ಸುಬ್ರಹ್ಮಣ್ಯ: ಬೆಂಗಳೂರು ಗ್ರಾಮಾಂತರದ ಆಂದ್ರಹಳ್ಳಿ ನಿವಾಸಿ ರಾಜಶೇಖರ್ ಎಂಬವರ ಪತ್ನಿ ಹರ್ಷಿತ (28ವ) ಹಾಗೂ ಪುತ್ರ ಭಗತ್ (3ವ) ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಪತ್ತೆಯಾಗಿದ್ದಾರೆ.
ರಾಜಶೇಖರ್ ಅವರು ಪತ್ನಿ, ಮಗ ಹಾಗೂ ಸ್ನೇಹಿತರೊಂದಿಗೆ ಜು.31ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾಕ್ಕೆ ಬಂದಿದ್ದು, ಮಧ್ಯಾಹ್ನ ಆದಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ಬಳಿಕ ಖರೀದಿಗೆಂದು ಅಂಗಡಿಗೆ ತೆರಳಿದ್ದರು. ಈ ವೇಳೆ ರಾಜಶೇಖರ್ ಅವರ ಪತ್ನಿ ಮತ್ತು ಮಗ ನಾಪತ್ತೆಯಾಗಿದ್ದಾರೆ. ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಗೆ ರಾಜಶೇಖರ್ ದೂರು ನೀಡಿದ್ದು, ನಾಪತ್ತೆ ಪ್ರಕರಣ ದಾಖಲಾಗಿದೆ.
