ಆ.14 ರಂದು ಪುತ್ತಿಲ ಪರಿವಾರದಿಂದ ” ನಮ್ಮ ನಡೆ ನ್ಯಾಯದ ಕಡೆ” ಪುತ್ತೂರಿನಲ್ಲಿ ಬೃಹತ್ ಕಾಲ್ನಡಿಗೆ ಜಾಥಾ -ಸೌಜನ್ಯ ಪ್ರಕರಣವನ್ನು ಸರಕಾರ ಮರುತನಿಖೆ ಮಾಡಬೇಕು, ನೈಜ್ಯ ಅರೋಪಿಗಳನ್ನು ಬಂಧಿಸುವಂತೆ ಪ್ರತಿಭಟನೆ

0

ಪುತ್ತೂರು: 11 ವರ್ಷಗಳ ಹಿಂದೆ ಅತ್ಯಾಚಾರ ನಡೆದು ಕೊಲೆಯಾದ ಸೌಜನ್ಯ ಪ್ರಕರಣಕ್ಕೆ ನ್ಯಾಯ ಒದಗಿಸಲು ಸರಕಾರ ಮರುತನಿಖೆ ಕೈಗೊಳ್ಳಬೇಕು ಹಾಗೂ ನೈಜ ಆರೋಪಿಗಳ ಬಂಧನವಾಗಬೇಕೆಂದು ಒತ್ತಾಯಿಸಿ ಆ. 14 ರಂದು ಪುತ್ತಿಲ ಪರಿವಾರದ ವತಿಯಿಂದ ಪುತ್ತೂರಿನಲ್ಲಿ ‘ನಮ್ಮ ನಡೆ ನ್ಯಾಯದ ಕಡೆ’ ಬೃಹತ್ ಕಾಲ್ನಾಡಿಗೆ ಜಾಥ ಹಾಗೂ ರಸ್ತೆ ತಡೆ ನಡೆಯಲಿದೆ.

ಆ.8 ರಂದು ಪುತ್ತಿಲ ಪರಿವಾರ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಆಗಸ್ಟ್ 14ರ ಸೋಮವಾರದಂದು ಬೆಳಿಗ್ಗೆ 9.30 ಕ್ಕೆ ದರ್ಬೆ ವೃತ್ತದಿಂದ ಕಾಲ್ನಡಿಗೆ ಜಾಥ ಪುತ್ತೂರು ಬಸ್ ನಿಲ್ದಾಣದವರೆಗೆ ತೆರಳಿ ಅಲ್ಲಿ ರಸ್ತೆ ತಡೆ ಮತ್ತು ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ.
ಆ.8 ರ ಪೂರ್ವಭಾವಿ ಸಭೆಯಲ್ಲಿ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಮಾರ್ತಾ , ನಗರ ಅಧ್ಯಕ್ಷರಾದ ಅನಿಲ್ ತೆಂಕಿಲ, ಪ್ರಧಾನ ಕಾರ್ಯದರ್ಶಿ ಉಮೇಶ್ ವೀರಮಂಗಲ, ಪ್ರಮುಖರಾದ ಸುನೀಲ್ ಬೋರ್ಕರ್, ರವಿ ಕುಮಾರ್ ಕೆದಂಬಾಡಿ ಮಠ, ಪ್ರವೀಣ್ ಶೆಟ್ಟಿ ತಿಂಗಳಾಡಿ, ಕೃಷ್ಣಪ್ರಸಾದ್ ಶೆಟ್ಟಿ, ಚಂದ್ರಹಾಸ್ ಈಶ್ವರಮಂಗಲ, ಪ್ರೇಮ್ ರಾಜ್ ಆರ್ಲಪದವು ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.

ಸಹೋದರಿ ಸೌಜನ್ಯಳಿಗೆ ನ್ಯಾಯಕ್ಕಾಗಿ 1 ಗಂಟೆ ಬಂದ್ ಮಾಡುವಂತೆ ಮನವಿ: ಪುತ್ತೂರು ಪೇಟೆಯ ವರ್ತಕರು ಸಹೋದರಿ ಸೌಜನ್ಯಳ ಸಾವಿಗೆ ನ್ಯಾಯಕ್ಕಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಅಂದು ಬೆಳಿಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ಸ್ವಯಂಪ್ರೇರಿತ ಬಂದ್ ಮಾಡುವಂತೆ ಪುತ್ತಿಲ ಪರಿವಾರ ವತಿಯಿಂದ ಪುತ್ತೂರಿನ ಸಮಸ್ತ ವ್ಯಾಪಾರಸ್ಥರಲ್ಲಿ ಮನವಿ ಮಾಡಿದೆ.

LEAVE A REPLY

Please enter your comment!
Please enter your name here