ತಂದೆಯ ರಾಜಕೀಯ ಜೀವನ ಪುತ್ತೂರಿನಿಂದಲೇ ಆರಂಭವಾಗಿತ್ತು-ದರ್ಶನ್ ಧ್ರುವನಾರಾಯಣ
ಪುತ್ತೂರು: ಲೋಕಸಭಾ ಸದಸ್ಯರಾಗಿದ್ದ ದಿ.ಆರ್.ಧ್ರುವನಾರಾಯಣ ಅವರ 62ನೇ ವರ್ಷದ ಹುಟ್ಟು ಹಬ್ಬದ ಸ್ಮರಣಾರ್ಥ ಆರ್.ಧ್ರುವನಾರಾಯಣ ಅಭಿಮಾನಿ ಬಳಗದ ವತಿಯಿಂದ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು ಮತ್ತು ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಇದರ ಸಹಯೋಗದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಆ.5ರಂದು ನಡೆಯಿತು.
ತಂದೆಯ ರಾಜಕೀಯ ಜೀವನ ಪುತ್ತೂರಿನಿಂದಲೇ ಆರಂಭವಾಗಿತ್ತು: ಶಿಬಿರವನ್ನು ದಿ.ಧ್ರುವನಾರಾಯಣ ಅವರ ಪುತ್ರ, ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ ಅವರು, ತಂದೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ರಕ್ತದಾನ ಶಿಬಿರ ಉದ್ಘಾಟಿಸಿದರು. ಬಳಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ತನ್ನ ತಂದೆ ರಾಜಕೀಯ ಜೀವನವನ್ನು ಜನಸೇವೆಗಾಗಿ ಮುಡಿಪಾಗಿಟ್ಟವರು. ಪುತ್ತೂರಿನೊಂದಿಗೆ ಅವರ ಬಾಂಧವ್ಯವನ್ನು ಇಲ್ಲಿನ ಹಿರಿಯ ಕಾಂಗ್ರೆಸಿಗರು ನೆನಪಿಸಿಕೊಳ್ಳುತ್ತಿರುವುದು ನಮಗೆ ಹೆಮ್ಮೆ. ಅವರ ರಾಜಕೀಯ ವೃತ್ತಿಜೀವನ ಪುತ್ತೂರಿನಲ್ಲಿಯೇ ಆರಂಭವಾಗಿತ್ತು. ಓರ್ವ ಸಾಮಾನ್ಯ ಕಾರ್ಯಕರ್ತನಾಗಿ ಪುತ್ತೂರಿಗೆ ಆಗಮಿಸಿದ್ದ ಅವರು ವಿನಯ ಕುಮಾರ್ ಸೊರಕೆ ಅವರ ಗೆಲುವಿಗಾಗಿ ದುಡಿದಿದ್ದರು ಎಂದರು. ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಶಾಸಕ ಅಶೋಕ್ ಕುಮಾರ್ ರೈ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಸಂದರ್ಭೋಚಿತ ಮಾತನಾಡಿದರು.
ಸನ್ಮಾನ: ಶಾಸಕ ಅಶೋಕ್ ಕುಮಾರ್ ರೈ, ದರ್ಶನ್ ಧ್ರುವನಾರಾಯಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿನ ಸೇವೆಗಾಗಿ ರವೂಫ್ ಸಾಲ್ಮರ, ಸೀತಾರಾಮ ಗೌಡ ನರಿಮೊಗರು, ಎಂ.ಬಿ.ಇಸ್ಮಾಯಿಲ್, ಮಹಮ್ಮದ್ ಆಲಿ ಪರ್ಲಡ್ಕ, ಮೋನು ಬಪ್ಪಳಿಗೆ, ಬಿ.ಟಿ.ಮಹೇಶ್ಚಂದ್ರ ಸಾಲಿಯಾನ್, ಇಫಾಸ್ ಬನ್ನೂರು ಅವರನ್ನು ಸನ್ಮಾನಿಸಲಾಯಿತು.ಫ್ಲಾನ್ಸಿ ಸುವಾರಿಸ್ ಅವರು ಪ್ರಥಮ ರಕ್ತದಾನ ಮಾಡಿದರು.ಇದೇ ಸಂದರ್ಭದಲ್ಲಿ ಕಲಾವಿದ ಯೋಗೀಶ್ ಕಡಂದಲೆ ಅವರು ದಿ.ಧ್ರುವನಾರಾಯಣ ಅವರ ಚಿತ್ರ ಬಿಡಿಸಿ ಗಮನ ಸೆಳೆದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾವೇರಪ್ಪ, ಮಾಜಿ ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್, ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ವಿಟ್ಲ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ನಗರಸಭಾ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಮಾಜಿ ಪುರಸಭಾ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಜಿಲ್ಲಾ ಸೇವಾದಳದ ಅಧ್ಯಕ್ಷ ಜೋಕಿಂ ಡಿಸೊಜ, ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಲ್ಯಾನ್ಸಿ ಮಸ್ಕರೇನಸ್, ನಗರಸಭಾ ಸದಸ್ಯ ರಾಬಿನ್ ತಾವ್ರೋ, ಮಾಜಿ ಸದಸ್ಯ ಅನ್ವರ್ ಖಾಸಿಂ, ಗ್ರಾ.ಪಂ ಸದಸ್ಯ ತೌಸೀಫ್ ಉಪ್ಪಿನಂಗಡಿ, ಬ್ಲಾಕ್ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಬನ್ನೂರು, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಬಶೀರ್ ಪರ್ಲಡ್ಕ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಹನೀಫ್ ಪುಂಚತ್ತಾರ್, ಗಣೇಶ್ ನೆಲ್ಲಿಕಟ್ಟೆ, ರವೂಫ್ ಸಾಲ್ಮರ ಮತ್ತಿತರರು ಉಪಸ್ಥಿತರಿದ್ದರು. ರಾಜ್ಯ ಎನ್‌ಎಸ್‌ಯುಐ ಉಪಾಧ್ಯಕ್ಷ ಫಾರೂಕ್ ಬಯಬ್ಬೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಇಸಾಕ್ ಸಾಲ್ಮರ ವಂದಿಸಿದರು. ಬೆಳಿಗ್ಗೆ ಬೀರಮಲೆಯಲ್ಲಿರುವ ಪ್ರಜ್ಞಾ ಆಶ್ರಮದಲ್ಲಿ ಬಟ್ಟೆ ವಿತರಣೆ ಮಾಡಲಾಯಿತು.