ಕಳಂಜದ ಮಸೂದ್ ಕೊಲೆ ಪ್ರಕರಣ-8ನೇ ಅರೋಪಿಗೆ ಹೈಕೋರ್ಟ್ನಿಂದ ಜಾಮೀನು

0

ಪುತ್ತೂರು: ಕಳಂಜದ ಮಸೂದ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಗಳ ಪೈಕಿ 8ನೇ ಆರೋಪಿಯಾಗಿರುವ ಭಾಸ್ಕರ್ ಕೆ.ಎಂ. ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರುಗೊಳಿಸಿದೆ.
2022 ಜು.19 ರಂದು ಕಳಂಜದಲ್ಲಿ 8 ಮಂದಿ ಯುವಕರ ತಂಡ ಮಸೂದ್‌ರವರ ಮೇಲೆ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ಮಸೂದ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬAಧಿಸಿ 8 ಮಂದಿ ಆರೋಪಿಗಳನ್ನು ಬೆಳ್ಳಾರೆ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ಪ್ರಕರಣದ 8ನೇ ಆರೋಪಿಯಾಗಿರುವ ಭಾಸ್ಕರ ಕೆ.ಎಂ.ರವರಿಗೆ ಹೈಕೋರ್ಟ್ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿಯವರು ಆ.3 ರಂದು ಷರತ್ತುಬದ್ಧ ಜಾಮೀನು ಮಂಜೂರುಗೊಳಿಸಿದ್ದಾರೆ. ಆರೋಪಿ ಪರ ಹಿರಿಯ ವಕೀಲರಾದ ಅರುಣ್ ಶ್ಯಾಮ್ ಪುತ್ತೂರು ವಾದ ಮಂಡಿಸಿದ್ದರು. ವಕೀಲರಾದ ಸುಯೋಗ್ ಹೇರಳೆ ಹಾಗೂ ನಿಶಾಂತ್ ಕುಶಾಲಪ್ಪ ವಕಾಲತ್ತು ಹಾಕಿದ್ದರು.

LEAVE A REPLY

Please enter your comment!
Please enter your name here