ದರ್ಬೆ ಬೈಪಾಸ್: ಜೆಸಿಬಿ, ಆಲ್ಟೋ ಢಿಕ್ಕಿ

0

ಪುತ್ತೂರು: ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ದರ್ಬೆ ಬೈಪಾಸ್ ಫಾ‌.ಪತ್ರಾವೋ ಸರ್ಕಲ್ ಬಳಿ ಜೆಸಿಬಿ ಹಾಗೂ ಆಲ್ಟೋ ಕಾರಿನ ನಡುವೆ ಢಿಕ್ಕಿ ಸಂಭವಿಸಿದ ಘಟನೆ ಆ.6 ರಂದು ಬೆಳಿಗ್ಗೆ 11 ಗಂಟೆಗೆ ನಡೆದಿದೆ.


ಪುತ್ತೂರಿನಿಂದ ಮೊಟ್ಟೆತ್ತಡ್ಕ ಕಡೆಗೆ ಮನೋಜ್ ಎಂಬವರು ಚಲಾಯಿಸುತ್ತಿದ್ದ ಆಲ್ಟೋ ಕಾರಿ(ಕೆಎ53ಪಿ6073)ಗೆ ಜೆಸಿಬಿ(ಕೆಎ13ಪಿ0342) ಎದುರಿನ ಭಾಗ ಹಠಾತ್ತನೆ ತಾಗುವ ಮೂಲಕ ಕಾರಿನ ಮುಂಭಾಗ ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಪೋಲಿಸರು ಆಗಮಿಸಿರುತ್ತಾರೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here