ಇರ್ದೆ : ಮಳೆಗೆ ಧ್ವಂಸಗೊಂಡ ಮನೆ-ಅದೃಷ್ಟವಶಾತ್ ಯಜಮಾನಿ ಅಪಾಯದಿಂದ ಪಾರು

0

ಬೆಟ್ಟಂಪಾಡಿ: ನಿರಂತರ ಸುರಿಯುತ್ತಿರುವ‌ ಮಳೆಗೆ ಇಲ್ಲಿನ ಇರ್ದೆ ಅರಂಬ್ಯ ಸುಶೀಲ ಎಂಬವರ ಮನೆ ಬಿದ್ದು ಸಂಪೂರ್ಣ ಧ್ವಂಸಗೊಂಡಿರುವ ಘಟನೆ ಜು. 24 ರಂದು ನಡೆದಿದೆ. ಹಂಚಿನ ಛಾವಣಿ ಸಂಪೂರ್ಣ ಕುಸಿದು, ಇಟ್ಟಿಗೆ ಗೋಡೆ ಹಾನಿಗೊಳಗಾಗಿದೆ.


ಮನೆ ಬೀಳುವ ವೇಳೆಗೆ ಸುಶೀಲರವರು ಮಗಳ ಮನೆಗೆ ಹೋಗಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಬೆಟ್ಟಂಪಾಡಿ ಪಂಚಾಯತ್ ಪಿಡಿಒ ಸೌಮ್ಯ, ಸಿಬಂದಿ ಸಂದೀಪ್ ಟಿ.‌ಭೇಟಿ ನೀಡಿ ಪರಿಶೀಲಿಸಿದ್ದಾರೆ.

LEAVE A REPLY

Please enter your comment!
Please enter your name here