ವಿಟ್ಲ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ನೆರೆಮನೆಯವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮಹಿಳೆಯೋರ್ವರು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿ, ವಿಟ್ಲ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.
ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಬಳಬೆಟ್ಟು ಕಾಂಪ್ಲೆಕ್ಸ್ ನಲ್ಲಿ ವಾಸವಿರುವ ಜೈನುಲ್ ಅಬೀದ್ ರವರ ಪತ್ನಿ ಆಯಿಶತ್ ಮುಬೀನಾ ರವರು ದೂರು ನೀಡಿದವರಾಗಿದ್ದಾರೆ. ಅದೇ ಕಾಂಪ್ಲೆಕ್ಸ್ ನಲ್ಲಿ ವಾಸವಿರುವ ಆರೋಪಿಗಳಾದ ಹನ್ನತ್, ಆಕೆಯ ಸಹೋದರಿ, ಆಕೆಯ ತಾಯಿ, ಹಾಗೂ ಹನ್ನತ್ ಮಾವ ಪ್ರಕರಣದ ಆರೋಪಿಯಾಗಿದ್ದಾರೆ.
ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು ಕಾಂಪ್ಲೆಕ್ಸ್ ನಲ್ಲಿ ವಾಸವಾಗಿರುವ ಮುಬೀನಾ ರವರು ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ನಾನು ನನ್ನ ತವರು ಮನೆಗೆ ಹೋಗಲು ಹೊರಡುತ್ತಿದ್ದ ವೇಳೆ ನೆರೆ ಮನೆಯ ನಿವಾಸಿ ಹನ್ನತ್ ರವರು ನನ್ನ ಮಗಳಾದ ಮಹದಿಗೆ ಕೆಟ್ಟ ಶಬ್ದಗಳಿಂದ ಬೈಯುತ್ತಿದ್ದರು. ಈ ಬಗ್ಗೆ ವಿಚಾರಿಸಿದಾಗ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವುದಾಗಿ ಎಂದು ಜೀವ ಬೆದರಿಕೆ ಹಾಕಿ ಹನ್ನತ್ ರವರ ಮಾವ ಎದೆಗೆ ಕೈ ಹಾಕಿ ಬುರ್ಕಾ ವನ್ನು ಕೈಯಿಂದ ಹರಿದು ಹಾಕಿದ್ದು ಆ ಸಮಯ ನಾನು ನೆಲಕ್ಕೆ ಬಿದ್ದಾಗ ಹೊಟ್ಟೆಗೆ ಹನ್ನತ್ ಮತ್ತು ಆಕೆಯ ತಾಯಿ ಕಾಲಿನಿಂದ ತುಳಿದುದರಿಂದ ಗಾಯಗೊಂಡಿರುವ ನಾನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಈ ಬಗ್ಗೆ ವಿಟ್ಲ ಠಾಣಾ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಮುಬೀನಾರವರು ತಿಳಿಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.