ್ ಬಿ ಎನ್, ರಾಜ್ಯ ಸಮಿತಿಯ ಆಂತರಿಕ ಲೆಕ್ಕ ಪರಿಶೋಧಕರಾದ ರಘುನಾಥ ಬಿ, ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಉಮಾ ಯು ನಾಯ್ಕ್, ಕ್ಷೇತ್ರ ಸಮಿತಿಯ ಕೋಶಾಧಿಕಾರಿ ಸುಜಾತ, ಜಿಲ್ಲಾ ಸಮಿತಿ ಸದಸ್ಯರುಗಳಾದ ಶಂಭು ಬಲ್ಯಾಯ ಹಾಗೂ ಚಿತ್ರ ಬಿ.ಸಿ ಉಪಸ್ಥಿತರಿದ್ದರು.

ಸಭೆಯಲ್ಲಿ ನಗರವಲಯದ ಅಧ್ಯಕ್ಷ ದಿನೇಶ್ ಸಂಪ್ಯ, ಪ್ರ.ಕಾರ್ಯದರ್ಶಿ ಆಶಾ ಕಲ್ಲಾರೆ, ಕೋಶಾಧಿಕಾರಿ ಜಯದೇವ, ನಿಕಟಪೂರ್ವ ಅಧ್ಯಕ್ಷ ಯಶೋಧರ್ ಜೈನ್, ನಿಕಟಪೂರ್ವ ಪ್ರ.ಕಾರ್ಯದರ್ಶಿ ಭಾರತಿ ಎಚ್, ಸದಸ್ಯರುಗಳಾದ ರಮೇಶ್ ಕೆಮ್ಮಾಯಿ, ಜಯಶ್ರೀ ಡಿ, ಗುಲಾಬಿ, ಚಂದ್ರಕಲಾ ಹಾರಾಡಿ, ಪವಿತ್ರ ಎಂ.ರೈ, ವಿಜಯಲಕ್ಷ್ಮೀ, ವನಿತಾ, ಕುಂಬ್ರ ವಲಯದ ನಿಕಟಪೂರ್ವ ಅಧ್ಯಕ್ಷ ಆನಂದ ರೈ, ಪ್ರ.ಕಾರ್ಯದರ್ಶಿ ಬಿ.ಸಿ ಚಿತ್ರಾ, ಕೋಶಾಧಿಕಾರಿ ನಿರ್ಮಲ, ಸದಸ್ಯ ಬಾಲಕೃಷ್ಣ ಪಾಟಾಳಿ, ನರಿಮೊಗರು ವಲಯದ ಪ್ರ.ಕಾರ್ಯದರ್ಶಿ ವಸಂತ ಗೌಡ, ಜಿಲ್ಲಾ ಸಮಿತಿ ಸಂಘಟನಾ ಜೊತೆ ಕಾರ್ಯದರ್ಶಿ ಶಂಭು ಬಲ್ಯಾಯ, ಸದಸ್ಯರುಗಳಾದ ಭಾರತಿ ಜಯಾನಂದ, ಮೀನಾಕ್ಷಿ ಮುಂಡೂರು, ಈಶ್ವರ ಮಂಗಲ ವಲಯದ ಅಧ್ಯಕ್ಷ ರೇವತಿ ಸಿ.ಎನ್, ಪ್ರ.ಕಾರ್ಯದರ್ಶಿ ಗಣೇಶ, ಪಾಣಾಜೆ ವಲಯದ ಕೋಶಾಧಿಕಾರಿ ವಿದ್ಯಾಲಕ್ಷ್ಮೀ, ನಿಕಟಪೂರ್ವ ಅಧ್ಯಕ್ಷೆ ಸುರೇಖ ಉಪಸ್ಥಿತರಿದ್ದರು. ಎಲ್ಲಾ ವಲಯದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು. ಕಾರ್ಯದರ್ಶಿ ಉಮಾ ಯು ನಾಯ್ಕ್ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here