ನಿಡ್ಪಳ್ಳಿ: ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆಯ ಆಮಂತ್ರಣ ಪತ್ರ ಬಿಡುಗಡೆ

0

ನಿಡ್ಪಳ್ಳಿ: ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜಾ ಸಮಿತಿ, ಶ್ರೀ ಶಾಂತದುರ್ಗಾ ದೇವಸ್ಥಾನ ,ಶ್ರೀ ಕ್ಷೇತ್ರ ನಿಡ್ಪಳ್ಳಿ ಇದರ ಜಂಟಿ ಆಶ್ರಯದಲ್ಲಿ ಆ.25 ರಂದು ನಡೆಯುವ 5ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆಯ ಆಮಂತ್ರಣ ಪತ್ರ ಬಿಡುಗಡೆ ಜು.25 ರಂದು ದೇವಸ್ಥಾನದಲ್ಲಿ ನಡೆಯಿತು.

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ರೈ, ಮಾಜಿ ಅಧ್ಯಕ್ಷ ನಾಗೇಶ ಗೌಡ, ಕಾರ್ಯದರ್ಶಿ ಕುಮಾರ ನರಸಿಂಹ ಭಟ್ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಗೋಪಾಲಕೃಷ್ಣ ಭಟ್,ರಾಮಚಂದ್ರ ಮಣಿಯಾಣಿ ದೇವಸ್ಥಾನದ ಪ್ರಧಾನ ಅರ್ಚಕ ನವೀನ್ ಹೆಬ್ಬಾರ್, ಪೂಜಾ ಸಮಿತಿ ಅಧ್ಯಕ್ಷೆ ಶಕೀಲಾ ಜೆ. ರೈ, ಕಾರ್ಯದರ್ಶಿ ದಯಾಮಣಿ.ಎಸ್ ರೈ, ಕೋಶಾಧಿಕಾರಿ ಮಾಲತಿ ಕಾನ ಹಾಗೂ ಪೂಜಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here