3 ದಿನದಿಂದ ಕರೆಂಟಿಲ್ಲದೆ ಕುಡಿಯುವ ನೀರಿನ ಸಂಕಷ್ಟ !

0

ಸಮಸ್ಯೆಯನ್ನು ಮೆಸ್ಕಾಂ ಅಧಿಕಾರಿಗಳ ಮುಂದಿಟ್ಟ ಪಡ್ಡಾಯೂರು, ಅಜೇಯನಗರ ನಾಗರಿಕರು


ಪುತ್ತೂರು: 3 ದಿನದಿಂದ ಕರೆಂಟಿಲ್ಲದೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಎಂದು ಪಡ್ಡಾಯೂರು ಮತ್ತು ಅಜೇಯನಗರ ಅಸುಪಾಸಿನ ನಾಗರಿಕರು ಬನ್ನೂರು ಮೆಸ್ಕಾಂ ಕಚೇರಿಗೆ ಆಗಮಿಸಿ ಅಧಿಕಾರಿಗಳ ಮುಂದೆ ತಮ್ಮ ಸಮಸ್ಯೆಗಳನ್ನು ತಿಳಿಸಿ, ವಿದ್ಯುತ್ ಸಂಪರ್ಕ ಒದಗಿಸುವಂತೆ ಆಗ್ರಹಿಸಿದ ಘಟನೆ ಜು.25ರಂದು ನಡೆದಿದೆ.


ನಗರಸಭೆ ನಿಟಕಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರ ನೇತೃತ್ವದಲ್ಲಿ ಅಜೇಯನಗರ, ಪಡ್ಡಾಯೂರು ಆಸುಪಾಸಿನ ನಾಗರಿಕರು ಮೆಸ್ಕಾಂ ಕಚೇರಿಗೆ ಬಂದು ತಮಗೆ ಮೂರು ದಿನಗಳಿಂದ ವಿದ್ಯುತ್ ಇಲ್ಲದೆ ಕುಡಿಯುವ ನೀರಿನ ಸರಬರಾಜು ಸ್ಥಗಿತಗೊಂಡು ಸಮಸ್ಯೆ ಉಂಟಾಗಿದೆ. ದಿನ ನಿತ್ಯದ ಕೆಲಸಗಳಿಗೆ ವಿದ್ಯುತ್ ಇಲ್ಲದೆ ಹಲವಾರು ಮನೆಗಳಿಗೆ ತೊಂದರೆ ಆಗಿದೆ ಎಂದು ಸಮಸ್ಯೆಗಳನ್ನು ಮೆಸ್ಕಾಂ ಇಂಜಿನಿಯರ್ ರಾಜೇಶ್ ಅವರ ಮುಂದಿಟ್ಟರು.

ಮಳೆಯ ಕಾರಣದಿಂದ ಅಲ್ಲಲ್ಲಿ ವಿದ್ಯುತ್ ತಂತಿಗಳ ಮೇಲೆ ಮರದ ಗೆಲ್ಲುಗಳು ಬಿದ್ದು ಹಾನಿಯಾಗಿದೆ. ನಮ್ಮ ಕಡೆಯಿಂದ ದುರಸ್ಥಿ ಕಾರ್ಯ ನಡೆಯುತ್ತಿದೆ. ನಿಮ್ಮ ಭಾಗದಲ್ಲೂ ತಕ್ಷಣ ದುರಸ್ಥಿ ಕಾರ್ಯ ಮಾಡುವುದಾಗಿ ಭರವಸೆ ನೀಡಿದರು. ತುರ್ತಾಗಿ ದುರಸ್ಥಿ ಕಾರ್ಯ ಮಾಡುವಂತೆ ಮೆಸ್ಕಾಂಗೆ ಅಧಿಕಾರಿಗಳಿಗೆ ಮನವಿ ನೀಡುವ ರವಿಕಿರಣ್ ನೆಲಪ್ಪಾಲು, ಪ್ರಶಾಂತ್ ಅಜೇಯನಗರ, ಜಯಾನಂದ ಪಡ್ಡಾಯೂರು, ಜಯರಾಮ ನೆಲಪ್ಪಾಲು, ರಾಘೌವೇಂದ್ರ ಪ್ರಭು, ಸತೀಶ್ ಶೆಟ್ಟಿ ಕಲ್ಲೇಗ, ನಿತೇಶ್ ನೆಲಪ್ಪಾಲು, ಮನೋಹರ್ ಪಡ್ಡಾಯೂರು, ವಿಕ್ಟರ್ ಮಾರ್ಟಿಸ್ ಪಡ್ಡಾಯೂರು, ವಿನಯ ಕುಮಾರ್ ರಕ್ತೇಶ್ವರಿ ವಠಾರ, ಮಾದವ ಪಟ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here