ಶಾಂತಿನಗರ ಶಾಲೆಯಲ್ಲಿ ‘ಆಟಿದ ಪೊಲಬು’ಕಾರ್ಯಕ್ರಮ

0

ನೆಲ್ಯಾಡಿ: ಗೋಳಿತ್ತಟ್ಟು ಗ್ರಾಮದ ಶಾಂತಿನಗರ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ‘ಆಟಿದ ಪೊಲಬು’ಕಾರ್ಯಕ್ರಮ ಆ.5ರಂದು ನಡೆಯಿತು.


ಹಿರಿಯ ಜ್ಯೋತಿಷಿ, ಶಾಲಾ ದಾನಿ ಕೊರಗಪ್ಪ ಮುಗೇರ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಯಾಗಿದ್ದ ತುಳು ಸಾಹಿತಿ, ತುಳು ಪಠ್ಯ ಪುಸ್ತಕ ರಚನಾ ಸಮಿತಿ ಸದಸ್ಯೆ, ಶಿಕ್ಷಕಿ ಸರಿತಾ ಜನಾರ್ದನರವರು ಮಾತನಾಡಿ, ಸರ್ವಜನಾಂಗದ ಶಾಂತಿಯ ತೋಟವಾಗಿರುವ ಸರ್ಕಾರಿ ಶಾಲೆಯಲ್ಲಿ ಸಾರ್ವಜನಿಕರನ್ನು ಸೇರಿಸಿಕೊಂಡು ನಮ್ಮ ನಾಡಿನ ಸಂಸ್ಕೃತಿಯನ್ನು ಉಳಿಸುವ ದೃಷ್ಟಿಯಿಂದ ಉತ್ಸವದ ರೀತಿಯಲ್ಲಿ ಆಟಿ ಆಚರಣೆ ಮಾಡುತ್ತಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದರು. ಆಟಿ ತಿಂಗಳ ಹಿಂದಿನ ಜೀವನ ಪದ್ಧತಿ, ಆಚರಣೆಗಳು, ಜನಪದ ಸಾಹಿತ್ಯದೊಂದಿಗಿನ ಗಾದೆಗಳು, ಅದು ಹುಟ್ಟಲು ಕಾರಣವನ್ನು ಅವರು ತಿಳಿಸಿದರು.


ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಗೌಡ ಪಠೇರಿ, ಉಪಾಧ್ಯಕ್ಷೆ ಶೋಭಲತಾ, ಸದಸ್ಯರಾದ ಬಾಲಕೃಷ್ಣ ಅಲೆಕ್ಕಿ, ಹೇಮಲತಾ, ಶಾಂತಿನಗರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರತಾಪ್‌ಚಂದ್ರ ರೈ ಕುದ್ಮಾರುಗುತ್ತು, ಬಜತ್ತೂರು ಕ್ಲಸ್ಟರ್ ಸಿಆರ್‌ಪಿ ಮಂಜುನಾಥ ಕೆ.ವಿ., ಕಡಬ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಮಲ್‌ಕುಮಾರ್ ನೆಲ್ಯಾಡಿ, ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಲೀಲಾ, ಎಸ್‌ಡಿಎಂಸಿ ಅಧ್ಯಕ್ಷ ಪುರುಷೋತ್ತಮ ಗುರುಂಪು, ಉಪಾಧ್ಯಕ್ಷೆ ಮೀನಾಕ್ಷಿ, ಶಾಲಾ ಪೋಷಕ ಮಹಮ್ಮದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಭಟ್ ಕಾಂಚನ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಮುಖ್ಯಶಿಕ್ಷಕ ಪ್ರದೀಪ್ ಬಾಕಿಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಶ್ ಆಲಂತಾಯ ವಂದಿಸಿದರು. ಜನಾರ್ದನ ಗೌಡ ಬರಮೇಲು ಕಾರ್ಯಕ್ರಮ ನಿರೂಪಿಸಿದರು.


ಬೆಳಿಗ್ಗೆಯಿಂದಲೇ ಸಾರ್ವಜನಿಕರಿಗೆ ವಿವಿಧ ಗ್ರಾಮೀಣ ಕ್ರೀಡೆಗಳನ್ನು ನಡೆಸಲಾಯಿತು. 250ಕ್ಕಿಂತಲೂ ಹೆಚ್ಚು ಗ್ರಾಮಸ್ಥರು ಭಾಗವಹಿಸಿದ್ದರು. ತುಳುನಾಡಿನ ಪ್ರಾಚೀನ ವಸ್ತುಗಳ ಪ್ರದರ್ಶನ, 125 ಬಗೆಯ ವಿವಿಧ ತಿಂಡಿ ತಿನಸುಗಳ ಪ್ರದರ್ಶನ ಹಾಗೂ ಸಹಭೋಜನ ವ್ಯವಸ್ಥೆ ಮಾಡಲಾಗಿತ್ತು. ಸ್ತ್ರೀಶಕ್ತಿ ಸಂಘ ಹಾಗೂ ಊರಿನ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಮಂಜುನಾಥ ಮಣಕವಾಡ, ವೀಕ್ಷಿತಾ, ತಾರಾ, ಪ್ರಮೀಳಾ, ಅಂಗನವಾಡಿ ಶಿಕ್ಷಕಿ ರೀತಾಕ್ಷಿ, ಸಹಾಯಕಿ ಶೋಭಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here