ಕೆಲಿಂಜ: ಸಿಮೆಂಟ್ ಸಾಗಾಟದ ಲಾರಿ ಪಲ್ಟಿ – ಚಾಲಕ ಅಪಾಯದಿಂದ ಪಾರು

0

ವಿಟ್ಲ: ನಾಯಿಯ ಜೀವ ಉಳಿಸಲು ಹೋಗಿ ಚಾಲಕನ ನಿಯಂತ್ರಣ ಕಳೆದುಕೊಂಡ ಸಿಮೆಂಟ್ ಸಾಗಾಟ ಮಾಡುತ್ತಿದ್ದ ಲಾರಿಯೊಂದು ರಸ್ತೆಯಲ್ಲಿ ಉರುಳಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲಿಂಜ ಕೊಟ್ಟಾರಿ ಕಟ್ಟೆ ಎಂಬಲ್ಲಿ ಜು.25ರಂದು ಸಾಯಂಕಾಲ ನಡೆದಿದ್ದು, ಲಾರಿಯೊಳಗಡೆ ಸಿಲುಕಿಕೊಂಡಿದ್ದ ಚಾಲಕ ನನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ.

ಕಲ್ಲಡ್ಕದಿಂದ ಪೆರ್ಲ ಕಡೆ ಸಿಮೆಂಟ್ ಸಾಗಾಟ ಮಾಡುತ್ತಿದ್ದ ಲಾರಿಯ ಚಾಲಕ ನಾಯಿಯೊಂದಕ್ಕೆ ಡಿಕ್ಕಿಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದ ವೇಳೆ ಲಾರಿಯು ನಿಯಂತ್ರಣ ಕಳೆದು ಕೊಂಡು ಪಲ್ಟಿಯಾಗಿತ್ತು. ಘಟನೆ ವೇಳೆ ಲಾರಿಯೊಳಗೆ ಸಿಲುಕಿಕೊಂಡ ಚಾಲಕನನ್ನು ಸ್ಥಳೀಯರು ಹರಸಾಹಸಪಟ್ಟು ರಕ್ಷಣೆ ಮಾಡಿದ್ದಾರೆ. ಅಪಘಾತದ ರಭಸಕ್ಕೆ ಲಾರಿಯಲ್ಲಿದ್ದ ಸಿಮೆಂಟ್ ಚೆಲ್ಲಾಪಿಲ್ಲಿಯಾಗಿ ರಸ್ತೆಯಲ್ಲಿತ್ತು. ಘಟನಾ ಸ್ಥಳಕ್ಕಾಗಮಿಸಿದ ವಿಟ್ಲ ಠಾಣಾ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here