ಪುತ್ತೂರು: ಪ್ರಸಕ್ತ ಸಾಲಿನಲ್ಲಿ ಐಟಿಐ, ಡಿಪ್ಲೊಮಾ ಅಥವಾ ಡಿಗ್ರಿ ಮಾಡಿದವರು ಮುಂದೇನು ಮಾಡುವುದು ಎಂಬ ಗೊಂದಲದಲ್ಲಿದ್ದರೆ ಅವರ ಮುಂದಿರುವ ಏಕೈಕ ಆಯ್ಕೆ ಎಂದರೆ ಅದು ಫೈರ್ ಆ್ಯಂಡ್ ಸೇಫ್ಟಿ ಕೋರ್ಸ್ ಅಥವಾ ಹೆಲ್ತ್ ಆಂಡ್ ಸೇಫ್ಟಿ ಎಂಜಿನಿಯರಿಂಗ್.
ದೇಶ ವಿದೇಶಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳನ್ನು ಹೊಂದಿರುವ, ಕೋರ್ಸ್ ಮಾಡಿದರೆ ಉದ್ಯೋಗ ಪಕ್ಕಾ ಎನ್ನುವ ಏಕೈಕ ಕೋರ್ಸ್ ಇದ್ದರೆ ಅದು ಫೈರ್ ಆ್ಯಂಡ್ ಸೇಫ್ಟಿ ಮಾತ್ರ. ಅದರಲ್ಲೂ ಐಟಿಐ, ಡಿಪ್ಲೊಮಾ ಅಥವಾ ಡಿಗ್ರಿ ಮಾಡಿದವರು ತಮ್ಮ ವಿದ್ಯಾರ್ಹತೆಯೊಂದಿಗೆ ಫೈರ್ ಆ್ಯಂಡ್ ಸೇಫ್ಟಿ ಕೋರ್ಸ್‌ನ ಸರ್ಟಿಫಿಕೇಟ್ ಕೂಡಾ ಹೊಂದಿದ್ದರೆ ಅದು ಕಲಿಕೆಯ ಮೌಲ್ಯವನ್ನು ಹೆಚ್ಚಿಸುವುದರೊಂದಿಗೆ ಜಾಬ್ ಮಾರ್ಕೆಟ್‌ನಲ್ಲಿ ಮುಂಚೂಣಿಯಲ್ಲಿ ತಂದು ನಿಲ್ಲಿಸುತ್ತದೆ.
ಈ ದಿಶೆಯಲ್ಲಿ ಕಳೆದ 16 ವರ್ಷಗಳಿಂದ ಫೈರ್ ಆ್ಯಂಡ್ ಸೇಫ್ಟಿ ವಿಚಾರವಾಗಿ ಶೇ.100ರಷ್ಟು ಉದ್ಯೋಗಾವಕಾಶದೊಂದಿಗೆ ವಿದ್ಯಾರ್ಥಿಗಳನ್ನು ತರಬೇತಿಗೊಳಿಸುತ್ತಿರುವ ಸಂಸ್ಥೆಯೇ ಮಂಗಳೂರಿನ ಎಂಐಎಫ್‌ಎಸ್‌ಇ. ಸಂಸ್ಥೆಯಲ್ಲಿ ಕೋರ್ಸ್ ಮಾಡಿರುವ 17,500 ಮಂದಿ ದೇಶ ವಿದೇಶದ ವಿವಿಧ ಉನ್ನತ ಸಂಸ್ಥೆಗಳಲ್ಲಿ ಫೈರ್ ಆಂಡ್ ಸೇಫ್ಟಿ ವಿಭಾಗದ ಅಧಿಕಾರಿಗಳಾಗಿ ಉದ್ಯೋಗ ಪಡೆದಿದ್ದಾರೆ. ಹೆಚ್ಚಿನವರು ಗಲ್ಫ್ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿದ್ದಾರೆ. ಉಳಿದಂತೆ ರಾಜ್ಯದ ವಿವಿಧ ನಗರಗಳಲ್ಲಿ, ಮಹಾರಾಷ್ಟ್ರ, ಗುಜರಾತ್, ಹೈದರಾಬಾದ್ ಚೆನ್ನೈ ನಲ್ಲೂ ಸಾಕಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ.
ಮೂರೇ ತಿಂಗಳಲ್ಲಿ ಸಿಗಲಿಗೆ ಜಾಬ್!
