ಪುತ್ತೂರು: ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್, ಭಾ.ಕೃ.ಅ.ಪ (ಐ.ಸಿ.ಎ.ಆರ್) ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ಗ್ರಾಮ ಪಂಚಾಯತ್ ಪುಣಚ ಮತ್ತು ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘ ಪುಣಚ ಇದರ ಸಂಯುಕ್ತ ಆಶ್ರಯದಲ್ಲಿ ಪ್ರಧಾನ ಮಂತ್ರಿಗಳಿಂದ ಕೃಷಿ ಸಮ್ಮಾನ್ ನಿಧಿಯ 14ನೇ ಕಂತಿನ ಹಣ ಬಿಡುಗಡೆ ಕಾರ್ಯಕ್ರಮದ ನೇರಪ್ರಸಾರ ಹಾಗೂ ಮಂಗಳೂರು ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಿಂದ ವಿವಿಧ ಕೃಷಿಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ಪುಣಚ ಗ್ರಾಂ.ಪಂ. ಸಭಾಭವನದಲ್ಲಿ ಜು.27ರಂದು ನಡೆಯಿತು.
ಮಂಗಳೂರು ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರದ ಮೀನುಗಾರಿಕಾ ವಿಜ್ಞಾನಿ ಡಾ.ರವೀಂದ್ರ ಗೌಡ ಪಾಟೀಲ್, ಕೃಷಿ ವಿಜ್ಞಾನಿ, ಪಶುಗಾರಿಕಾ ವಿಜ್ಞಾನಿ ಡಾ. ಶಿವಕುಮಾರ್ ಆರ್, ಮಣ್ಣು ಪರೀಕ್ಷಾ ವಿಜ್ಞಾನಿ ಡಾ.ಮಲ್ಲಿಕಾರ್ಜುನ ಎಲ್ ಅವರುಗಳು ರೈತರಿಗೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪುಣಚ ಗ್ರಾಂ.ಪಂ.ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು, ಉಪಾಧ್ಯಕ್ಷೆ ಪ್ರತಿಭಾ ಜಗನ್ನಾಥ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ, ಸದಸ್ಯರು, ಸಿಬ್ಬಂದಿಗಳು, ಹಾಗೂ ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಭಟ್, ಉಪಾಧ್ಯಕ್ಷ ಸಂತೋಷ್ ಕುಮಾರ್, ಹಾಗೂ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಅಭಿವೃದ್ಧಿ ಅಧಿಕಾರಿ ರವಿ ಕಾರ್ಯಕ್ರಮ ನಿರೂಪಸಿ, ವಂದಿಸಿದರು