ಪೆರುವಾಯಿ: ಅತ್ಯಾಚಾರಗೊಳಗಾದ ಸಂತ್ರಸ್ಥೆ ಮನೆಗೆ ಶಾಸಕ ರೈ ಭೇಟಿ – “ಧೈರ್ಯವಾಗಿರು ತಾಯಿ ನಾವಿದ್ದೇವೆ ಕುಟುಂಬಕ್ಕೆ ಶಾಸಕರಿಂದ ಸಾಂತ್ವನ”

0

ಪುತ್ತೂರು: ನನ್ನ ಕ್ಷೇತ್ರದಲ್ಲಿ ನಡೆಯಬಾರದ ಘಟನೆ ನಡೆದಿದೆ. ಈ ಬಗ್ಗೆ ನನಗೆ ಅಪಾರ ದುಖವಿದೆ, ತಪ್ಪು ಮಾಡಿದವರಿಗೆ ಕಾನೂನಿನಡಿ ಶಿಕ್ಷೆ ಆಗಿಯೇ ಅಗುತ್ತದೆ. ನೀನು ಧೈರ್ಯವಾಗಿರು ತಾಯಿ ನಿಮ್ಮ ಜೊತೆ ನಾವಿದ್ದೇವೆ ಇದು ಸಾಮೂಹಿಕ ಅತಾಚಾರಕ್ಕೊಳಗಾದ ಪೆರುವಾಯಿ ಗ್ರಾಮದ ದಲಿತ ಬಾಲಕಿಗೆ ಶಾಸಕರು ನೀಡಿದ ಸಾಂತ್ವನದ ಮಾತುಗಳು.

ಆ.7ರಂದು ಸಾಮೂಹಿಕ ಅತ್ಯಾಚಾರಕ್ಕೊಳಗಾದ ದಲಿತ ಬಾಲಕಿ ಮನೆಗೆ ಭೇಟಿ ನೀಡಿದ ಶಾಸಕರ ನೇತೃತ್ವದ ಕಾಂಗ್ರೆಸ್ ಮುಖಂಡರ ನಿಯೋಗ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸವನ್ನು ಮಾಡಿದರು. ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡ ಶಾಸಕರು ಕುಟುಂಬದ ನೋವನ್ನು ಆಲಿಸಿ ಒಂದು ಕ್ಷಣ ಭಾವುಕರಾದರು. ಬಾಲಕಿ ಮನೆ ಶಿಥಿಲಾವಸ್ಥೆ ಮತ್ತು ಮನೆಗೆ ತೆರಳಲು ದಾರಿ ಇಲ್ಲದೇ ಇರುವ ವಿಚಾರವನ್ನು ಸ್ಥಳೀಯರು ಶಾಸಕರ ಗಮನಕ್ಕೆ ತಂದರು. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಕಾನೂನು ಪ್ರಕಾರವೇ ಅದು ನಡೆಯಲಿದೆ. ತಪ್ಪಿತಸ್ಥರಿಗೆ ಖಂಡಿತವಾಗಿಯೂ ಶಿಕ್ಷೆಯಾಗಲಿದೆ ಎಂದು ಶಾಸಕರು ಹೇಳಿದರು.
ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ, ಕೆಪಿಸಿಸಿ ಸದಸ್ಯ ಎಂ ಎಸ್ ಮಹಮ್ಮದ್ , ಬ್ಲಾಕ್ ಕಾರ್ಯದರ್ಶಿ ಉಮಾನಾಥ ಶೆಟ್ಟಿ ಪೆರ್ನೆ, ಮಾಜಿ ಬ್ಲಾಕ್ ಅಧ್ಯಕ್ಷ ಮುರಳೀಧರ್ ರೈ ಮಠಂತಬೆಟ್ಟು, ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್, ಪೆರುವಾಯಿ ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ, ಉಪಾಧ್ಯಕ್ಷೆ ನೆಬಿಸಾ, ಕಾಂಗ್ರೆಸ್ ಮುಖಂಡ ಪ್ರಹ್ಲಾದ್ ಉಪ್ಪಿನಂಗಡಿ, ಪುತ್ತೂರು ನಗರ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಖಿಲ್ ಸಾಮೆತ್ತಡ್ಕ, ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here