ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ- ಕುಮಾರಧಾರ ನದಿ ನೀರಿನ ಮಟ್ಟವು ಜು.25ರ ಬೆಳಗ್ಗಿನಿಂದಲೇ ಇಳಿಕೆಯಾಗತೊಡಗಿದ್ದು, ಸಂಜೆಯಾಗುತ್ತಲೇ ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ನೇತ್ರಾವತಿ ನದಿಗಿಳಿಯುವ 38 ಮೆಟ್ಟಿಲುಗಳಲ್ಲಿ 11 ಮೆಟ್ಟಿಲುಗಳು ಕಾಣಿಸಿಕೊಂಡಿವೆ. ನಿನ್ನೆ ಸಂಜೆ ಮೂರು ಮೆಟ್ಟಿಲುಗಳಷ್ಟೇ ಕಾಣಿಸಿಕೊಂಡಿದ್ದವು.
ಪುತ್ತೂರು ತಹಶೀಲ್ದಾರ್ ಶಿವಶಂಕರ್ ದೇವಾಲಯದ ಬಳಿ ಆಗಮಿಸಿ, ನದಿಗಳ ವೀಕ್ಷಣೆ ನಡೆಸಿದರು. ಈ ಸಂದರ್ಭ ಉಪ್ಪಿನಂಗಡಿ ಕಂದಾಯ ಹೋಬಳಿಯ ಉಪತಹಶೀಲ್ದಾರ್ ಚೆನ್ನಪ್ಪ ಗೌಡ, ಕಂದಾಯಾಧಿಕಾರಿ ರಂಜನ್ ಗೌಡ, ಗ್ರಾಮ ಸಹಾಯಕ ಯತೀಶ್ ಮಡಿವಾಳ, ಪ್ರಾಕೃತಿಕ ವಿಕೋಪ ರಕ್ಷಣಾ ತಂಡದ ದಿನೇಶ್, ಡೀಕಯ್ಯ, ಜನಾರ್ದನ, ಅಣ್ಣು, ವಸಂತ, ಸಮದ್, ಶಿವಪ್ರಸಾದ್ ಇದ್ದರು.