ಬೊಳುವಾರು ಕ್ಷೇತ್ರದಲ್ಲಿ ಆಟಿ ತಿಂಗಳ ವಿಶೇಷ ಪೂಜೆ

0

ಪುತ್ತೂರು: ಬೊಳುವಾರು ಶ್ರೀ ದುರ್ಗಾಪರಮೇಶ್ವರೀ ಉಳ್ಳಾಳ್ತಿ ಮಲರಾಯ ಸಪರಿವಾರ ಕ್ಷೇತ್ರದಲ್ಲಿ ಆಶಾಢ ಮಾಸ ಆಟಿ ತಿಂಗಳ ಪ್ರಯುಕ್ತ ಜು.16ರಿಂದ ಅ.16ರ ವರೆಗೆ ಶ್ರೀದೇವರಿಗೆ ಕಲ್ಪೋಕ್ಷ ಸಹಿತ ವಿಶೇಷ ದುರ್ಗಾಪೂಜೆ, ಸರ್ವಾಲಂಕಾರ ಸಹಿತ ವಿಶೇಷ ದುರ್ಗಾಪೂಜೆ ಕ್ಷೇತ್ರದ ಅರ್ಚಕರಾದ ವೆ.ಮೂ. ಶ್ರೀಧರ ಭಟ್ ಕಬಕರವರ ನೇತೃತ್ವದಲ್ಲಿ ನಡೆಯುತ್ತಿದ್ದು, ಜು.21ರಂದು ರಾತ್ರಿ ಸರ್ವಾಲಂಕಾರ ಸಹಿತ ವಿಶೇಷ ದುರ್ಗಾಪೂಜೆ ನಡೆಯಿತು.

ಸಂಜೆ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಳ್ತಿ) ಭಜನಾ ಮಂಡಳಿಯವರಿಂದ ಭಜನೆ, ವೇಣುಗೋಪಾಲ್‌ರವರಿಂದ ಸ್ಯಾಕ್ಸೋಫೋನ್ ವಾದನ, ರಾತ್ರಿ ಸರ್ವಾಲಂಕಾರ ಸಹಿತ ವಿಶೇಷ ದುರ್ಗಾಪೂಜೆ ನಡೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಕ್ಷೇತ್ರ ಪವಿತ್ರಪಾಣಿ ಬಾಲಸುಬ್ರಹ್ಮಣ್ಯ ಭಟ್, ವಿಶ್ವಸ್ಥ ಮಂಡಳಿ ಪ್ರಧಾನ ಕಾರ್ಯದರ್ಶಿ ವಿ.ಕೆ. ಶೆಟ್ಟಿ, ಖಜಾಂಜಿ ಪ್ರಸನ್ನ ಬಳ್ಳಾಲ್, ತ್ರಿವೇಣಿ ಕರುಣಾಕರ ಪೆರ‍್ವೋಡಿ, ನಗರಸಭೆ ಮಾಜಿ ಸದಸ್ಯ ಸುಜೀಂದ್ರ ಪ್ರಭು, ಡಾ. ಸಚಿನ್ ಶಂಕರ್, ಶರತ್ ಆಟೋ ಕೇರ್ ಮಾಲಕ ಶರತ್ ರೈ, ಬೊಳುವಾರು ಓಂ ಗ್ರೂಪ್ ಇದರ ಗಂಗಾಧರ್, ಮಹಾಲಕ್ಷ್ಮೀ ಮೆಟಲ್ಸ್‌ನ ಮಾಲಕ ವಸಂತ್, ಸೀಮಂತ್‌ ಕುಮಾರ್‌ ಬೊಳುವಾರು, ಕ್ಷೇತ್ರ ವಿಶ್ವಸ್ಥ ಮಂಡಳಿ ಸದಸ್ಯರು, ಕ್ಷೇತ್ರ ಯುವಕ ವೃಂದದ ಸದಸ್ಯರು, ಕ್ಷೇತ್ರದ ಯಕ್ಷಕಲಾ ಪ್ರತಿಷ್ಠಾನದ ಸದಸ್ಯರು, ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.

ಕ್ಷೇತ್ರದ ಒಳ, ಹೊರ ಅಂಗಣದ ಮೇಲ್ಛಾವಣೆಗೆ ಶೀಟ್ ಹೊದಿಸುವ ಯೋಜನೆಯನ್ನು ಕೈಗೊಳ್ಳಲಾಗಿದ್ದು ಅಂದಾಜು ಸುಮಾರು 10 ಲಕ್ಷ ರೂ. ವೆಚ್ಚವಾಗಲಿದೆ. ಭಕ್ತಾದಿಗಳು ಶೀಟಿನ ಬಾಬ್ತು ಕನಿಷ್ಠ ರೂ.1000, ಅದಕ್ಕೆ ಮೇಲ್ಪಟ್ಟು ಧನಸಹಾಯವನ್ನಿತ್ತು ಸಹಕರಿಸಬೇಕೆಂದು ಕ್ಷೇತ್ರದ ವಿಶ್ವಸ್ಥ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here