ವಿಟ್ಲ: ದೇಶಗಳ ಸಂಸ್ಕ್ರತಿಯನ್ನು ಬಿಂಬಿಸುವ ನಿಟ್ಟಿನಲ್ಲಿ Draw your Dream ಎಂಬ ಧ್ಯೇಯದೊಂದಿಗೆ ಆ. 1 ರಿಂದ ಆ.12 ರವರೆಗೆ ದಕ್ಷಿಣ ಕೊರಿಯದ ಸೀಮನ್‌ಗಾಮ್ ಜಿಯಾಲ್ಲಾಬುಕ್ (Saemangeum Jeollabuk – do) ಎಂಬಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಜಾಂಬೂರಿಗೆ ಇಲ್ಲಿನ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ 7 ವಿದ್ಯಾರ್ಥಿಗಳು ಹಾಗೂ ಒರ್ವ ಶಿಕ್ಷಕ ಆಯ್ಕೆಯಾಗಿದ್ದಾರೆ.
ಜುಲೈ 31 ಕ್ಕೆ ಮಂಗಳೂರಿನಿಂದ 48 ವಿದ್ಯಾರ್ಥಿಗಳು ಮತ್ತು ಐವರು ಶಿಕ್ಷಕರು ಬೆಂಗಳೂರು ಮತ್ತು ಹಾಂಕಾಂಗ್ ಮೂಲಕ ಸೌತ್ ಕೊರಿಯಕ್ಕೆ ತೆರಳಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಸಂಸ್ಥೆಯಿಂದ ಭಾಗವಹಿಸಲಿರುವ ವಿದ್ಯಾರ್ಥಿಗಳು ಕಾರ್ತಿಕ್ ಎ ನ್ಯಾಮ್ ಗೌಡ, ಶಶಾಂಕ್ ಕೆ ಸಿ, ಮನೀಶ್ ಯು ಅಂಗಡಿ, ಕಾರ್ತಿಕ್ ಎ, ಸಿದ್ದಲಿಂಗೇಶ್ ಬಿ ಹಂಜಿ, ಅಜಯ್ ನಾಗೇಶ್ ಪ್ರಭು, ಶೌರ್ಯ ಎಸ್ ಗೌಡ, ಶಿಕ್ಷಕ ನಾರಾಯಣ ನಾಯಕ್ ಎನ್ ಇವರು ದಕ್ಷಿಣ ಕೊರಿಯಾದಲ್ಲಿ ನಡೆಯುವ ಅಂತರಾಷ್ಟ್ರೀಯ ಜಾಂಬೂರಿಯಲ್ಲಿ ಭಾಗವಹಿಸಲಿದ್ದಾರೆ.