ಎಂಐಎಫ್‌ಎಸ್‌ಇಯಲ್ಲಿ ಒಂದು ವರ್ಷದ ಮತ್ತು ಆರು ತಿಂಗಳ ಕೋರ್ಸ್‌ಗಳ ಜತೆಗೆ ಮೂರು ತಿಂಗಳ ಕ್ರ್ಯಾಶ್ ಕೋರ್ಸ್ ಕೂಡಾ ಇದೆ. ಮೂರು ತಿಂಗಳ ಕೋರ್ಸ್ ಮುಗಿಯುತ್ತಿದ್ದಂತೆ ಶೇ.100ರಷ್ಟು ಉದ್ಯೋಗ ಪಕ್ಕಾ. ಇದು ಕೂಡಾ ಒಂದು ವಿದ್ಯಾರ್ಥಿಗಳಿಗೆ ಒಂದು ಉತ್ತಮ ಅವಕಾಶವಾಗಿದೆ. ಸಂಸ್ಥೆಗೆ ಸೇರ್ಪಡೆ ಬಯಸುವ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ 10,000 ರೂ. ಸ್ಪಾಟ್ ಡಿಸ್ಕೌಂಟ್ ವಿಶೇಷತೆಯಾಗಿದೆ. ಎಕ್ಸ್‌ಕ್ಲೂಸಿವ್ ಪ್ರಾಯೋಗಿಕ ತರಬೇತಿಯನ್ನೂ ಸಂಸ್ಥೆ ನೀಡುತ್ತಿದೆ.
ಎಂಐಎಫ್‌ಎಸ್‌ಇ ಒಟ್ಟು 10 ಶಾಖೆಗಳನ್ನು ಹೊಂದಿದೆ. ಮಂಗಳೂರು ವಿಶ್ವವಿದ್ಯಾನಿಲಯ, ಮೈಸೂರು ವಿಶ್ವವಿದ್ಯಾನಿಲಯ, ಬೆಂಗಳೂರು ಸಿಟಿ ವಿಶ್ವವಿದ್ಯಾನಿಲಯಗಳಿಂದ ಮಾನ್ಯತೆ ಪಡೆದಿದ್ದು, ಎನ್‌ಎಸ್‌ಡಿಸಿ: ಸ್ಕಿಲ್ ಇಂಡಿಯಾದ ಮಾನ್ಯತೆಯೂ ಹೊಂದಿದೆ. ಎನ್‌ಇಬಿಒಎಸ್‌ಎಚ್ (ನೆಬೋಷ್)-ಯು.ಕೆ. ಇಂಟರ್‌ನ್ಯಾಷನಲ್ ಸರ್ಟಿಫಿಕೇಶನ್ ಪಡೆಯಲೂ ಸಂಸ್ಥೆಯಲ್ಲಿ ಅವಕಾಶವಿದೆ.
ಹೆಚ್ಚಿನ ಮಾಹಿತಿಗೆ www.mifse.com ವೆಬ್ಸೈಟ್ ಗೆ ಭೇಟಿ ನೀಡಬಹುದು. ಮಂಗಳೂರಿನ ಪಂಪ್ ವೆಲ್ ನ ಸಿ.ಪಿ.ಕಾಂಪ್ಲೆಕ್ಸ್ ನ ಎರಡನೇ ಮಹಡಿಯಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿ ಅಥವಾ ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿಯ ರಾಜ್ ಟವರ್ಸ್ ಮೂರನೇ ಮಹಡಿಯಲ್ಲಿರುವ ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಬಹುದು.
ವಿದ್ಯಾರ್ಥಿಗಳಲ್ಲಿ ಮಾಹಿತಿ ಕೊರತೆ:
ಫೈರ್ ಆಂಡ್ ಸೇಫ್ಟಿ ಅಂದ ತಕ್ಷಣ ಬಹುತೇಕ ಮಂದಿಯ ಕಣ್ಣ ಮುಂದೆ ಬರುವ ಚಿತ್ರಣ ಅಗ್ನಿ ಶಾಮಕ ದಳದ್ದಾಗಿದೆ. ಆದರೆ ಇದು ಅಗ್ನಿ ಶಾಮಕ ದಳಕ್ಕಿಂತಲೂ ಒಂದು ಹೆಜ್ಜೆ ಮುಂದೆ ಇದೆ. ಉದ್ದಿಮೆ, ಕಚೇರಿ, ಸಂಸ್ಥೆಯಲ್ಲಿ ಅವಘಡಗಳು, ದುರಂತಗಳನ್ನು ನಡೆಯದಂತೆ ಅಲ್ಲಿನ ಕಾರ್ಮಿಕರು ಉದ್ಯೋಗಿಗಳಲ್ಲಿ ಜಾಗೃತಿ ಮೂಡಿಸುವುದು, ಮುನ್ನೆಚ್ಚರಿಕಾ ಕ್ರಮಗಳನ್ನು ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡುವುದಾಗಿದೆ. ಇದರಲ್ಲಿ ಸೇಫ್ಟಿ ಅಸಿಸ್ಟೆಂಟ್‌ನಿಂದ ಆರಂಭವಾಗಿ, ಸೇಫ್ಟಿ ಸುಪರ್‌ವೈಸರ್, ಸೇಫ್ಟಿ ಟೆಕ್ನಿಷಿಯನ್, ಸೇಫ್ಟಿ ಎಂಜಿನಿಯರ್, ಡಿಜಿಎಂ ಸೇಫ್ಟಿ ವರೆಗಿನ ಉದ್ಯೋಗಾವಕಾಶಗಳಿದ್ದು, ತಿಂಗಳಿಗೆ ಲಕ್ಷಕ್ಕೂ ಮೇಲ್ಪಟ್ಟು ವೇತನ ಪಡೆಯುವವರೂ ಇದ್ದಾರೆ.