ಪುತ್ತೂರು: ಮಾಣಿ-ಮೈಸೂರು ರಾ. ಹೆದ್ದಾರಿ 275 ರ ಸಂಪ್ಯ ಪೊಲೀಸ್ ಠಾಣಾ ಮುಂಭಾಗದಲ್ಲಿ ರಿಕ್ಷಾ ನಿಲ್ದಾಣಕ್ಕೆ ಅನುವು ಮಾಡಿಕೊಡಬೇಕು ಎಂದು ರಿಕ್ಷಾ ಚಾಲಕರು ಶಾಸಕ ಅಶೋಕ್ ರೈಯವರಿಗೆ ಮನವಿ ಮಾಡಿದ್ದಾರೆ.
ಮನವಿಗೆ ಪೂರಕವಾಗಿ ಸ್ಪಂದಿಸಿದ ಶಾಸಕರು ವ್ಯವಸ್ಥೆ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಹೆದ್ದಾರಿಯ ಚರಂಡಿಯ ಹೂಳೆತ್ತದೇ ಇರುವ ಕಾರಣ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿರುವ ಬಗ್ಗೆ ಚಾಲಕರು ಶಾಸಕರ ಗಮನಕ್ಕೆ ತಂದರು. ಈ ವೇಳೆ ಹೈವೇ ಪ್ರಾಧಿಕಾರ ಅಧಿಕಾರಿ ಜೊತೆ ಮಾತನಾಡಿದ ಶಾಸಕರು ಹೆದ್ದಾರಿಯಲ್ಲಿನ ಚರಂಡಿಯನ್ನು ತಕ್ಷಣವೇ ದುರಸ್ಥಿ ಮಾಡುವಂತೆ ಸೂಚನೆಯನ್ನು ನೀಡಿದರು. ಸಂಪ್ಯ ಅಶೋಕ್ ಕುಮಾರ್ ರೈ ಇದೇ ವೇಳೆ ರಿಕ್ಷಾ ಚಾಲಕರ ಪರವಾಗಿ ಶಸಕರಿಗೆ ಶಾಲು ಹೊದಿಸಿ ಸನ್ಮಾನಿಸಿದರು.