ಆ.13: ಪುಣಚ ಗ್ರಾಮ ವಿಕಾಸ ಸಮಿತಿ ಮತ್ತು ಕೇಪು ಗ್ರಾಮ ಸಮಿತಿಗಳ ಆಶ್ರಯದಲ್ಲಿ ಉಚಿತ ನಾಡಿ ಪರೀಕ್ಷೆ, ಆರೋಗ್ಯ ತಪಾಸಣೆ

0

ಪುಣಚ: ಗ್ರಾಮ ವಿಕಾಸ ಸಮಿತಿ ಪುಣಚ ಮತ್ತು ಕೇಪು ಗ್ರಾಮಗಳ ಜಂಟಿ ಆಶ್ರಯದಲ್ಲಿ ಉಚಿತ ನಾಡಿ ಪರೀಕ್ಷೆ ಹಾಗೂ ಆರೋಗ್ಯ ತಪಾಸಣಾ ಶಿಬಿರವು ಪುಣಚ ಪರಿಯಾಲ್ತಡ್ಕ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ.13ರಂದು ನಡೆಯಲಿದೆ.


ಕಾರ್ಯಕ್ರಮದಲ್ಲಿ ಪಂಚಗವ್ಯ ಆಯುರ್ವೇದ ಔಷಧಿಗಳ ಹಾಗೂ ಗವ್ಯೋತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ.
ಗೋವಿನತೋಟ ರಾಧಾ ಸುರಭಿ ಗೋ ಮಂದಿರದ ಭಕ್ತಿ ಭೂಷಣ್ ಜಿ., ಮಂಗಳೂರಿನ ವಿನಯ ರಾಘವೇಂದ್ರ, ಸತೀಶ್ ಮುಲ್ಕಿ, ಗುರುಪುರ ಕೈಕಂಬದ ಮನೋಜಿತ್ ಮುಂತಾದವರು ಭಾವಹಿಸಲಿದ್ದು ನಾಡಿ ಪರೀಕ್ಷೆಯ ಮಾಹಿತಿ ಹಾಗೂ ಆರೋಗ್ಯ ತಪಾಸಣೆ ನೀಡಲಿದ್ದಾರೆ. ಇದರ ಸದುಪಯೋಗವನ್ನು ಪಡೆಯುವಂತೆ ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷ ವಿಶ್ವನಾಥ ರೈ ಪರಿಯಾಲು, ಕಾರ್ಯದರ್ಶಿ ವಿನಯಚಂದ್ರ ಹಾಗೂ ಸದಸ್ಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here