ಪುತ್ತೂರು: ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಗೆಜ್ಜೆಗಿರಿ ಇದರ ಮಾಸಿಕ ಸಭೆಯು ಗೆಜ್ಜೆ ಗಿರಿಯಲ್ಲಿ ಜು.20ರಂದು ಜರುಗಿತು.ಸಭೆಯಲ್ಲಿ ಶ್ರೀ ಕ್ಷೇತ್ರದ ಲೆಕ್ಕಪತ್ರವನ್ನು ಕೋಶಾಧಿಕಾರಿ ದೀಪಕ್ ಕೋಟ್ಯಾನ್ ಮಂಡಿಸಿದರು. ಕ್ಷೇತ್ರದ ಸಮಗ್ರ ಅಭಿವೃದ್ಧಿ ಚಟುವಟಿಕೆ ಗಳ ಬಗ್ಗೆ ವಿವರವಾಗಿ ಚರ್ಚಿಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ಪೀತಾಂಬರ ಹೇರಾಜೆ ವಹಿಸಿ ಕ್ಷೇತ್ರದ ಅಭಿವೃದ್ಧಿಗೆ ಸರ್ವರ ಸಹಕಾರವನ್ನು ಕೋರಿದರು.ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ರವರು ಎಲ್ಲರನ್ನು ಸ್ವಾಗತಿಸಿ ವರದಿ ವಾಚಿಸಿದರು
ಸಭೆಯಲ್ಲಿ ಕ್ಷೇತ್ರಾಡಳಿತ ಸಮಿತಿಯ ಗೌರವ್ಯಾಧ್ಯಕ್ಷರುಗಳಾದ ರಾಜಶೇಖರ್ ಕೋಟ್ಯಾನ್ ಮತ್ತು ಜಯಂತ ನಡು ಬೈಲು, ಉಪಾಧ್ಯಕ್ಷರುಳಾದ ರವಿ ಪೂಜಾರಿ ಚಿಲಿಂಬಿ ಮತ್ತು ನಿತ್ಯಾನಂದ ಕೋಟ್ಯಾನ್ ಮುಂಬೈ, , ಜೊತೆ ಕಾರ್ಯದರ್ಶಿ ಚಂದ್ರಶೇಖರ ಉಚ್ಚಿಲ್, ಶೈಲೇಂದ್ರ ಸುವರ್ಣ , ಡಿ ಆರ್ ರಾಜು ಪೂಜಾರಿ, ನವೀನ್ ಸುವರ್ಣ ಸಜಿಪ, ದಿನೇಶ್ ಅಮೀನ್ ಕುಂದಾಪುರ, ಹರಿಶ್ಚಂದ್ರ ಅಮೀನ್ ಕಟಪಾಡಿ, ಡಾ. ರಾಜಾರಾಮ್, ಅನುವಂಶಿಕ ಮುಕ್ತೇಸರ ಶ್ರೀಧರ ಪೂಜಾರಿ, ಮುಂಬೈಯಿಂದ ಸೂರ್ಯಕಾಂತ್ ಸುವರ್ಣ, ದಯಾನಂದ ಕಲ್ಯಾ, ಗೋವಾದ ಚಂದ್ರಹಾಸ್ ಅಮೀನ್, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ,ಕಾನೂನು ಸಲಹೆ ಗಾರ ನವನೀತ್ ಹಿಂಗಾಣಿ, ಕ್ಷೇತ್ರದ ವಕ್ತಾರ ರಾಜೇಂದ್ರ ಚೆಲಿಂಬಿ, ಆಂತರಿಕ ಲೆಕ್ಕ ಪರಿಶೋಧಕ ಶೇಖರ ಬಂಗೇರ, ಜಯರಾಮ ಬಂಗೇರ, ಉದ್ಯಮಿ ಗೋಪಾಲ ಬಂಗೇರ ಉಡುಪಿ, ಸುರೇಶ್ ಕೋಟ್ಯಾನ್ ಮೂಡಬಿದ್ರೆ, ಕುಮಾರ್ ಇರುವೈಲ್,. ಶ್ರೀ ಹಿತೇಶ್ ಸಾವ್ಯ,. ಮುಂತಾದವರು ಉಪಸ್ಥಿತರಿದ್ದರು.