ಪುತ್ತೂರು: ಭಾರತ ಸರ್ಕಾರದ ಪರಮಾಣು ಶಕ್ತಿ ಇಲಾಖೆಯ ಅಧಿನದ ಬಾಬಾ ಪರಮಾಣು ಸಂಶೋಧನಾ ಕೇಂದ್ರ ಮುಂಬೈ (BARC) ನಡೆಸುವ ರೆಡಿಯೋಲಾಜಿಕಲ್ ಸೇಫ್ಟಿ ಆಫಿಸರ್ (RSO) ಪರೀಕ್ಷೆಯಲ್ಲಿ ಪೇರಮೊಗರಿನ ದೀಕ್ಷಾ ಶೆಟ್ಟಿ ಉತ್ತೀರ್ಣರಾಗಿದ್ದಾರೆ. ರೆಡಿಯೋಲಾಜಿಕಲ್ ಸೇಫ್ಟಿ ಆಫೀಸರ್ ಪರೀಕ್ಷೆಯಲ್ಲಿ ಉತ್ತಿರ್ಣರಾಗಿದ್ದಾರೆ.ಒಟ್ಟು ದೇಶದ ನಾನ ಕಡೆಗಳಿಂದ 100ಕ್ಕೂ ಅಧಿಕ ಮಂದಿ ಪರೀಕ್ಷೆ ಬರೆದಿದ್ದು,ಒಟ್ಟು 35ಮಂದಿ ಉತ್ತೀರ್ಣರಾಗಿದ್ದಾರೆ. ದಕ್ಷಿಣ ಕನ್ನಡದಿಂದ ಆಯ್ಕೆಯಾದವರಲ್ಲಿ ಉತ್ತೀರ್ಣರಾದವರಲ್ಲಿ ಇವರೊಬ್ಬರೆ ಆಗಿದ್ದಾರೆ.
ದೇರಳಕಟ್ಟೆ ಕೆಎಸ್ ಹೆಗ್ಡೆ ಆಸ್ಪತ್ರೆಯ ರೇಡಿಯೇಶನ್ ವಿಭಾಗದಲ್ಲಿ ಮೆಡಿಕಲ್ ಫಿಸಿಸಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ದೀಕ್ಷಾ ಅವರು, ಮಂಗಳೂರು ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಭೌತಶಾಸ್ತ್ರದಲ್ಲಿ ವಿಭಾಗದಲ್ಲಿ ಎಂಎಸ್ಸಿ ವಿದ್ಯಾಭ್ಯಾಸ ಮಾಡಿದ್ದಾರೆ. ಗಡಿಯಾರ ಹಾಗೂ ಕಡೇಶಿವಾಲಯ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಡ ಶಾಲೆ ವಿದ್ಯಾಭ್ಯಾಸ ಪೂರೈಸಿ , ಪುತ್ತೂರಿನ ಅಂಬಿಕಾ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ನಂತರ ವಿವೇಕಾನಂದ ಕಾಲೇಜಿನಲ್ಲಿ ಬಿಎಸ್ಸಿ ಮಾಡಿದ್ದರು. ಬಾಬಾ ಪರಮಾಣು ಸಂಶೋಧನಾ ಕೇಂದ್ರ ಮುಂಬೈ (BARC) ನಡೆಸುವ ರೆಡಿಯೋಲಾಜಿಕಲ್ ಸೇಫ್ಟಿ ಆಫಿಸರ್ (RSO) ಪರೀಕ್ಷೆಯ ಮುಂಬೈನಲ್ಲಿ ಜರಗುತ್ತದೆ. ದೀಕ್ಷಾ ಶೆಟ್ಟಿ ಎರಡನೇ ಅವಧಿಯಲ್ಲಿ ಈ ಪರೀಕ್ಷೆಯಲ್ಲಿ ಉತ್ತಿರ್ಣರಾದರು.
ದೀಕ್ಷಾ ಶೆಟ್ಟಿ ಕಡಬ ತಾಲೂಕಿನ ಕುಂತೂರು ಕೇವಳ ದೊಳಂತಿಮಾರು ದಿ.ಶಿವರಾಮ ಶೆಟ್ಟಿ ಬಜನಿಗುತ್ತು ಹಾಗೂ ಪೇರಮೊಗರು ಜಯಂತಿ ಶೆಟ್ಟಿಯವರ ಪುತ್ರಿ.