ಪುತ್ತೂರು:ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿರುವ ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಂತಿನಗರ ಸರಕಾರಿ ಪ್ರೌಢಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿಯೋರ್ವ ಅಪಹರಣ ಯತ್ನದ ಕಥೆ ಸೃಷ್ಠಿಸಿದ ಮತ್ತು ಪೊಲೀಸರ ಮಧ್ಯಪ್ರವೇಶದಿಂದ ಪ್ರಕರಣ ಸುಖಾಂತ್ಯಗೊಂಡ ಘಟನೆ ಆ.3ರಂದು ನಡೆದಿದೆ.
ಶಾಂತಿನಗರ ಸಮೀಪದ ಬೇರಿಕೆ ನಿವಾಸಿಯಾಗಿರುವ ವಿದ್ಯಾರ್ಥಿ ತಾನು ಬೆಳಿಗ್ಗೆ ಶಾಲೆಗೆ ಬರುತ್ತಿರುವ ವೇಳೆ ವಾಹನವೊಂದರಲ್ಲಿ ಬಂದ ಅಪರಿಚಿತ ಯುವಕರು ತನ್ನನ್ನು ಅಪಹರಿಸಲು ಯತ್ನಿಸಿದ್ದಾರೆ, ನಾನು ತಪ್ಪಿಸಿಕೊಳ್ಳಲು ಯತ್ನಿಸುವ ವೇಳೆ ನನ್ನ ಬ್ಯಾಗ್ ಕಸಿದುಕೊಂಡು ಹೋಗಿದ್ದಾರೆ ಎಂದು ಮನೆಗೆ ಹೋಗಿ ತಿಳಿಸಿದ್ದ.
ಬಳಿಕ ಆತನ ಹೆತ್ತವರು ಶಾಲೆಗೆ ಭೇಟಿ ನೀಡಿ ಶಿಕ್ಷಕರಿಗೆ ವಿಷಯ ತಿಳಿಸಿದ್ದರು. ವಿದ್ಯಾರ್ಥಿಯನ್ನು ಅಪಹರಿಸಲು ಯತ್ನಿಸಲಾಗಿದೆ ಎಂಬ ವಿಚಾರ ಪ್ರಚಾರ ಆಗುತ್ತಿದ್ದಂತೆಯೇ ಆತಂಕ ಸೃಷ್ಠಿಯಾಗಿತ್ತು. ಪುತ್ತೂರು ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾಗಿ ಪ್ರಭಾರ ಕರ್ತವ್ಯದಲ್ಲಿರುವ ಪ್ರೌಢಶಾಲಾ ಮುಖ್ಯೋಪಾಧ್ಯಾಯ ವಿಷ್ಣುಪ್ರಸಾದ್ ಅವರು ತನ್ನ ಪುತ್ತೂರು ಕಚೇರಿಯ ಕಾರ್ಯವನ್ನು ಮೊಟಕುಗೊಳಿಸಿ ಶಾಲೆಗೆ ಭೇಟಿ ನೀಡಿದರಲ್ಲದೆ ಈ ಮಧ್ಯೆ ಪುತ್ತೂರು ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಆಗಮಿಸಿದ ಪೊಲೀಸರು ವಿದ್ಯಾರ್ಥಿಯಿಂದ ಮಾಹಿತಿ ಪಡೆದುಕೊಂಡು ಆತನ ಹೆತ್ತವರು ಮತ್ತು ಶಿಕ್ಷಕರ