ಪುಣ್ಚಪ್ಪಾಡಿಯ ಸಂದೀಪ್ ಕುಮಾರ್ ರೈಗೆ ಪಿ.ಎಚ್.ಡಿ ಪದವಿ

0

ಪುತ್ತೂರು: ಬೆಂಗಳೂರಿನ ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪ್ರಾಧ್ಯಾಪಕರಾದ ಸಂದೀಪ್ ಕುಮಾರ್ ರೈರವರು ಸಲ್ಲಿಸಿದ ಮಹಾಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಆ. 1 ರಂದು ನಡೆದ 23ನೇ ಘಟಿಕೋತ್ಸವದಲ್ಲಿ ಪಿ.ಹೆಚ್.ಡಿ ಪದವಿ ನೀಡಿದೆ.
ಸಂದೀಪ್‌ಕುಮಾರ್‌ ರೈರವರು ಆರ್.ಎನ್.ಎಸ್. ತಾಂತ್ರಿಕ ಮಹಾವಿದ್ಯಾಲಯದಲ್ಲಿಇನ್‌ಫರ್ಮೇಷನ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ಸುರೇಶ್ ಎಲ್‌ ಮಾರ್ಗದರ್ಶನದಲ್ಲಿ `ಸ್ಯಾಟಲೈಟ್‌ ಇಮೇಜ್ ಕ್ಲಾಸಿಫ಼ಿಕೇಷನ್ ಯೂಸಿಂಗ್ ಎನ್‌ಹ್ಯಾನ್ಸ್‌ಡ್ ಮೆಶಿನ್ ಲರ್ನಿಂಗ್‌ಟೆಕ್ನಿಕ್ಸ್’ ಎಂಬ ಮಹಾ ಪ್ರಬಂಧವನ್ನು ಮಂಡಿಸಿದ್ದರು. ಇವರು ಕಡಬ ತಾಲ್ಲೂಕಿನ ಪುಣ್ಚಪ್ಪಾಡಿ ಗ್ರಾಮದ ನಡುಮನೆಯ ದಿ.ಸುಬ್ಬಣ್ಣರೈ ಮತ್ತು ಜಲಜಾಕ್ಷಿ ರೈ ರವರ ಪುತ್ರ.

LEAVE A REPLY

Please enter your comment!
Please enter your name here