ಪುತ್ತೂರು: ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು, ವಕೀಲರ ಸಂಘ ಪುತ್ತೂರು, ಇವರ ಆಶ್ರಯದಲ್ಲಿ ಶಾಲಾ ಶಿಕ್ಷಣ ಇಲಾಖೆ ಪುತ್ತೂರು ಅನಿಕೇತನ ಎಜುಕೇಶನಲ್ ಟ್ರಸ್ಟ್ ಪುತ್ತೂರು ಮತ್ತು ಮಾನವ ಕಳ್ಳ ಸಾಗಣಿಕೆ ತಡೆ ಘಟಕ ಸಂತ ಫಿಲೋಮಿನಾ ಕಾಲೇಜ್ ಇವರ ಸಹಯೋಗದೊಂದಿಗೆ ‘ಮಾನವ ಕಳ್ಳ ಸಾಗಣಿಕ ತಡೆ ದಿನಾಚರಣೆಯ ಪ್ರಯುಕ್ತ ಮಾಹಿತಿ ಕಾರ್ಯಗಾರವನ್ನು ಆ.3ರಂದು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷ ಮುಖ್ಯೋಪಾಧ್ಯಾಯಿನಿ ರೋಸಲಿನ್ ಲೋಬೋ ವಹಿಸಿ ಮಾನವ ಕಳ್ಳ ಸಾಗಣಿಕೆಯ ದುಷ್ಪರಿಣಾಮ ಹಾಗೂ ಅದನ್ನು ತಡೆಯುವ ವಿಧಾನಗಳ ಬಗ್ಗೆ ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ನೀಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ನವೀನ್ ವೇಗಸ್ ಮಾತನಾಡಿ “ಆಲಸ್ಯದಿಂದ ಯಾವುದೇ ಕೆಲಸಗಳು ಆಗುವುದಿಲ್ಲ. ಪ್ರತಿ ನಿತ್ಯ ನಾವು ಜಾಗೃತರಾಗಿರುವುದು ಬಹಳ ಮುಖ್ಯ” ಎಂದು ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿ ಸಂತ ಫಿಲೋಮಿನಾ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಭಾರತಿ ಎಸ್ ರೈ”ಮಕ್ಕಳು ಹೆತ್ತವರ ಸಂಪತ್ತು. ಈ ಸಂಪತ್ತನ್ನು ಹೆತ್ತವರು ಕಳೆದುಕೊಳ್ಳಲು ಬಯಸುವುದಿಲ್ಲ. ಪೋಷಕರು ಬಯಸುವುದು ಮಕ್ಕಳು ಗುಣವಂತರಾಗಬೇಕೆಂದು ವಿನ: ಹಣವಂತರಾಗಬೇಕೆಂದು ಬಯಸುವುದಿಲ್ಲ. ನಾವೆಲ್ಲ ಸದೃಢರಾಗಬೇಕಾದರೆ ನಮ್ಮಲ್ಲಿ ಸದೃಢ ಮನಸ್ಸಿರಬೇಕು ಎಂದು ಮಾನವ ಕಳ್ಳ ಸಾಗಣಿಕೆಯ ತಡೆಯ ಅನಿವಾರ್ಯತೆಯ ಕುರಿತು ವಿದ್ಯಾರ್ಥಿನಿಯರಿಗೆ ಅರಿವು ಮೂಡಿಸಿದರು.
ಅನಿಕೇತನ ಎಜುಕೇಶನ್ ಟ್ರಸ್ಟ್ ಪುತ್ತೂರು ಇದರ ಆಡಳಿತ ಟ್ರಸ್ಟಿ ಹಾಗೂ ವಕೀಲ ಕೃಷ್ಣಪ್ರಸಾದ್ ನಡ್ಸಾರ್ ಪ್ರಾಸ್ತವಿಕವಾಗಿ ಮಾತನಾಡಿದರು. ವಕೀಲೆ ಹಾಗೂ ಶಾಲಾ ಹಿರಿಯ ವಿದ್ಯಾರ್ಥಿನಿ ಅಕ್ಷತಾ ಜಯಕುಮಾರಿ, ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕಿ ಹರಿಪ್ರಸಾದ್, ಸಂತ ಫಿಲೋಮಿನಾ ಪದವಿ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ| ನೋಬರ್ಟ್ ಮಸ್ಕರೇನ್ಹಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿ ಶೈಲ ಮಸ್ಕರೇನ್ಹಸ್ ಸ್ವಾಗತಿಸಿ, ಅನೀಶ ಡಿ ಸಿಲ್ವ ವಂದಿಸಿದರು. ಶಿಕ್ಷಕಿ ಡೋರಿನ್ ವಿಲ್ಮ ಲೋಬೊ ಕಾರ್ಯಕ್ರಮ ನಿರೂಪಿಸಿದರು.