ರಾಮಕುಂಜದ ಸುಬ್ರಹ್ಮಣ್ಯ ಆರ್.ಎಂ. ಅವರಿಗೆ ಡಾಕ್ಟರೇಟ್ ಪದವಿ

0


ರಾಮಕುಂಜ: ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್, ರಾಮಕುಂಜ ನಿವಾಸಿ ಸುಬ್ರಹ್ಮಣ್ಯ ಆರ್.ಎಂ.ರವರು ಮಂಡಿಸಿದ ಮಹಾಪ್ರಬಂಧಕ್ಕೆ ಬೆಳಗಾವಿಯ ವಿ.ಟಿ.ಯು.ಯೂನಿವರ್ಸಿಟಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಸುಬ್ರಹ್ಮಣ್ಯ ಆರ್.ಎಂ. ಅವರು ಮೈಸೂರಿನ ಎಂ.ಐ.ಟಿ.ಯ ಪ್ರಾಂಶುಪಾಲ ಡಾ.ನರೇಶ್‌ಕುಮಾರ್ ಬಿ.ಜಿ.ಅವರ ಮಾರ್ಗದರ್ಶನದಲ್ಲಿ ಮಂಡಿಸಿದ್ದ”studies on behaviour of L-column” ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ. ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳ ಹಳೆ ವಿದ್ಯಾರ್ಥಿಯಾಗಿರುವ ಸುಬ್ರಹ್ಮಣ್ಯ ಆರ್.ಎಂ.ಅವರು ರಾಮಕುಂಜ ಗ್ರಾಮದ ಮುರಾರಿರಾವ್ ಹಾಗೂ ವೆಂಕಟಲಕ್ಷ್ಮಿ ದಂಪತಿ ಪುತ್ರ.

LEAVE A REPLY

Please enter your comment!
Please enter your name here