ಮುಂಡೂರು ಗ್ರಾ.ಪಂ: ಜು.31ರಿಂದ ವಾರ್ಡ್ ಸಭೆ ಪ್ರಾರಂಭ-ಆ.7ರಂದು ಗ್ರಾಮ ಸಭೆ

0

ಪುತ್ತೂರು: ಮುಂಡೂರು ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಾದ ಸರ್ವೆ, ಕೆಮ್ಮಿಂಜೆ, ಮುಂಡೂರು ಗ್ರಾಮಗಳಿಗೆ ಸಂಬಂಧಿಸಿದ 2023-24ನೇ ಸಾಲಿನ ಪ್ರಥಮ ಸುತ್ತಿನ ವಾರ್ಡ್ ಸಭೆ ಜು.31ರಿಂದ ಆ.5ರ ವರೆಗೆ ನಡೆಯಲಿದೆ.


ಜು.31ರಂದು ಸರ್ವೆ ವಾರ್ಡ್ 1ರ ಸಭೆ ಅಪರಾಹ್ನ ಗಂಟೆ 2.30ಕ್ಕೆ ಭಕ್ತಕೋಡಿ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದ್ದು ಸರ್ವೆ ವಾರ್ಡ್ 2 ಮತ್ತು 3ರ ಸಭೆ ಅಪರಾಹ್ನ ಗಂಟೆ 4ಕ್ಕೆ ಕಲ್ಪಣೆ ಮೊಗೇರ ಸಮುದಾಯ ಭವನದಲ್ಲಿ ನಡೆಯಲಿದೆ.


ಆ.1ರಂದು ಮುಂಡೂರು ವಾರ್ಡ್ 2ರ ಸಭೆ ಪೂರ್ವಾಹ್ನ ಗಂಟೆ 10ಕ್ಕೆ ಮುಂಡೂರು ಗ್ರಾ.ಪಂ ಸಭಾಂಗಣದಲ್ಲಿ ನಡೆಯಲಿದೆ.
ಮುಂಡೂರು ವಾರ್ಡ್ 1ರ ಸಭೆ ಆ.5ರಂದು ಪೂರ್ವಾಹ್ನ ಗಂಟೆ 10.30ಕ್ಕೆ ಪಾಪೆತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದ್ದು ಅದೇ ದಿನ ಅಪರಾಹ್ನ ಗಂಟೆ 12ಕ್ಕೆ ಕೆಮ್ಮಿಂಜೆ ವಾರ್ಡ್ 2ರ ಸಭೆ ನೈತ್ತಾಡಿ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ.

ಮುಂಡೂರು ಗ್ರಾ.ಪಂ ಗ್ರಾಮ ಸಭೆ ಆ.7ರಂದು ಮುಂಡೂರು ಪ್ರಾಥಮಿಕ ಕೃ.ಪ.ಸ.ಸಂಘದ ಸಭಾಭವನದಲ್ಲಿ ನಡೆಯಲಿದೆ ಎಂದು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್ ಹಾಗೂ ಪಿಡಿಓ ಗೀತಾ ಬಿ.ಎಸ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here