ಕಡಬ ಕೊರುಂದೂರು ಭಾಗದಲ್ಲಿ ಬೀಸಿದ ಭಾರಿ ಗಾಳಿ-ಹಲವಾರು ಮನೆಗಳಿಗೆ ಹಾನಿ

0

ಕಡಬ: ಕಡಬ ಸಮೀಪ ಕೊರುಂದೂರು ಭಾಗದಲ್ಲಿ ಜು.23 ರ ಸಂಜೆ ವೇಳೆಗೆ ಬೀಸಿದ ಭಾರಿ ಗಾಳಿಯಿಂದಾಗಿ ಹಲವಾರು ಮನೆಗಳಿಗೆ ಹಾನಿಯಾದ ಘಟನೆ ನಡೆದಿದೆ.
ಗಾಳಿಯ ರಭಸಕ್ಕೆ ಮನೆಯ ಹಂಚುಗಳು ಬಿದ್ದಿವೆ. ಅಲ್ಲದೆ ಹಲವಾರು ಮರಗಳು ಮುರಿದು ಬಿದ್ದಿದ್ದು, ಕೆಲವು ಮನೆಗಳಿಗೂ ಮರದ ಗೆಲ್ಲು ಬಿದ್ದಿದೆ. ರಸ್ತೆಯುದ್ದಕ್ಕೂ ಇರುವ ವಿದ್ಯುತ್ ಲೈನ್ ಗಳ ಮೇಲೆಯೂ ಮರಗಳು ಬಿದ್ದು ಅಸ್ತವ್ಯಸ್ತಗೊಂಡಿದೆ. ಸ್ಥಳದಲ್ಲಿ ಪರಿಹಾರ ಕಾರ್ಯಗಳು ನಡೆಯುತ್ತಿದೆ.

LEAVE A REPLY

Please enter your comment!
Please enter your name here