ಜುಲೈ 30: ಕೊಂಬೆಟ್ಟು ಮರಾಟಿ ಯುವ ವೇದಿಕೆ ನೇತೃತ್ವದಲ್ಲಿ ಕೆಸರುಗದ್ದೆ ಕ್ರೀಡಾಕೂಟ

0

ಪುತ್ತೂರು :ಮರಾಟಿ ಯುವ ವೇದಿಕೆ ಕೊಂಬೆಟ್ಟು, ಪುತ್ತೂರು ಇದರ ನೇತೃತ್ವದಲ್ಲಿ ಮರಾಟಿ ಯುವ ವೇದಿಕೆ , ಭಜನಾ ತಂಡ ಹಾಗೂ ಆರ್ಯಾಪು ಗ್ರಾಮದ ಮರಾಟಿ ಬಾಂಧವರ ಸಹಕಾರದೊಂದಿಗೆ ಆರ್ಯಾಪು ಗ್ರಾಮದ ಮೆಲ್ಮಜಲು ಹಳೆಮನೆ ಗದ್ದೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟ ಜುಲೈ 30 ರಂದು ನಡೆಯಲಿದೆ.


ಶಾಸಕರಾದ ಅಶೋಕ್ ಕುಮಾರ್ ರೈ ಅವರು ಸಭಾ ಕಾರ್ಯಕ್ರಮವನ್ನು ಹಾಗೂ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ , ಗುಂಪು ಸ್ಪರ್ಧೆಗಳ ಉದ್ಘಾಟನೆ ನೆರವೇರಿಸಲಿರುವರು. ಪ್ರಗತಿಪರ ಕೃಷಿಕ ಚೆನ್ನಪ್ಪ ನಾಯ್ಕ್ ಮೆಲ್ಮಜಲು ಹಾಗೂ ಅಂತರ್ ರಾಷ್ಟ್ರಿಯ ಯೋಗಪಟು ತೃಪ್ತಿ ಮಾಡಾವು ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಸ್ಪರ್ಧೆಗಳು:
ಮಹಿಳೆಯರಿಗೆ, ಪುರುಷರಿಗೆ ಮತ್ತು ಮಕ್ಕಳಿಗೆ ವೈವಿದ್ಯಮಯ ಆಟೋಟ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿದ್ದು , ಮರಾಟಿ ಸಮಾಜ ಬಾಂಧವರಿಗೆ ಮಾತ್ರ ಅವಕಾಶವೆಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here